ಗುಂಡ್ಲುಪೇಟೆ: ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯುವಂತೆ ಸರ್ಕಾರಕ್ಕೆ ಆಗ್ರಹಿಸಿದ ರೈತರು

ಚಾಮರಾಜನಗರ, ಸೆಪ್ಟೆಂಬರ್‌, 12: ಸೂರ್ಯಕಾಂತಿ ಧಾರಣೆಯಲ್ಲಿ ಕುಸಿತ ಕಂಡು ರೈತರು ಕೈ ಸುಟ್ಟುಕೊಳ್ಳುತ್ತಿರುವುದರಿಂದ ಖರೀದಿ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿ ಗುಂಡ್ಲುಪೇಟೆಯಲ್ಲಿ ರೈತರು ಧರಣಿ ನಡೆಸಿದ್ದಾರೆ.

ರೈತ ಸಂಘ ಹಾಗೂ ಅರಿಶಿಣ ಬೆಳೆಗಾರರ ಒಕ್ಕೂಟದ ವತಿಯಿಂದ ಗುಂಡ್ಲುಪೇಟೆ ಎಪಿಎಂಸಿ ಆವರಣದಲ್ಲಿ ರೈತರು ಧರಣಿ ನಡೆಸುತ್ತಿದ್ದು, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

Gundlupete taluk Farmers demand to government for open sunflower buying center

ಗುಂಡ್ಲುಪೇಟೆ ತಾಲೂಕಿನಲ್ಲಿ 15 ಸಾವಿರ ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಬೆಳೆ ಬೆಳೆದಿದ್ದು, ಬೆಲೆ ಕುಸಿತದಿಂದ ನಷ್ಟ ಅನುಭವಿಸುವಂತಾಗಿದೆ. ಮಳೆ ಕೊರತೆಯಿಂದ ಇಳುವರಿ ಕಡಿಮೆಯಾದ ಹಿನ್ನೆಲೆ ಹಾಕಿದ ಬಂಡವಾಳವೂ ಕೈಸೇರಿಲ್ಲ. ಸೂರ್ಯಕಾಂತಿಗೆ ಎಂಎಸ್‍ಪಿ ಅಡಿ 6760 ರೂಪಾಯಿ ನಿಗಧಿ ಮಾಡಿತ್ತು. ಆದರೆ ದಲ್ಲಾಳಿಗಳಿಗೆ ರೈತರು 4500 ರೂಪಾಯಿಗೆ ಮಾರಾಟ ಮಾಡುವ ಮೂಲಕ ಸಾಲದ ಸುಳಿಗೆ ಸಿಲುಕುವಂತಾಯಿತು.

ಈ ಮಧ್ಯೆ ಸೂರ್ಯಕಾಂತಿ ಬೆಲೆ ಕುಸಿದಿದ್ದರೂ ಸಹ ಸರ್ಕಾರ ಮಧ್ಯೆ ಪ್ರವೇಶ ಮಾಡಿ ಬೆಂಬಲ ಅಡಿಯಲ್ಲಿ ಬೆಳೆ ಖರೀದಿಸದೆ ರೈತರಿಗೆ ಅನ್ಯಾಯ ಮಾಡಿದೆ ಎಂದು ಪ್ರತಿಭ

ಮಳೆ ಕೊರತೆಯಿಂದ ಅನ್ನದಾತ ಕಂಗಾಲು

ಪ್ರತಿವರ್ಷವೂ ಒಂದಲ್ಲ ಒಂದು ಕಾರಣಕ್ಕೆ ರೈತರು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಅಕಾಲಿಕ ಮಳೆ ಮತ್ತು ಅತಿವೃಷ್ಠಿ ರೈತರನ್ನು ಕಾಡಿತ್ತು. ಈ ಬಾರಿ ಮುಂಗಾರು ಮಳೆ ಕೈಕೊಟ್ಟು, ಜುಲೈ ತಿಂಗಳ ಮಧ್ಯದಲ್ಲಿ ಹದವಾಗಿ ಮಳೆ ಸುರಿದ ಕಾರಣದಿಂದ ಎಚ್.ಡಿ.ಕೋಟೆ ಮತ್ತು ಸರಗೂರು ವ್ಯಾಪ್ತಿಯಲ್ಲಿ ಮುಸುಕಿನ ಜೋಳ ಹುಲುಸಾಗಿ ಬೆಳೆದಿತ್ತು. ಆದರೀಗ ಮಳೆ ಬಾರದೆ ಇರುವುದು ರೈತರು ಕಂಗಾಲಾಗಿದ್ದಾರೆ.

ಇಷ್ಟರಲ್ಲೇ ಆಗೊಮ್ಮೆ ಈಗೊಮ್ಮೆ ಮಳೆ ಸುರಿದಿದ್ದರೆ ಜೋಳ, ಹತ್ತಿ ಬೆಳೆಗೆ ಅನುಕೂಲವಾಗುತ್ತಿತ್ತು. ಈ ಹಿಂದೆ ಆಗಸ್ಟ್ ತಿಂಗಳಲ್ಲಿ ಮಳೆ ಸುರಿಯುತ್ತಿತ್ತಾದರೂ ಈ ಬಾರಿ ಮಳೆ ಸುರಿಯಲೇ ಇಲ್ಲ. ಇದು ರೈತರು ಆತಂಕ ಪಡುವಂತೆ ಮಾಡಿದೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮುಸುಕಿನ ಜೋಳ, ಹತ್ತಿಯ ಬೆಳೆಯಿಂದ ಒಂದಷ್ಟು ಆದಾಯವನ್ನು ರೈತರು ಪಡೆಯಲು ಸಾಧ್ಯವಾಗುತ್ತಿತ್ತು. ಆದರೀಗ ಭಯದ ವಾತಾವರಣ ನಿರ್ಮಾಣವಾಗಿದೆ.

ಹಾಗೆ ನೋಡಿದರೆ ಎಚ್.ಡಿ.ಕೋಟೆ ಮತ್ತು ಸರಗೂರು ವ್ಯಾಪ್ತಿಯಲ್ಲಿ 27,945 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಹಾಗೂ 7,700 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿಯನ್ನು ಬೆಳೆಯಲಾಗಿದೆ. ಜುಲೈ ತಿಂಗಳಲ್ಲಿ ಸಾಧಾರಣ ಮಳೆ ಕಾರಣದಿಂದ ಮುಸುಕಿನ ಜೋಳ ಉತ್ತಮವಾಗಿ ಬೆಳೆದು ನಳನಳಿಸುತ್ತಿತ್ತು. ಇದರಿಂದ ಬಂಪರ್ ಬೆಳೆಯ ನಿರೀಕ್ಷೆಯನ್ನು ರೈತರು ಮಾಡಿದ್ದರು.
ಜಲಾಶಯಗಳಿದ್ದರೂ ನೀರಿಗೆ ಬರ

ಎಚ್.ಡಿ.ಕೋಟೆ ಮತ್ತು ಸರಗೂರು ಅವಳಿ ತಾಲೂಕು ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತಿನ ಜೊತೆಗೆ ರಾಜ್ಯದ ಜೀವನಾಡಿ ಕಬಿನಿ ಜಲಾಶಯ ಸೇರಿ ನಾಲ್ಕು ಜಲಾಶಯಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ರಾಜ್ಯದ ಏಕೈಕ ತಾಲೂಕು ಎನ್ನುವ ಹಿರಿಮೆ ಹೊಂದಿದೆ. ಆದರೂ ನೀರಾವರಿ ಪ್ರದೇಶ ತೀರಾ ಕಡಿಮೆ. ಹೀಗಾಗಿ ಇಲ್ಲಿನ ರೈತರು ಮಳೆಯನ್ನು ಆಶ‍್ರಯಿಸಿ ಬೆಳೆಯನ್ನು ಬೆಳೆಯುತ್ತಿದ್ದಾರೆ.

ಪ್ರಸಕ್ತ ವರ್ಷ ಈ ವ್ಯಾಪ್ತಿಯ ರೈತರು ಹತ್ತಿ, ಜೋಳದ ಬೆಳೆಗಳನ್ನೇ ಹೆಚ್ಚಾಗಿ ಬೆಳೆದಿದ್ದಾರೆ. ಬೆಳೆ ಬೆಳೆಯುವುದು ರೈತರಿಗೆ ಸುಲಭವಾಗಿ ಉಳಿದಿಲ್ಲ. ಕೂಲಿಯಾಳುಗಳ ಸಮಸ್ಯೆ ಮತ್ತು ಮುಂಗಾರು ಮಳೆಯ ಕಣ್ಣಾಮುಚ್ಚಲೆ ನಡುವೆ ಕೃಷಿ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಳೆ ಬೆಳೆದ ಪ್ರಮಾಣ ಕಡಿಮೆಯಿದೆ.
ಮಳೆಯಿಲ್ಲದೆ ರೈತರಲ್ಲಿ ಆತಂಕ

ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಆರಂಭವಾಗಬೇಕಿದ್ದ ಮುಂಗಾರು ಮಳೆ ಜುಲೈ ತಿಂಗಳ ಮಧ್ಯದಲ್ಲಿ ಕಾಣಿಸಿಕೊಂಡು ಹದಿನೈದು ದಿನಗಳ ಕಾಲ ಹದವಾಗಿ ಸುರಿದಿತ್ತು. ಇದರಿಮದ ಹತ್ತಿ ಮತ್ತು ಮುಸುಕಿನ ಜೋಳದ ಬೆಳೆಗಳಿಗೆ ಜೀವ ಬಂದಂತಾಗಿತ್ತು. ಈ ಬಾರಿ ಭರಣಿ ಮಳೆ ಕೈಕೊಟ್ಟು, ನಂತರದ ಮಳೆಗಳು ಕ್ಷೀಣಿಸಿದ ಪರಿಣಾಮ ಹೊಲ ಗದ್ದೆಗಳಲ್ಲಿ ಬೆಳೆದ ಬೆಳೆಗಳು ಮೇಲೆಳಲಾರದ ದುಸ್ಥಿತಿ ಕಂಡಿವೆ. ಇದನ್ನು ಕಂಡ ರೈತ ಬಿತ್ತನೆಗೆ ಹಾಕಿದ ಮೂಲ ಬಂಡವಾಳವೂ ಮಣ್ಣು ಪಾಲಾಯಿತೆಂದು ತಲೆಮೆಲೆ ಕೈಇಟ್ಟು ಕೂರುವಂತಾಗಿದೆ.

ಜೂನ್‍ನಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭಿಸಿದರೆ ರೈತರಿಗೆ ನೆರವಾಗುತ್ತಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಖರೀದಿ ಕೇಂದ್ರ ಆರಂಭವಾಗದೆ ಹೆಚ್ಚಿನ ನಷ್ಟವಾಗಿದೆ. ಈಗಾಗಲೇ ಶೇಕಡಾ 85ರಷ್ಟು ಫಸಲು ಮಾರಾಟ ಮಾಡಲಾಗಿದ್ದು, ಕೆಲವು ಪ್ರದೇಶದಲ್ಲಿ ಅಲ್ಪ ಪ್ರಮಾಣದ ಬೆಳೆ ಮಾತ್ರ ಬಾಕಿ ಉಳಿದಿದೆ. ಹೀಗಿದ್ದರೂ ಕೂಡ ಖರೀದಿ ಕೇಂದ್ರ ತೆರೆಯಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ರೈತರು ಅಸಮಾಧಾನ ಹೊರಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+