ಮುಂಜಾನೆ ತರಕಾರಿಕೊಳ್ಳಲು ಹಾಪ್‌ಕಾಮ್ಸ್‌ಗೆ ಹೋಗಿ
ಬೆಂಗಳೂರು, ಮೇ 14 : ಬೆಳಗ್ಗೆ ಬೇಗ ತರಕಾರಿ ಅಂಗಡಿ ಬಾಗಿಲು ತೆರೆಯುವುದಿಲ್ಲ ಎಂದು ಜನರು ಇನ್ನು ಮುಂದೆ ತಕರಾರು ತೆಗೆಯುವಂತಿಲ್ಲ. ಹೌದು, ಮುಂಜಾನೆ 6 ಗಂಟೆಗೆ ಹಾಪ್‌ಕಾಮ್ಸ್‌ಗಳನ್ನು ತೆರೆಯಲು ತೋಟಗಾರಿಕಾ ಇಲಾಖೆ ಉದ್ದೇಶಿಸಿದೆ.
ಬೆಳ್ಳಂಬೆಳಗ್ಗೆ ತರಕಾರಿ ಕೊಳ್ಳುವ ವ್ಯಾಪಾರಿಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನಂತಹ ನಗರದಲ್ಲಿ ವಾಯುವಿಹಾರಕ್ಕೆ ಬರುವ ಜನರು ಕೈಗಾಡಿಗಳಲ್ಲಿ, ರಸ್ತೆ ಬದಿಯ ಅಂಗಡಿಗಳಲ್ಲಿ ತರಕಾರಿ ಕೊಳ್ಳುತ್ತಿದ್ದರು. [ಹಾಪ್ ಕಾಮ್ಸ್ ವ್ಯಾಪಾರ ಕುಂಠಿತಕ್ಕೆ ಕಾರಣವೇನು?]

ಇದನ್ನು ಗಮನಿಸಿದ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹಾಪ್‌ಕಾಮ್ಸ್‌ಅನ್ನು ಬೇಗನೆ ತೆರೆಯುವ ಯೋಜನೆ ಸಿದ್ಧಪಡಿಸಿದ್ದಾರೆ. ಈ ಆಲೋಚನೆಯ ಭಾಗವಾಗಿಯೇ ಬೆಳಗ್ಗೆ 9 ರಿಂದ 9.30ಕ್ಕೆ ಬಾಗಿಲು ತೆರೆಯುತ್ತಿದ್ದ ಹಾಪ್‌ಕಾಮ್ಸ್‌ಗಳು ಇನ್ನುಮುಂದೆ 6 ಕ್ಕೆ ತೆರೆಯಲಿವೆ. [ಕೋಲಾರ : ಅಕಾಲಿಕ ಮಳೆ, ತರಕಾರಿಗೆ ಹಾನಿ]
ಮೈಸೂರು ನಗರದಲ್ಲಿ ಹಾಪ್‌ಕಾಮ್ಸ್‌ನ ಸುಮಾರು 45 ಮಳಿಗೆಗಳಿವೆ. ಬೆಂಗಳೂರಿನಲ್ಲಿ 200ಕ್ಕೂ ಅಧಿಕ ಮಳಿಗೆಗಳಿವೆ. ಇವುಗಳನ್ನು ಮುಂಜಾನೆಯೇ ತೆರೆದು ಗ್ರಾಹಕರನ್ನು ಸೆಳೆಯಲು ಇಲಾಖೆ ಯೋಜನೆ ರೂಪಿಸಿದೆ. ಪ್ರಾಯೋಗಿಕವಾಗಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಇದು ಜಾರಿಗೆ ಬರಲಿದೆ.
30ರ ಗಡಿ ದಾಟಿದ ಟೊಮೆಟೋ : ಬೇಸಿಗೆ ಮತ್ತು ಮಳೆಯ ಮೇಲಾಟದಲ್ಲಿ ಟೊಮೆಟೋ ಫಸಲು ನಾಶವಾಗಿರುವ ಹಿನ್ನೆಲೆಯಲ್ಲಿ ಬೆಲೆ ದುಬಾರಿಯಾಗಿದೆ. ಮಂಗಳೂರು ನಗರ ಹಾಗೂ ಸುತ್ತಮುತ್ತಲ ಮಾರುಕಟ್ಟೆಗಳಲ್ಲಿ ಟೊಮೆಟೋ ಬೆಲೆ 30ರ ಗಡಿದಾಟಿದೆ. ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಟೊಮೆಟೋ ಬೆಳೆಗೆ ಹಾನಿ ಉಂಟಾಗಿದೆ.












Click it and Unblock the Notifications