ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆರೆ ಸಂತ್ರಸ್ಥರಿಂದ ವಿಧಾನಸೌಧ ಮುತ್ತಿಗೆ, ಮುಂದೇನು?

By Staff
|
Google Oneindia Kannada News

Farmers Protest in Bengaluru
ಬೆಂಗಳೂರು, ಡಿ. 29 : ನೆರೆ ಪರಿಹಾರದಲ್ಲಿ ತಾರತಮ್ಯ ಎಸೆಗಲಾಗಿದೆ ಎಂದು ಆರೋಪಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಸಾವಿರಾರು ಸಂಖ್ಯೆ ಸಂತ್ರಸ್ಥರನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ. ಪ್ರತಿಭಟನೆ ನೇತೃತ್ವ ವಹಿಸಿದ್ದ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ, ವಿ ಎಸ್ ಉಗ್ರಪ್ಪ ಹಾಗೂ ಎಚ್ ಕೆ ಪಾಟೀಲ್ ಅವರನ್ನು ಬಂಧಿಸಲಾಯಿತು.

ಕಳೆದ ತಿಂಗಳು ಉತ್ತರ ಕರ್ನಾಟಕದಲ್ಲಿ ನಡೆದ ಪ್ರವಾಹ ಸಂತ್ರಸ್ಥರಿಗೆ ಸರಕಾರ ತಾರತಮ್ಯ ನೀತಿ ಅನುಸರಿಸಿದೆ ಎಂದು ಆರೋಪಿಸಿ ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಯಿಂದ ಸಾವಿರಾರು ರೈತರು ಬೆಂಗಳೂರು ಆಗಮಿಸಿದ್ದು, ವಿಧಾನಸೌಧ ಮುತ್ತಿಗೆ ಹಾಕುವ ಕಾರ್ಯಕ್ರಮ ಹಾಕಿಕೊಂಡಿದ್ದರು. ಇದಕ್ಕೂ ಮುನ್ನ ಪ್ರೀಡಮ್ ಪಾರ್ಕ್ ನಲ್ಲಿ ಜಮಾಯಿಸಿದ ಸಂತ್ರಸ್ಥರು ಸರಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗತೊಡಗಿದರು. ಈ ಸಂದರ್ಭದಲ್ಲಿ ರಾಜ್ಯ ಮಾನವ ಹಕ್ಕು ಆಯೋಗದ ಮುಖ್ಯಸ್ಥ ಎಸ್ ಆರ್ ನಾಯಕ್, ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಸಂತ್ರಸ್ಥರ ಅಹವಾಲು ಸ್ವೀಕರಿಸಿದರು.

ಸಾವಿರಾರು ಸಂಖ್ಯೆಯ ಸಂತ್ರಸ್ಥರನ್ನು ತಡೆಯಲು ಪೊಲೀಸರು ಹರಸಾಹಸ ನಡೆಸಿದ್ದು, ಸಂತ್ರಸ್ಥರ ಮೇಲೆ ಯಾವ ಕಾರಣಕ್ಕೂ ಲಾಠಿ ಪ್ರಹಾರ ನಡೆಸಬಾರದು ಎಂಬ ಮುಖ್ಯಮಂತ್ರಿಗಳ ಆದೇಶದಿಂದ ಪೊಲೀಸರು ಪಡಬಾರದ ಪಡಿಪಾಟಲುಪಟ್ಟಿದ್ದಂತೂ ಸತ್ಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X