ಪ್ರಧಾನಮಂತ್ರಿ ಕುಸುಮ್ ಯೋಜನೆ ವಿಸ್ತರಣೆ: ರೈತರಿಗೆ ಏನು ಲಾಭ?
Recommended Video
ನವದೆಹಲಿ, ಫೆಬ್ರವರಿ 1: 'ಕುಸುಮ್' ಯೋಜನೆಯನ್ನು ವಿಸ್ತರಣೆ ಮಾಡಲಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಈ ಕುಸುಮ್ ಯೋಜನೆಯಿಂದ ರೈತರಿಗೆ ಸೋಲಾರ್ ಪಂಪ್‌ಗಳನ್ನು ಒದಗಿಸಿಕೊಡಲಾಗುತ್ತದೆ. ಒಟ್ಟು 20 ಲಕ್ಷ ರೈತರನ್ನು ಈ ಯೋಜನೆ ಒಳಗೊಳ್ಳಲಿದೆ.
Budget 2020 Live: ಬಜೆಟ್ ಭಾಷಣ ಆರಂಭಿಸಿದ ನಿರ್ಮಲಾ ಸೀತಾರಾಮನ್
ಕುಸುಮ್ ಯೋಜನೆ ಎಂದರೆ ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಉತ್ತಮ್ ಮಹಾಭಿಯಾನ್ ಎಂದು ಕರೆಯಲಾಗುತ್ತದೆ.

ಪ್ರತಿ ರೈತರು ಸ್ವತಂತ್ರವಾಗಿ ಸೋಲಾರ್ ಪಂಪ್‌ಗಳನ್ನು ಅಳವಡಿಸಿಕೊಳ್ಳಬಹುದು. ಕಳೆದ ಬಾರಿ ಕುಸುಮ್ ಯೋಜನೆಗೆ 34,422 ಕೋಟಿಯನ್ನು ಮೀಸಲಿಡಲಾಗಿತ್ತು.
ಸಾಕಷ್ಟು ರೈತರು ಡೀಸೆಲ್, ಸೀಮಿಎಣ್ಣೆ ಬಳಕೆ ಮಾಡುತ್ತಿದ್ದಾರೆ. ಅಂತಹ ರೈತರು ತಮ್ಮ ಬರಡು ಭೂಮಿಯಲ್ಲಿ ಸೌರ ವಿದ್ಯುತ್ ಘಟಕ ನಿರ್ಮಿಸಲು ಸರ್ಕಾರ ಸಹಾಯ ಮಾಡಲಿದೆ. ಜೊತೆಗೆ ಅವರು ಹೆಚ್ಚುವರಿ ವಿದ್ಯುತ್‌ನ್ನು ಮಾರಾಟ ಮಾಡಬಹುದಾಗಿದೆ.
ಬರಡು ಭೂಮಿಯಿಂದಲೂ ರೈತರು ಲಾಭ ಗಳಿಸುವಂತೆ ಮಾಡಲು ಈ ಯೋಜನೆ ರೂಪಿಸಲಾಗಿದೆ. 2022ರೊಳಗೆ ಎಲ್ಲಾ ಸೌರ ವಿದ್ಯುತ್ ಘಟಕಗಳು 25,750 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಶಕ್ತಿ ಹೊಂದಲಿದೆ.












Click it and Unblock the Notifications