• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೀದರ್: ಕಬ್ಬು ತಿಂದು, ರೈತರ ಕಷ್ಟ-ಸುಖ ಕೇಳಿದ ಕುಮಾರಸ್ವಾಮಿ

|

ಬೀದರ್, ನವೆಂಬರ್ 15: ಪ್ರಗತಿ ರೈತನೋರ್ವನ ಹೊಲಕ್ಕೆ ಭೇಟಿ ನೀಡಿದ್ದ ಕುಮಾರಸ್ವಾಮಿ ರೈತರೊಂದಿಗೆ ಮಾತನಾಡುತ್ತಾ ಕಬ್ಬು ತಿಂದು ಖುಷಿ ಪಟ್ಟರು.

ಬೀದರ್‌ನ ರೈತ ಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಬೀದರ್ ಜಿಲ್ಲೆಯ ಕಾಶಿಲಿಂಗ ಅಗ್ರಹಾರ ಎಂಬ ಪ್ರಗತಿ ರೈತನ ಕಬ್ಬಿನ ಗದ್ದೆಗೆ ಭೇಟಿ ನೀಡಿದರು.

ರೈತರ ಕೇಳಿದ ಪ್ರಶ್ನೆಗಳಿಗೆ ಕುಮಾರಸ್ವಾಮಿ ನೀಡಿದ ಉತ್ತರಗಳಿವು

ಕಾಶಿಲಿಂಗ ಅವರು ತಮ್ಮ ಸ್ವಂತ 6 ಎಕರೆ ಮತ್ತು ಇನ್ನುಳಿದ 4 ಎಕರೆ ಹೊಲದಲ್ಲಿ ಕೃಷಿಯಲ್ಲಿ ನಡೆಸಿದ ಹೊಸ ಪ್ರಯೋಗಗಳನ್ನು ಸಿಎಂ ಅವರು ಖುದ್ದು ವೀಕ್ಷಿಸಿದರು‌.ರೈತ ಕಾಶಿಲಿಂಗ ಅವರನ್ನು ಕರೆದು ಹಲವಾರು ಮಾಹಿತಿ ಪಡೆದರು. ಇದೆ ವೇಳೆ ಕೃಷಿ ಹೊಂಡ, ಪಾಲಿಹೌಸ್ ವೀಕ್ಷಿಸಿದರು.

12 ತಿಂಗಳಿನ ಕಬ್ಬಿನ ಬೆಳೆ, ಅದರ ವಿಶೇಷತೆ ಕುರಿತು ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರು ಸಿಎಂ ಅವರಿಗೆ ವಿವರಿಸಿದರು. ಈ ವೇಳೆ ಸಚಿವರಾದ ಬಂಡೆಪ್ಪ ಅವರು ಕಬ್ಬಿನ ಗಳವೊಂದನ್ನು ಮುರಿದು ತಿಂದರು.‌ ಬಳಿಕ ಮುಖ್ಯಮಂತ್ರಿ ಅವರು ಅವರು ಕೂಡ ಕಬ್ಬು ತಿಂದರು.

ಜನಾರ್ದನ ರೆಡ್ಡಿ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಕುಮಾರಸ್ವಾಮಿ

ಹೈದರಾಬಾದನ ವಿಶ್ವಾನಂದ ರಾಜ ಅವರು ಸಸಿ ನೆಡುವ‌ ಇಜಿ ಪ್ಲಾಂಟರ್ ಕೃಷಿ ಸಾಧನದ ಬಗ್ಗೆ ಸಿಎಂ ಅವರಿಗೆ ಮಾಹಿತಿ ನೀಡಿದರು. ಬಳಿಕ ಸಿಎಂ ಅವರು ಆ ಸಾಧನದ ಮೂಲಕ ಹೊಲದಲ್ಲಿ ಸಸಿ‌ ನೆಟ್ಟರು.

ಸಮಗ್ರ ತೋಟಗಾರಿಕಾ ಯೋಜನೆಯ ಅಳವಡಿಕೆಯನ್ನು ರೈತ ಕಾಶಿಲಿಂಗ ಅವರು ಅಳವಡಿಸಿಕೊಂಡ ಬಗ್ಗೆ ಸಿಎಂ ಅವರಿಗೆ ತೋಟಗಾರಿಕಾ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ ಭಾವುಗೆ ವಿವರಿಸಿದರು. ಈ ಸಂದರ್ಭದಲ್ಲಿ ಸಚಿವರಾದ ವೆಂಕಟರಾವ್ ನಾಡಗೌಡ, ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಅವರು ಇದ್ದರು.

English summary
CM HD Kumaraswamy visited a sugar cane farm in Bidar. He eat sugar cane along with his cabinet friends. He talked with farmers and plant a sapling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X