Panampuli: ಕೊಡಗಿನಲ್ಲಿ ಆದಾಯ ತರುವ ಪಣಂಪುಳಿ: ಇದರ ಬಳಕೆ ಹೇಗೆ?
ಮಡಿಕೇರಿ, ಜೂನ್ 25: ಇವತ್ತು ಕೊಡಗು ಬದಲಾಗಿದೆ ವಾಣಿಜ್ಯ ಬೆಳೆಗಳು, ಪ್ರವಾಸೋದ್ಯಮ, ಸಣ್ಣಪುಟ್ಟ ಕೈಗಾರಿಕೆಗಳು, ವ್ಯಾಪಾರ ವಹಿವಾಟುಗಳ ಹೆಚ್ಚಾಗಿವೆ. ಹೀಗಾಗಿ ಆದಾಯದ ಮೂಲಗಳು ಹೆಚ್ಚಾಗಿವೆ. ಆದರೆ ಮೂರ್ನಾಲ್ಕು ದಶಕಗಳ ಹಿಂದಕ್ಕೆ ಹೋದರೆ ಅವತ್ತು ಇವತ್ತಿನಷ್ಟು ಆದಾಯದ ಮೂಲಗಳು ಇರಲಿಲ್ಲ. ಹೀಗಾಗಿ ಹೆಚ್ಚಿನವರು ತಮ್ಮ ಸುತ್ತ ಮುತ್ತ ದೊರೆಯುವ ಕಾಡು ಉತ್ಪನ್ನಗಳನ್ನು ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು.
ಬೇಸಿಗೆಯಲ್ಲಿ ಜೇನು ಸೇರಿದಂತೆ ದೂಪ, ಸೀಗೆ ಮೊದಲಾದ ಉತ್ಪನ್ನಗಳನ್ನು ಕಾಡಿನಿಂದ ಸಂಗ್ರಹಿಸಿ ತಂದು ಮಾರಾಟ ಮಾಡಿದರೆ, ಮಳೆಗಾಲದಲ್ಲಿ ಕಾಡು, ತೋಟಗಳ ನಡುವೆ ಫಸಲು ಬಿಡುತ್ತಿದ್ದ ಪಣಂಪುಳಿ ಆದಾಯ ತಂದುಕೊಡುತ್ತಿತ್ತು. ಇದನ್ನು ಬೇರೆಡೆ ಉಪ್ಪಾಗೆ ಎಂದು ಕರೆದರೆ ಕೊಡಗಿನಲ್ಲಿ ಪಣಂಪುಳಿ ಎಂದೇ ಕರೆಯಲಾಗುತ್ತಿದೆ. ಹಿಂದೆ ಕಾಡಿನಲ್ಲಿ ಬಹುಬಗೆಯ ಪಣಂಪುಳಿ ಮರಗಳು ಕಂಡು ಬರುತ್ತಿದ್ದವಾದರೂ ಈಗ ಅದರ ಸಂಖ್ಯೆ ಕಡಿಮೆಯಾಗಿದೆ. ಆದರೆ ಜಿಲ್ಲೆಯಲ್ಲಿ ಪಣಂಪುಳಿ ಹಣ್ಣಿನಿಂದ ತಯಾರು ಮಾಡುವ ದ್ರವರೂಪದ ಕಾಚಂಪುಳಿಗೆ ಮಾತ್ರ ಬೇಡಿಕೆ ಇದ್ದೇ ಇದೆ.

ಕೊಡಗಿನವರು ಮಾಂಸಹಾರಿಗಳಾಗಿರುವುದರಿಂದ ಅದರಲ್ಲೂ ಹಂದಿ ಮಾಂಸವನ್ನು ಹೆಚ್ಚಾಗಿ ಸೇವಿಸುವುದರಿಂದ ಅದಕ್ಕೆ ರುಚಿ ಕೊಡಲು ಕಾಚಂಪುಳಿಯನ್ನು ಹೊರತು ಪಡಿಸಿದರೆ ಬೇರೆ ಯಾವುದರಿಂದಲೂ ಸಾಧ್ಯವಿಲ್ಲವಾಗಿದೆ. ಜತೆಗೆ ಇಲ್ಲಿನವರು ಇನ್ನಿತರ ಮೀನು, ಮಾಂಸಗಳ ಅಡುಗೆಯಲ್ಲಿ ಹುಳಿ ಪದಾರ್ಥವಾಗಿ ಇದರ ಬಳಕೆ ಮಾಡುತ್ತಿರುವುದು ವಿಶೇಷವಾಗಿದೆ. ಹೆಚ್ಚಿನವರು ಮುಂಗಾರು ಆರಂಭವಾಗುತ್ತಿದ್ದಂತೆಯೇ ಪಣಂಪುಳಿ ಹಣ್ಣನ್ನು ಸಂಗ್ರಹಿಸಿ ಅದರ ಸಿಪ್ಪೆಯನ್ನು ಒಣಗಿಸಲು, ಮತ್ತು ರಸವನ್ನು ಕುದಿಸಿ ಕಾಚಂಪುಳಿಯನ್ನು ತಯಾರು ಮಾಡಲು ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಾರೆ.
ಉಪ ಆದಾಯದ ಕಾಡು ಉತ್ಪನ್ನ
ಈ ಪಣಂಪುಳಿ ಮಳೆಗಾಲದಲ್ಲಿ ಕೆಲವರಿಗೆ ಉಪ ಆದಾಯವನ್ನು ತಂದು ಕೊಡುವುದರಿಂದ ಅದರತ್ತ ಆಸಕ್ತಿ ವಹಿಸುತ್ತಾರೆ. ಕಾಡಿನಲ್ಲಿ ಅಥವಾ ತೋಟದ ನಡುವೆ ಇರುವ ಗಿಡಗಳು ಸುಮಾರು 20 ರಿಂದ 30 ಮೀಟರ್ ನಷ್ಟು ಎತ್ತರ ಬೆಳೆಯುತ್ತದೆ. ಹೂಗಳು ಕೆಂಪು ಮಿಶ್ರಿತ ಹಳದಿ ಬಣ್ಣದಿಂದ ಕೂಡಿರುತ್ತದೆ. ಹಣ್ಣಿನ ಮೇಲ್ಭಾಗ 6 ಹಾಗೂ 8 ಗೆರೆಗಳಿಂದ ಕೂಡಿ, ಉಬ್ಬು-ತಗ್ಗುಗಳನ್ನು ಒಳಗೊಂಡಿರುತ್ತದೆ. ಕಾಯಿ ಹಸಿರಾಗಿದ್ದು ಹಣ್ಣಾಗುತ್ತಿದ್ದಂತೆಯೇ ಹಣ್ಣು ಹಳದಿ ಬಣ್ಣಕ್ಕೆ ತಿರುಗುತ್ತದೆ. ನಂತರ ಉದುರುತ್ತದೆ.
ಇನ್ನು ಹಣ್ಣಿನಲ್ಲಿ ಸುಮಾರು ಆರರಿಂದ ಎಂಟು ಬೀಜಗಳಿರುತ್ತವೆ. ಮಾರ್ಚ್‌ನಲ್ಲಿ ಹೂ ಬಿಟ್ಟು ಜೂನ್ ಜುಲೈ ತಿಂಗಳಲ್ಲಿ ಹಣ್ಣಾಗುತ್ತದೆ. ಬಿದ್ದ ಅಥವಾ ಕೊಯ್ಲು ಮಾಡಿದ ಹಣ್ಣು ಕಾಯಿಗಳನ್ನು ಅದರ ಬೀಜಗಳನ್ನು ತೆಗೆದು ಹೆಣೆದ ಬಿದಿರುವಿನ ತಟ್ಟಿ, ಕಬ್ಬಿಣದ ಪರದೆ ಮೇಲೆ ಬೆಂಕಿಯ ಶಾಖದಿಂದ ಒಣಗಿಸಲಾಗುತ್ತದೆ. ಹೀಗೆ ಒಣಗಿಸಿದ ಸಿಪ್ಪೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇದನ್ನು ಕೆಲವರು ಮನೆಮನೆಗೆ ತೆರಳಿ ಖರೀದಿಸಿದರೆ, ಉಳಿದಂತೆ ನಗರಗಳಲ್ಲಿ ವ್ಯಾಪಾರಸ್ಥರು ಖರೀದಿ ಮಾಡುತ್ತಾರೆ.

ಪಣಂಪುಳಿಯಿಂದ ಕಾಚಂಪುಳಿ ತಯಾರಿ
ಇನ್ನು ಇದರಿಂದ ತಯಾರು ಮಾಡುವ ಕಾಚಂಪುಳಿಗೆ ಹೆಚ್ಚಿನ ಬೆಲೆಯಿದೆ. ಆದರೆ ಇದನ್ನು ತಯಾರು ಮಾಡುವುದು ಅಷ್ಟು ಸುಲಭವಲ್ಲ. ಮರದಿಂದ ನೆಲಕ್ಕೆ ಉದುರಿದ ಅಥವಾ ಕೊಯ್ಲು ಮಾಡಿದ ಹಣ್ಣುಗಳನ್ನು ಶೇಖರಿಸಿ, ತೊಳೆದು ಅದನ್ನು ಬಿದಿರಿನ ದೊಡ್ಡದಾದ ಬುಟ್ಟಿಯಲ್ಲಿ ಹಾಕಿ ಅದರ ರಸ ಸುರಿದು ಸಂಗ್ರಹವಾಗಲು ಮಣ್ಣಿನ ಅಥವಾ ಪ್ಲಾಸ್ಟಿಕ್ ನ ಪಾತ್ರೆಗಳನ್ನು ಕೆಳಗೆ ಇಡಲಾಗುತ್ತದೆ. ರಸವೆಲ್ಲವೂ ಅದರಲ್ಲಿ ಸಂಗ್ರಹವಾದ ಬಳಿಕ ಅದನ್ನು ಒಂದು ಮಣ್ಣಿನ ಮಡಿಕೆಯಲ್ಲಿ ಸುರಿದು ಉರಿಯಲ್ಲಿ ಚೆನ್ನಾಗಿ ಕುದಿಸಬೇಕು.
ನೀರು ಇಂಗಿ ರಸ ಮಂದವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅದನ್ನು ನಂತರ ಬಾಟಲಿಯಲ್ಲಿ ತುಂಬಿಸಿಟ್ಟುಕೊಂಡು ವರ್ಷಾನುಗಟ್ಟಲೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಪಣಂಪುಳಿಯಲ್ಲಿ ಹಲವು ಬಗೆಯಿದೆ. ಕೆಲವು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಇದರಲ್ಲಿ ಹಲವು ಜೀವಸತ್ವಗಳು ಇರುವುದರಿಂದ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದರಲ್ಲಿರು 'ಹೈಡಾಕ್ಸಿ ಸಿಟ್ರಿಕ್' ಎಂಬ ವಸ್ತುವಿಗೆ ಮಾನವನ ದೇಹದ ಕೊಬ್ಬನ್ನು ಕರಗಿಸುವ ಶಕ್ತಿ ಇದೆಯಂತೆ.
ಕೊಲೆಸ್ಟ್ರಾಲ್ ಮತ್ತು ಬೊಜ್ಜು ನಿಯಂತ್ರಕ
ಹಣ್ಣಿನ ಬೀಜವನ್ನು ಸಿಹಿಹುಳಿ ಮಿಶ್ರಿತ ಜೆಲ್ಲಿನಂತಹ ದ್ರವ ಆವರಿಸಿರುತ್ತದೆ ಇದನ್ನು ಚೀಪಿ ಬೀಜವನ್ನು ಉಗಿಯಬಹುದಾಗಿದೆ. ಈ ರಸವು ಜೀರ್ಣಕಾರಿಯಲ್ಲದೆ, ಜಂತುಹುಳು ನಿವಾರಣೆಗೆ ಅಪೂರ್ವ ಔಷಧಿಯಾಗಿದೆಯಂತೆ. ಹಣ್ಣಿನ ಸಿಪ್ಪೆಯಲ್ಲಿರುವ ಆಮ್ಲವು ಕೊಲೆಸ್ಟ್ರಾಲ್ ಮತ್ತು ಬೊಜ್ಜು ನಿಯಂತ್ರಕವಾಗಿದ್ದು, ಕಾಲಿನ ಬಿರುಕುಗಳಿಗೆ ಇದರ ಬೀಜದ ಎಣ್ಣೆ ರಾಮಬಾಣವಾಗಿದೆಯಂತೆ. ಹಿಂದಿನ ಕಾಲದಲ್ಲಿ ಪಣಂಪುಳಿ ಹಣ್ಣಿನ ಬೀಜಕ್ಕೆ ಬೂದಿಮಿಶ್ರ ಮಾಡಿ ಒಣಗಿಸಿಡುತ್ತಿದ್ದರು. ಆ ನಂತರ ಅದರ ಸಿಪ್ಪೆಯನ್ನು ತೆಗೆದು ಒಳಗಿನ ಬೀಜನ್ನು ಅರೆದು ಪಾತ್ರೆಗೆ ಹಾಕಿ ಕುದಿಸಿ ಅದರಿಂದ ಬರುವ ತುಪ್ಪವನ್ನು ಸಂಗ್ರಹಿಸಿಟ್ಟುಕೊಂಡು ನಿತ್ಯದ ಬಳಕೆಗೆ ಬಳಸುತ್ತಿದ್ದರು.

ಇದು ವಿಶಿಷ್ಟ ರುಚಿ ಮತ್ತು ಸುವಾಸನೆಯನ್ನು ಹೊಂದಿರುತ್ತದೆ. ಈಗ ತುಪ್ಪವನ್ನು ತಯಾರು ಮಾಡುವ ತಾಳ್ಮೆ ಯಾರಲ್ಲೂ ಇಲ್ಲದಾಗಿದೆ. ಅದಕ್ಕಿಂತ ಹೆಚ್ಚಾಗಿ ಕಾಚಂಪುಳಿಯನ್ನು ತಯಾರಿಸಲು ಸೌದೆಯ ಅಗತ್ಯ ಹೆಚ್ಚಾಗಿದೆ. ಮೊದಲಿಗೆ ಹೋಲಿಸಿದರೆ ಪಣಂಪುಳಿ ಮರ ಈಗ ಕಡಿಮೆಯಾಗಿದೆ. ತೋಟಗಳ ನಿರ್ಮಾಣದ ಸಂದರ್ಭ ಇವುಗಳು ನಾಶವಾಗಿವೆ. ಕೆಲವೆಡೆ ಮರವಿದ್ದು, ಹಣ್ಣು ಬಿಡುತ್ತಿದ್ದರೂ ಅವುಗಳನ್ನು ಸಂಗ್ರಹಿಸಿ ಅದನ್ನು ಒಣಗಿಸಿ ಅಥವಾ ರಸದಿಂದ ಕಾಚಂಪುಳಿ ತಯಾರು ಮಾಡಲು ಸಮಯವಿಲ್ಲದೆ, ಇನ್ನು ಕೆಲವರು ಇದರತ್ತ ಆಸಕ್ತಿ ವಹಿಸದ ಕಾರಣದಿಂದಾಗಿ ಕೆಲವೆಡೆ ಹಣ್ಣುಗಳು ಕೊಳೆತು ಭೂಮಿಯೊಡಲು ಸೇರುತ್ತಿವೆ. ಒಂದಷ್ಟು ಶ್ರಮವಹಿಸಿದರೆ ಪಣಂಪುಳಿಯಿಂದ ಆದಾಯ ಪಡೆಯಲು ಸಾಧ್ಯವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications