ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಣಸಿನಕಾಯಿ ಬೆಳೆಗೆ ಥ್ರಿಪ್ಸ್ ನುಸಿ ಕೀಟದ ಹಾವಳಿ, ತಡೆಗೆ ಸಲಹೆಗಳು

|
Google Oneindia Kannada News

ಕಳೆದ ವರ್ಷದಂತೆ ಈ ವರ್ಷವೂ ಸಹ ಮೆಣಸಿನಕಾಯಿ ಬೆಳೆಯಲ್ಲಿ ಥ್ರಿಪ್ಸ್ ನುಸಿ ಕೀಟದ ಹಾವಳಿ ಪತ್ತೆಯಾಗಿದೆ. ರೈತರು ಈ ಕೀಟದ ಹಾವಳಿ ಬಗ್ಗೆ ಎಚ್ಚರ ವಹಿಸಬೇಕು ಎಂದು ತೋಟಗಾರಿಕೆ ನಿರ್ದೇಶಕರು ಹೇಳಿದ್ದು, ಕೀಟದ ಹಾವಳಿ ತಡೆಯಲು ಸಲಹೆಗಳನ್ನು ನೀಡಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ 27000ಕ್ಕಿಂತಲೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಕಳೆದ ವರ್ಷ ಮೆಣಸಿನಕಾಯಿ ಬೆಳೆಯನ್ನು ಬಾಧಿಸಿದ್ದ ಹೊಸ ಥ್ರಿಪ್ಸ್ ನುಸಿ ಥ್ರಿಪ್ಸ್ ಪಾರ್ವಿಸ್ಪಿನಸ್ ಕೀಟ, ಈ ವರ್ಷವೂ ಸಹ ಕಾಣಿಸುತ್ತಿದೆ.

ಅಕಾಲಿಕ ಮಳೆ; ಬಳ್ಳಾರಿಯಲ್ಲಿ ಮೆಣಸು ಸೇರಿ ವಿವಿಧ ಬೆಳೆಗೆ ಹಾನಿಅಕಾಲಿಕ ಮಳೆ; ಬಳ್ಳಾರಿಯಲ್ಲಿ ಮೆಣಸು ಸೇರಿ ವಿವಿಧ ಬೆಳೆಗೆ ಹಾನಿ

ಈ ಹಿನ್ನಲೆಯಲ್ಲಿ ಕೀಟದ ನಿರ್ವಹಣೆಗೆ ರೈತರು ಸೂಕ್ತ ಕ್ರಮಗಳನ್ನು ಅನುಸರಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕರೆ ನೀಡಿದ್ದಾರೆ. ಪ್ರೌಢ ಕೀಟಗಳು ಗುಂಪು ಗುಂಪಾಗಿ ಎಲೆಗಳ ಕೆಳಭಾಗದಲ್ಲಿ ಹೂಗಳ ಒಳಗೆ ಮತ್ತು ಹೊರಗೆ ಕಂಡುಬರುತ್ತವೆ. ಮರಿ ಹಂತದ ನುಸಿಗಳು ಎಲೆಗಳ ಕೆಳಭಾಗದಲ್ಲಿ ಕೇಂದ್ರೀಕೃತಗೊಂಡಿರುತ್ತವೆ ಎಂದು ರೈತರಿಗೆ ಮಾಹಿತಿ ನೀಡಲಾಗಿದೆ.

 ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕಾಡಾನೆ ದಾಳಿ: ಕಾಫಿ, ಮೆಣಸು, ಭತ್ತ ಬೆಳೆ ನಾಶ ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕಾಡಾನೆ ದಾಳಿ: ಕಾಫಿ, ಮೆಣಸು, ಭತ್ತ ಬೆಳೆ ನಾಶ

Horticulture Department Tips For Farmers To Protect Chilli Crop

ಸಸ್ಯಗಳ ಬೆಳವಣಿಗೆ ಕುಂಠಿತ; ಕೀಟಗಳು ಸಸ್ಯದ ಬಹುಭಾಗಗಳಿಂದ ರಸವನ್ನು ಹೀರುವುದರಿಂದ ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಎಲೆಗಳ ಅಂಚುಗಳು ಮೇಲ್ಮುಖವಾಗಿ ಮುದುಡುವುದು, ಹೂಗಳು ಉದುರುವುದು ಮತ್ತು ಬೆಳವಣಿಗೆ ಹಂತದಲ್ಲಿರುವ ಚಿಗುರುಗಳು ಗುಂಪಾಗಿ ಹೂ ಬಿಡದೆ ಒಣಗುವುದು ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು.

ರಾಮನಗರ: ಬಯಲುಸೀಮೆಯಲ್ಲಿ ಮಲೆನಾಡಿನ ಏಲಕ್ಕಿ, ಕಾಳು ಮೆಣಸು ಕಂಪುರಾಮನಗರ: ಬಯಲುಸೀಮೆಯಲ್ಲಿ ಮಲೆನಾಡಿನ ಏಲಕ್ಕಿ, ಕಾಳು ಮೆಣಸು ಕಂಪು

ಈ ರೋಗ ಬಾಧಿತ ಮೆಣಸಿನಕಾಯಿ ಗಿಡಗಳಲ್ಲಿ ಕಾಲಕ್ರಮೇಣ, ಕಾಯಿಗಳ ಸಂಖ್ಯೆ ಕಡಿಮೆಯಾಗಿ ಇಳುವರಿಯು ಗಣನೀಯ ಪ್ರಮಾಣದಲ್ಲಿ ಕುಂಠಿತಗೊಳ್ಳುತ್ತದೆ. ಆದ್ದರಿಂದ ರೈತರಿಗೆ ಉಂಟಾಗುವ ನಷ್ಟವನ್ನು ತಡೆಲು ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕಿದೆ.

ನಿರ್ವಹಣಾ ಕ್ರಮಗಳು: ಹೊಲದ ಸುತ್ತಲೂ 2-3 ಸಾಲು ಜೋಳ/ ಮೆಕ್ಕೆಜೋಳ/ಸಜ್ಜೆಯನ್ನು ಬೇಲಿ ಬೆಳೆಯಾಗಿ ಅಡವಾಗಿ ಬಿತ್ತುವುದರಿಂದ ಕೀಟಗಳ ಪ್ರಸಾರವನ್ನು ನಿಯಂತ್ರಿಸಬಹುದು. ಹೊಲ ಮತ್ತು ಬದುಗಳ ಸ್ವಚ್ಫತೆಯಿಂದ ಥ್ರೀಪ್ಸ್ ನುಸಿಗಳಿಗೆ ಆಸರೆ ನೀಡುವ ಕಳೆಗಳ ನಿರ್ಮೂಲನೆ ಮಾಡಬಹುದು.

ಸೂಕ್ತ ಅಂತರ (90x30 ಸೆಂ.ಮೀ/ 60x45 ಸೆಂ.ಮೀ) ಕಾಪಾಡುವುದು. ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರದೊಡನೆ ಮೆಟಾರೈಜಿಯಮ್ ಅನಿಸೋಪ್ಲಿಯೆ ಎಂಬ ಶಿಲೀಂಧ್ರ ಕೀಟನಾಶಕದಿಂದ (2-3 ಕೆಜಿ/ ಟನ್) ಮೌಲ್ಯವರ್ಧನೆಗೊಳಿಸಿ ಹೊಲಗಳಿಗೆ ಹಾಕಬೇಕು.

ಬೇವಿನ ಹಿಂಡಿ (200 ಕೆಜಿ/ ಎಕರೆಗೆ) ಮತ್ತು ಎರೆಹುಳು ಗೊಬ್ಬರವನ್ನು (500 ಕೆಜಿ/ ಎಕರೆಗೆ) ಮಣ್ಣಿನಲ್ಲಿ ಬೆರೆಸುವುದರಿಂದ ನಿರೋಧಕ ಶಕ್ತಿ ವೃದ್ಧಿಗೊಳ್ಳುತ್ತದೆ. ಶಿಫಾರಸ್ಸು ಪ್ರಮಾಣದರ ರಸಗೊಬ್ಬರದೊಂದಿಗೆ ಪೊಟ್ಯಾಶ್‍ನ ಬಳಕೆ ವೃದ್ದಿಸುವುದರಿಂದ ಕೀಟ ನಿರೋಧಕ ಶಕ್ತಿ ಹೆಚ್ಚುತ್ತದೆ.

Horticulture Department Tips For Farmers To Protect Chilli Crop

ನೀಲಿ ಅಂಟಿನ ಬಲೆಗಳನ್ನು 25-30/ ಎಕರೆಗೆ ಬೆಳೆಯ ಎತ್ತರಕ್ಕೆ ಅಳವಡಿಸಬೇಕು. ಆಗಿಂದ್ದಾಗೆ ಕುಂಟೆಯೊಡೆಯುವುದರಿಂದ ಕೋಶಾವಸ್ಥೆಯಲ್ಲಿರುವ ಥ್ರಿಪ್ಸ್ ನುಸಿಯನ್ನು ನಾಶಪಡಿಸಬಹುದು. ಸಾಧ್ಯವಾದಲ್ಲಿ ಕಾಲುವೆ ಮುಖಾಂತರ ನೀರುಣಿಸುವ ಬದಲು ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಬೇಕು ಎಂದು ಸಲಹೆ ನೀಡಲಾಗಿದೆ.

ಸಿಲ್ವರ್ ಬಣ್ಣದ ಪ್ಲಾಸ್ಟಿಕ್ ಶೀಟ್ (25-30 ಮೈಕ್ರಾನ್) ನಿಂದ ಮಲ್ಚಿಂಗ್ ಮಾಡುವುದರಿಂದ ಮಣ್ಣಿನಲ್ಲಿ ಕೋಶಾವಸ್ಥೆಗೆ ಹೋಗುವುದನ್ನು ತಡೆಯಬಹುದು. ತೀವ್ರ ಬಾಧೆಗೊಳಗಾದ ಗಿಡಗಳನ್ನು ಕಿತ್ತು ಗುಂಡಿಯಲ್ಲಿ ಮುಚ್ಚಬೇಕು ಅಥವಾ ಸುಡಬೇಕು. ಪರಭಕ್ಷಕ/ ಮಿತ್ರ ಕೀಟಗಳ ವೃದ್ಧಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಕೀಟನಾಶಕಗಳ ಬದಲು ಪರಿಸರ ಸ್ನೇಹಿ ಕೀಟನಾಶಕಗಳಾದ ಶೇ.5 ರ ಬೇವಿನ ಬೀಜದ ಕಷಾಯ. ಬೇವಿನ ಎಣ್ಣೆ (1500 ಪಿ.ಪಿ.ಯಂ) 2 ಮಿ.ಲೀ./ ಲೀ. ಹೊಂಗೆ ಎಣ್ಣೆ 3 ಮಿ.ಲೀ./ ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಶಿಲೀಂದ್ರ ಕೀಟನಾಶಕಗಳಾದ ಬಿವೇರಿಯಾ ಬಸ್ಸಿಯಾನ ಅಥವಾ ಲೆಕ್ಯಾನಿಸಿಲಿಯಂ ಲೆಕ್ಯಾನಿ ಅಥವಾ ಮೆಟಾರೈಜಿಯಮ್ ಅನಿಸೋಪ್ಲಿಯೇಯನ್ನು 4 ಗ್ರಾಂ./ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಅವಶ್ಯಕತೆಗನುಸಾರವಾಗಿ ಶಿಫಾರಸ್ಸು ಮಾಡಿರುವ ರಾಸಾಯನಿಕ ಕೀಟನಾಶಕಗಳಾದ 0.3 ಮಿ.ಲೀ. ಇಮಿಡಾಕ್ಲೋಪ್ರಿಡ್ 17.8 ಎಸ್.ಎಸ್ ಅಥವಾ 0.2 ಗ್ರಾಂ ಥಯೋಮೆಥಾಕ್ಸಾಮ್ 25 ಡಬ್ಲ್ಯೂ.ಜಿ ಅಥವಾ 1.0 ಮಿ.ಲೀ. ಫಿಪೊರೀನಿಲ್ 5 ಎಸ್.ಸಿ ಅಥವಾ 1.0 ಗ್ರಾಂ ಡಯಾಫೆನ್ ಥಯೂರಾನ್ 50 ಡಬ್ಲ್ಯೂ.ಪಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು

English summary
Horticulture department tips for farmers to protect Chilli crop. New disease found in Ballari and other district that will effect the crop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X