ಮಂಡ್ಯದಲ್ಲಿ ಚುನಾವಣೆ ಕಾವಿನ ಮಧ್ಯೆ ಹೆಚ್ಚುತ್ತಿದೆ ರೈತರ ಆತ್ಮಹತ್ಯೆ

ಮದ್ದೂರು, ಏಪ್ರಿಲ್ 02:ಮಂಡ್ಯದಲ್ಲಿ ಚುನಾವಣೆಯ ಭರಾಟೆ ಸಾಗಿದ್ದು, ಎಲ್ಲರೂ ತಾವು ರೈತರ ಪರವಾಗಿದ್ದೇವೆ ಎಂದು ಘೋಷಿಸಿಕೊಳ್ಳುತ್ತಾ ರೈತರನ್ನು ಸೆಳೆಯುತ್ತಿದ್ದರೆ ಇತ್ತ ರೈತರ ಆತ್ಮಹತ್ಯೆ ಪ್ರಕರಣಗಳು ಮಾತ್ರ ನಿಲ್ಲುವಂತೆ ಕಾಣುತ್ತಿಲ್ಲ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚುನಾವಣೆ ಘೋಷಣೆಯಾದ ಬಳಿಕವೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಯಾರೂ ಕೂಡ ಈ ಬಗ್ಗೆ ಮಾತನಾಡದೆ ಕೇವಲ ರೈತರ ಪರ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ.

ಇದೀಗ ತಾಲೂಕಿನ ಅರೆತಿಪ್ಪೂರು ಗ್ರಾಮದ ನಿವಾಸಿ ರಾಜೇಗೌಡನ ಎಂಬುವರ ಪುತ್ರ ಕೆಂಪರಾಜು(65) ಎಂಬುವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತ ಕೆಂಪರಾಜು ಅವರು 2 ಎಕರೆ ಜಮೀನು ಹೊಂದಿದ್ದು, ಒಂದು ಎಕರೆ ಕಬ್ಬು ಮತ್ತು ಒಂದು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದರು. ಇದಕ್ಕಾಗಿ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ 1 ಲಕ್ಷ ರೂ. ಹಾಗೂ ಖಾಸಗಿ ವ್ಯಕ್ತಿಗಳಿಂದ 3 ಲಕ್ಷ ರೂ.ಕೈ ಸಾಲ ಮಾಡಿಕೊಂಡಿದ್ದರು.

Farmers suicide in Mandya are increasing

ಈ ನಡುವೆ ಬೆಳೆದ ಬೆಳೆಗೆ ನೀರಿಲ್ಲದ ಕಾರಣ ಒಣಗಿದ್ದು, ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ನಷ್ಟಹೊಂದಿದ್ದರು. ಅಲ್ಲದೇ ಸಾಲಗಾರರು ಕೂಡ ಹಣ ವಾಪಾಸ್ ನೀಡುವಂತೆ ಒತ್ತಾಯಿಸತೊಡಗಿದ್ದರು. ಇದರಿಂದ ನೊಂದ ಅವರು ಸಾಲಗಾರರಿಗೆ ಹೆದರಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+