ಕುಟುಂಬದ ಒಬ್ಬರ ಕೃಷಿ ಸಾಲ ಮಾತ್ರ ಮನ್ನಾ, ನಿಯಮ ವಾಪಸ್ ಪಡೆಯಲಿದೆ ಸರ್ಕಾರ
Recommended Video

ರೈತರ ಸಾಲ ಮನ್ನಾ ಬಗೆಗಿನ ನಿಯಮಗಳನ್ನ ಬದಲು ಮಾಡಲಿದೆ ಸರ್ಕಾರ | Oneindia Kannada
ಬೆಂಗಳೂರು, ಆಗಸ್ಟ್ 20: ರೈತರ ಕೃಷಿ ಸಾಲ ಮನ್ನಾ ಮಾಡಿದ್ದ ರಾಜ್ಯ ಸರ್ಕಾರ, ಕುಟುಂಬ ಒಬ್ಬ ವ್ಯಕ್ತಿಯ ಸಾಲವನ್ನು ಮಾತ್ರವೇ ಮನ್ನಾ ಮಾಡುವುದಾಗಿ ನಿಯಮ ವಿಧಿಸಿತ್ತು ಆದರೆ ಇದನ್ನು ಹಿಂಪೆಡೆಯಲಾಗುತ್ತಿದೆ.
ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಅವರು ಇದನ್ನು ಸ್ಪಷ್ಟಪಡಿಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಆದರೆ ಕುಟುಂಬದ ಒಬ್ಬರ ಸಾಲಮನ್ನಾ ನಿಯಮ ಹಿಂಪಡೆಯುವುದು ಕೇವಲ ಸಹಕಾರಿ ಬ್ಯಾಂಕುಗಳಲ್ಲಿನ ಸಾಲಕ್ಕೊ, ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕೃಷಿ ಸಾಲಕ್ಕೂ ಈ ನಿಯಮ ಅನ್ವಯವಾಗುತ್ತದೆಯೋ ಸ್ಪಷ್ಟವಾಗಿಲ್ಲ.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಚರ್ಚೆ ನಡೆಯಲಿದ್ದು, ಕುಟುಂಬದ ಒಬ್ಬರ ಸಾಲಮನ್ನಾ ಮಾತ್ರ ಮನ್ನಾ ನಿಯಮದ ಜೊತೆಗೆ ಇನ್ನೂ ಕೆಲವು ನಿಯಮಗಳನ್ನು ಸಡಿಲಿಸುವ ಸಾಧ್ಯತೆ ಇದೆ.
ಪ್ರಸ್ತುತ ಕೊಡಗು ವಿಷಮ ಪರಿಸ್ಥಿತಿಯಲ್ಲಿರುವ ಕಾರಣ ಸಚಿವ ಸಂಪುಟ ಸಭೆ ತಡವಾಗುವ ಸಾಧ್ಯತೆ ಇದೆ.












Click it and Unblock the Notifications