ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸಗೊಬ್ಬರ ಸಚಿವಾಲಯ: ಹೆಚ್ಚುವರಿ 30,000 ಕೋಟಿ ರೂ. ಸಬ್ಸಿಡಿಗೆ ಮನವಿ

|
Google Oneindia Kannada News

ಬೆಂಗಳೂರು, ಜನವರಿ 20: ಕೇಂದ್ರ ರಸಗೊಬ್ಬರ ಸಚಿವಾಲಯವು ಪ್ರಸಕ್ತ ಹಣಕಾಸು ವರ್ಷದ ಕೊನೆಯ ನಾಲ್ಕನೇ ತ್ರೈಮಾಸಿಕಕ್ಕೆ 30,000 ಕೋಟಿ ರೂ. ಸಹಾಯಯಧನ ಹೆಚ್ಚುವರಿಯಾಗಿ ಒದಗಿಸುವಂತೆ ಮನವಿ ಮಾಡಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲವೇ ದಿನಗಳಲ್ಲಿ ಕೇಂದ್ರ ಬಜೆಟ್ ಆಯವ್ಯಯ ಮಂಡನೆ ಮಾಡಲಿದ್ದಾರೆ. ಈ ವೇಳೆ ಸಹಾಯಧನ (ಸಬ್ಸಿಡಿ) ಮಂಜೂರು ನಿರೀಕ್ಷೆಯಲ್ಲಿ ಕೇಂದ್ರ ರಸಗೊಬ್ಬರ ಸಚಿವಾಲಯ ಇದ್ದು, ಅಂದಾಜು ಪಟ್ಟಿ ಸಿದ್ದಪಡಿಸಿಕೊಂಡಿದೆ.

ಉಕ್ರೇನ್ ಮತ್ತು ರಷ್ಯಾ ಮಧ್ಯದ ಯುದ್ಧವು ಜಾಗತಿಕವಾಗಿ ಪರಿಣಾಮ ಬೀರಿದೆ. ನೈಸಗಿರ್ಕ ಅನಿಲ ಹಾಗೂ ರಸಗೊಬ್ಬರದಂತೆ ಉತ್ಪನ್ನಗಳ ದರದಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಈಗಾಗಲೇ ಕೇಂದ್ರ ಹಣಕಾಸು ಸಚಿವಾಲಯವು ಮಣ್ಣಿನ ಪೋಷಕಾಂಶಗಳ ಮೇಲಿನ ಸಬ್ಸಿಡಿಗೆಂದು 2.15 ಟ್ರಿಲಿಯನ್ ರೂಪಾಯಿ ನಿಗದಿಪಡಿಸಿದೆ. ಇದರ ಜೊತೆಗೆ 30,000 ಕೋಟಿ ರೂ. ಸಹಾಯಯಧನಕ್ಕೆ ಮನವಿ ಮಾಡಲಾಗಿದೆ.

Fertilizer Ministry has requested to central for Additional Rs 30,000 crore subsidy for Q4

ಈಗಾಗಲೇ ನಿಗದಿತ ಹಣಕ್ಕಿಂತ ಮನವಿ ಮಾಡಿರುವ ಅನುದಾನ 1.09 ಟ್ರಿಲಿಯನ್ ಹೆಚ್ಚುವರಿಯಾಗಲಿದೆ. ಇದು ಈ ವರ್ಷದ ಹಣಕಾಸು ವರ್ಷದಲ್ಲಿ ಆರಂಭದಿಂದ ಕೊನೆ ತ್ರೈಮಾಸಿಕದವರೆಗೆ ಒಟ್ಟು ನಿವ್ವಳ 3.26 ಟ್ರಿಲಿಯನ್ ರೂಪಾಯಿ ವೆಚ್ಚ ಆಗುತ್ತದೆ. ಆದರೆ ಎರಡು ರಾಷ್ಟ್ರಗಳ ನಿರಂತರ ಯುದ್ಧದಿಂದಾಗಿ ದರ ಏರಿಕೆ ಹಿನ್ನೆಲೆ ಸಬ್ಸಿಡಿ ಅಗತ್ಯ ಎನ್ನಲಾಗಿದೆ.

ಮೂರನೇ ಒಂದು ಭಾಗ ರಸಗೊಬ್ಬರ ಆಮದು

ಗೊಬ್ಬರದ ಮೇಲಿನ ವಾರ್ಷಿಕ ಬಜೆಟ್ ವೆಚ್ಚವು 1 ಟ್ರಿಲಿಯನ್ ರೂಪಾಯಿಯನ್ನು ಸತತವಾಗಿ ಮೂರನೇ ವರ್ಷ ಮೀರಲಿದೆ. ಈ ಸಂಬಂಧ ಕೇಂದ್ರ ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಮಾಂಡವಿಯಾ ಅವರು ಭರವಸೆ ನೀಡಿದ್ದರು. ಸರ್ಕಾರವು ಅಂತಾರಾಷ್ಟ್ರೀಯ ಬೆಲೆ ಏರಿಕೆಯ ವೆಚ್ಚವನ್ನು ರೈತರಿಗೆ ಮೇಲೆ ಹೇರುವುದಿಲ್ಲ. ಜೊತೆಗೆ ಮಣ್ಣಿನ ಪೋಷಕಾಂಶಗಳ ಕೊರತೆ ಆಗದಂತೆ ಸಮರ್ಪಕವಾಗಿ ರಸಗೊಬ್ಬರ ಪೂರೈಸುವುದಾಗಿ ಅವರು ತಿಳಿಸಿದ್ದರು.

Fertilizer Ministry has requested to central for Additional Rs 30,000 crore subsidy for Q4

ಮೂಲಗಳ ಪ್ರಕಾರ, ಭಾರತದ ಬಹುಪಾಲು ಡಿ-ಅಮೋನಿಯಂ ಫಾಸ್ಫೇಟ್ (DAP) ರಸಗೊಬ್ಬರಗಳು ಪಶ್ಚಿಮ ಏಷ್ಯಾ, ಜೋರ್ಡಾನ್‌ ದೇಶಗಳಿಂದ ಆಮದಾಗುತ್ತವೆ. ಆದರೆ ಎಲ್ಲಾ ಸ್ಥಳೀಯ ಮ್ಯೂರಿಯೇಟ್ ಆಫ್ ಪೊಟ್ಯಾಶ್ (MoP) ಬೆಲಾರಸ್, ಕೆನಡಾ, ಜೋರ್ಡಾನ್ ಮತ್ತು ಇತರ ದೇಶಗಳಿಂದ ಭಾರತಕ್ಕೆ ರಫ್ತಾಗುತ್ತದೆ. ಭಾರತವು ವಾರ್ಷಿಕವಾಗಿ ಯೂರಿಯಾವನ್ನು ಶೇ. 20ರಷ್ಟು ವಿದೇಶಗಳಿಂದ ತರುತ್ತದೆ. ದೇಶ ಮಣ್ಣಿನ ಪೋಷಕಾಂಶಗಳ ರಕ್ಷಣೆಗೆ ಬೇಕಾದ ಮೂರನೇ ಒಂದು ಭಾಗವು ಆಮದಾಗುತ್ತದೆ. ಪರಿಸ್ಥಿತಿಯಲ್ಲಿನ ಬದಲಾವಣೆ, ಬೆಲೆ ಹೆಚ್ಚಾಗಿದ್ದರಿಂದ ಸಬ್ಸಿಡಿ ಕೇಳಲಾಗಿದೆ ಎಂದು ರಸಗೊಬ್ಬರ ಸಚಿವಾಲಯ ತಿಳಿಸಿದೆ.

English summary
Fertilizer Ministry has requested to central for Additional Rs 30,000 crore subsidy in Q4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X