Get Updates
Get notified of breaking news, exclusive insights, and must-see stories!

ಲಾಭದಾಯಕವಾಗಿ ರಾಗಿ ಬೆಳೆಯುವುದು ಹೇಗೆ?

ಚಿತ್ರದುರ್ಗ, ನವೆಂಬರ್ 17: ರೈತರಿಗೆ ಅನುಕೂಲ ಮಾಡಿಕೊಡಲು ರಾಗಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಚಿತ್ರದುರ್ಗದಲ್ಲಿ ನಡೆಯಿತು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರೆಲೆಗೊಬ್ಬರದ ಅವಶ್ಯಕತೆ, ಬಿಜೋಪಚಾರ, ಪೀಡೆನಾಶಕಗಳ ಸುರಕ್ಷಿತ ಬಳಕೆ, ಲಾಭದಾಯಕವಾಗಿ ರಾಗಿ ಬೆಳೆಯುವ ಕುರಿತು ರೈತರಿಗೆ ಸಲಹೆಗಳನ್ನು ನೀಡಲಾಯಿತು. ನೂರಾರು ರೈತರು ಕ್ಷೇತ್ರೋತ್ಸವದಲ್ಲಿ ಪಾಲ್ಗೊಂಡು ಮಾಹಿತಿಗಳನ್ನು ಹಂಚಿಕೊಂಡರು.

ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ಹೊಳಲ್ಕೆರೆ ತಾಲ್ಲೂಕಿನ ಬಿ. ದುರ್ಗ ಹೋಬಳಿಯ ಬಂಡೆಬೊಮ್ಮೇನಹಳ್ಳಿ ಗ್ರಾಮದಲ್ಲಿ ರೈತರಿಗೆ ಬಿಜೋಪಚಾರ ಮತ್ತು ಸುರಕ್ಷಿತ ಪೀಡೆನಾಶಕ ಬಳಕೆ ಕುರಿತು ತರಬೇತಿ ಹಾಗೂ ಚಿಕ್ಕಜಾಜೂರು ರೈತ ಸಂಪರ್ಕ ಕೇಂದ್ರ ವತಿಯಿಂದ ರಾಗಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು. ಹೊಳಲ್ಕೆರೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಚಂದ್ರ ಕುಮಾರ್‌ ರೈತರಿಗೆ ಸಲಹೆಗಳನ್ನು ನೀಡಿದರು.

17 2 4-10 - 1 2

ಈ ತರಬೇತಿಯ ನಂತರ ಆಹಾರ ಮತ್ತು ಪೌಷ್ಟಿಕ ಯೋಜನೆಯಡಿ ಆಯೋಜಿಸಲಾದ ಪರಮೇಶ್ವರಪ್ಪ ಅವರ ರಾಗಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ರೈತರು ಪಾಲ್ಗೊಂಡರು. ಲಾಭದಾಯಕವಾಗಿ ರಾಗಿ ಕೃಷಿ ಮಾಡುವುದು ಹೇಗೆ? ಎಂದು ರೈತರಿಗೆ ಸಲಹೆಗಳನ್ನು ನೀಡಲಾಯಿತು. ರೈತರು ಸಹ ರಾಗಿ ಬೇಸಾಯದ ಕುರಿತು ತಮ್ಮ ಗೊಂದಲಗಳನ್ನು ಪರಿಹರಿಸಿಕೊಂಡರು.

ಕೃಷಿ ಯೋಜನೆಗಳು: ಸಹಾಯಕ ಕೃಷಿ ನಿರ್ದೇಶಕ ಚಂದ್ರ ಕುಮಾರ್‌ ಮಾತನಾಡಿ, "ಸುಸ್ಥಿರ ಕೃಷಿ ಮತ್ತು ಗುಣಮಟ್ಟದ ಆಹಾರದ ಉತ್ಪಾದನೆಗೆ ರೈತರು ಕೃಷಿ ಇಲಾಖೆಯ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಆಯೋಜಿಸಲಾಗುವ ತಾಂತ್ರಿಕ ತರಬೇತಿಗಳ ಪ್ರಯೋಜನೆ ಪಡೆಯಬೇಕು" ಎಂದು ಕರೆ ನೀಡಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬಬ್ಬೂರು ಫಾರಂನ ಸಹಾಯಕ ಕೃಷಿ ನಿರ್ದೇಶಕ ಹಾಗೂ ಮುಖ್ಯಸ್ಥ ಆರ್. ರಜನಿಕಾಂತ ಮಾತನಾಡಿ, "ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ರೈತರಿಗೆ ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳ ಕುರಿತು ಆಯೋಜಿಸಲಾಗುತ್ತಿರುವ ಸಾಂಸ್ಥಿಕ ತರಬೇತಿ, ಹೊರಾಂಗಣ ತರಬೇತಿ, ಆನ್‍ಲೈನ್ ತರಬೇತಿಗಳ ಸದುಪಯೋಗ ಪಡೆದುಕೊಳ್ಳಬೇಕು" ಎಂದರು.

"ಕೃಷಿಯಲ್ಲಿ ಗುಣಮಟ್ಟದ ಬಿತ್ತನೆ ಬೀಜದ ಮಹತ್ವ ಹಾಗೂ ಬೆಳೆಯ ಪ್ರಾರಂಭದ ಹಂತದಲ್ಲಿ ಬರುವಕೀಟ ಮತ್ತು ರೋಗಗಳ ನಿರ್ವಹಣೆಗೆ ಬೀಜೋಪಚಾರ ಅತ್ಯವಶ್ಯಕ. ಕಡಲೆ, ಹುರುಳಿ, ಅಲಸಂಧೆ ಬೆಳೆಗಳಲ್ಲಿ ಸೊರಗುರೋಗ ನಿರ್ವಹಣೆಗೆ ಕಾರ್ಬನ್ಡೈಜಿಮ್ @ 2 ಗ್ರಾಂ/ ಕೆಜಿ ಬೀಜಕ್ಕೆಅಥವಾ ಟ್ರೈಕೋಡರ್ಮಾ @ 4-10 ಗ್ರಾಂ/ ಪ್ರತಿಕೆಜಿ ಬೀಜಕ್ಕೆ ಹಾಕಿ ಬೀಜೋಪಚಾರ ಮಾಡಬೇಕು" ಎಂದು ಸಲಹೆ ನೀಡಿದರು.

"ಸೂಕ್ಷ್ಮಾಣುಜೀವಿಗಳನ್ನು ಬಳಸಿ ಏಕದಳ ಧಾನ್ಯಗಳಾದ ರಾಗಿ, ಗೋಧಿ, ಮುಸುಕಿನ ಜೋಳ ಬೆಳೆಗಳಲ್ಲಿ ಇಳುವರಿಯನ್ನು ಹೆಚ್ಚಿಸಲು ಸಾರಜನಕ ಸ್ಥೀರಿಕರಿಸುವ ಜೀವಾಣುಗಳಾದ ಅಜೋಸ್ಪರಿಲಂ, ಅಜೊಟೊಬ್ಯಾಕ್ಟರ್‌ ಅನ್ನು ಹಾಗೂ ಬೇಳೆಕಾಳು ಬೆಳೆಗಳಾದ ಹುರಳಿ, ಅಲಸಂದೆ, ಕಡಲೆ ಮುಂತಾದ ಬೆಳೆಗಳಲ್ಲಿ ರೈಜೋಬಿಯಂ ಅಣುಜೀವಿ ಗೊಬ್ಬರವನ್ನು ಬೀಜೋಪಚಾರಕ್ಕೆ ಬಳಸಬಹುದು. ರಂಜಕ ಕರಗಿಸುವ ಜೀವಾಣುಗಳನ್ನು ಎಲ್ಲಾ ಬೆಳೆಗಳಿಗೂ ಬಳಸಬಹುದು" ಎಂದು ತಿಳಿಸಿದರು.

"ಯಾವುದೇ ಕೀಟನಾಶಕ ಬಳಸುವುದಕ್ಕೆ ಮುಂಚೆ ಜೊತೆಯಲ್ಲಿ ಕೊಟ್ಟಿರುವ ಚೀಟಿ ಓದಿಕೊಳ್ಳಿ. ಸಿಂಪರಣಾ ದ್ರಾವಣದಿಂದ ರಕ್ಷಿಸಿಕೊಳ್ಳಲು ಯಾವಾಗಲೂ ಸರಿಯಾದ ಬಟ್ಟೆಗಳನ್ನು ಧರಿಸಬೇಕು. (ಕನ್ನಡಕ, ಮುಖವಾಡ, ಕೈ ಹೊದಿಕೆ ಮುಂತಾದವುಗಳು). ಸೋರುವ ಅಥವಾ ಹಾನಿಯಾಗಿರುವ ಸಿಂಪರಣಾ ಯಂತ್ರ ಉಪಯೋಗಿಸಬಾರದು. ಗಾಳಿ ಬೀಸುತ್ತಿರುವ ದಿಕ್ಕಿನಿಂದಲೇ ಕೀಟನಾಶಕ ದ್ರಾವಣ ಸಿಂಪಡಿಸಬೇಕು ಮತ್ತು ಗಾಳಿಗೆ ವಿರುದ್ಧವಾದ ದಿಕ್ಕಿನಲ್ಲಿ ಸಿಂಪಡಿಸಬಾರದು. ಕೀಟನಾಶಕ ಉಸಿರಿನೊಡನೆ ಒಳಗೆ ಹೋಗುವುದನ್ನು ತಡೆಯಲು ಯಾವಾಗಲೂ ಸೊಂಟದಿಂದ ಕೆಳಮಟ್ಟದಲ್ಲಿ ಸಿಂಪಡಿಸಬೇಕು" ಎಂದು ರೈತರಿಗೆ ಸಲಹೆಗಳನ್ನು ಕೊಟ್ಟರು.

"ಕೀಟನಾಶಕ ಸಿಂಪಡಣೆಯ ನಂತರ ಸಾಬೂನಿನಿಂದ ಸ್ನಾನ ಮಾಡಿ ಬಟ್ಟೆಯನ್ನು ಬದಲಾಯಿಸಬೇಕು. ಆನಂತರ ಆಹಾರ ಮತ್ತು ನೀರನ್ನು ಸೇವಿಸಬೇಕು ಹಾಗೂ ಸಿಂಪರಣಾ ಸಮಯದಲ್ಲಿ ಉಪಯೋಗಿಸಿದ ಬಟ್ಟೆಯನ್ನು ಸ್ವಚ್ಛಗೊಳಿಸಬೇಕು. ಸಿಂಪರಣಾ ಸಮಯದಲ್ಲಿ ಎಲೆ-ಅಡಿಕೆ ಜಗಿಯಬಾರದು ಮತ್ತು ಧೂಮಪಾನ ಮಾಡಬಾರದು ಮತ್ತು ತೊಂದರೆ ಉಂಟಾದಲ್ಲಿ ಸಿಂಪಡಿಸುವುದನ್ನು ನಿಲ್ಲಿಸಿ ವೈದ್ಯರ ಸಲಹೆ ಪಡೆಯಬೇಕು. ಕೀಟನಾಶಕಗಳನ್ನು ಮಕ್ಕಳ ಕೈಗೆ ಸಿಗದಂತೆ ಪ್ರತ್ಯೇಕ ಸ್ಥಳದಲ್ಲಿಟ್ಟು ಬೀಗ ಹಾಕಬೇಕು. ಖಾಲಿಯಾದ ಕೀಟನಾಶಕದ ಡಬ್ಬಗಳನ್ನು ಆಹಾರ ಧಾನ್ಯ ಸಂಗ್ರಹಿಸಲು ಉಪಯೋಗಿಸಬಾರದು. ಖಾಲಿಯಾದ ಡಬ್ಬವನ್ನು ನಾಶಪಡಿಸಿ ಮತ್ತು ನೆಲದೊಳಗೆ ಅದನ್ನು ಹೂತು ಹಾಕಬೇಕು" ಎಂದರು.

ಆರೋಗ್ಯಕರ ಸ್ವಾವಲಂಬನೆ ಜೀವನ ನಡೆಸಲು ರೈತರು ಕೃಷಿಯಲ್ಲಿ ಖರ್ಚು ಕಡಿಮೆ ಮಾಡಿಕೊಳ್ಳಲು ಅನವಶ್ಯಕವಾಗಿ ರಸಾಯನಿಕಗೊಬ್ಬರ ಬಳಕೆ ಮಾಡದೆ ಸ್ಥಳೀಯವಾಗಿ ದೊರೆಯುವ ಕೃಷಿ ತ್ಯಾಜ್ಯಗಳಿಂದ ಕಾಂಪೋಸ್ಟ್ ಅಥವಾ ಎರೆಹುಳು ಗೊಬ್ಬರ ತಯಾರಿಸಿ ಬಳಸಬೇಕು ಎಂದು ಸಲಹೆ ನೀಡಲಾಯಿತು.

ರೈತರು ಕುಟುಂಬಕ್ಕೆ ಬೇಕಾದ ಹಣ್ಣು, ಸೊಪ್ಪು ಮತ್ತು ತರಕಾರಿಗಳನ್ನು ತಮ್ಮ ಜಮೀನು ಅಥವಾ ಮನೆಯ ಹಿತ್ತಲಿನಲ್ಲಿ ಕನಿಷ್ಟ 1 ಅಥವಾ 2 ಗುಂಟೆ ಪ್ರದೇಶದಲ್ಲಿ ಪೌಷ್ಠಿಕ ಕೈತೋಟ ಮಾಡಿಕೊಳ್ಳುವುದು ಉತ್ತಮ. ರೈತರು ಗಾಣದ ಎಣ್ಣೆ ಬಳಕೆ ಮತ್ತು ಸಿರಿಧಾನ್ಯಗಳನ್ನು ಬೆಳೆಯುವುದರ ಜೊತೆಗೆ ದಿನನಿತ್ಯದ ಆಹಾರ ಸೇವನೆಯಲ್ಲಿ ಅವುಗಳನ್ನು ಬಳಸುವುದು ಸೂಕ್ತ ತಿಳಿಸಲಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+