ಸಾಯುವ ಮುನ್ನಾ ಮುಖ್ಯಮಂತ್ರಿಗೆ ಮಂಡ್ಯದ ರೈತ ಬರೆದ ಭಾವುಕ ಪತ್ರ

ಮಂಡ್ಯದ ರೈತನೋರ್ವ ಸಾಲದ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದಕ್ಕೂ ಮುನ್ನಾ ಕುಮಾರಸ್ವಾಮಿ ಅವರ ಹೆಸರಿಗೆ ಹೃದಯ ಹಿಂಡುವ ಡೆತ್‌ನೋಟ್ ಒಂದನ್ನು ಬರೆದಿದ್ದಾನೆ.

ಸಾಯಲು ಹೊರಟ ಅದೆಷ್ಟು ನಿರುದ್ವಿಗ್ನನಾಗಿ ಪತ್ರ ಬರೆದಿದ್ದಾನೆಂದರೆ, 'ರೈತನಾದ ನನ್ನ ಜೀವನವೇ ಇಷ್ಟೆ' ಎಂಬ ನಿರ್ಲಿಪ್ತ ಭಾವ ಆತನನ್ನು ಆವರಿಸಿಕೊಂಡಿಬಿಟ್ಟಿತ್ತೋ ಏನೋ. ಆದರೆ ಆತನ ಡೆತ್‌ ನೋಟ್‌ ರೈತನ ಸ್ವಾಭಿಮಾನ, ಅಸಹಾಯಹಕತೆ, ಆತನ ಕಷ್ಟಗಳು, ಕುಟುಂಬ ಪ್ರೀತಿ ಎಲ್ಲವನ್ನೂ ತೆರೆದಿಟ್ಟಿವೆ.

ಮಂಡ್ಯದ ರೈತ ಜಯಕುಮಾರ್ ಅವರು ಬರೆದಿದ್ದಾರೆ ಎನ್ನಲಾಗಿರುವ ಡೆತ್‌ನೋಟ್‌ನ ಯತಾವತ್‌ ಇಲ್ಲಿದೆ ಓದಿ...

Farmer writes letter to CM Kumaraswamy before he commit suicide

ಮಾನ್ಯ ಮುಖ್ಯಮಂತ್ರಿಯವರ ಸನ್ನಿಧಾನಕ್ಕೆ
ಕರ್ನಾಟಕ ಸರ್ಕಾರ

ಮಾನ್ಯರೆ,
ಮಂಡ್ಯ ತಾಲ್ಲೂಕು, ದುದ್ದ ಹೋಬಳಿ, ಕನ್ನಹಟ್ಟಿ ಗ್ರಾಮದ ಜಯಕುಮಾರ್‌ s/o ಲೇಟ್ ಶಿವಣ್ಣ ಆದ ನಾನು ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ನನಗೆ ಈಗ 43 ರಿಂದ 44 ವರ್ಷ ವಯಸ್ಸು. ನನ್ನ ಹೆಂಡತಿಗೆ 35 ವರ್ಷ. ನನ್ನ ಮಗಳಿಗೆ 15 ವರ್ಷ 9 ನೇ ತರಗತಿ ಓದುತ್ತಿದ್ದಾಳೆ. ಮಗ ರಾಜೇಶ್‌ನಿಗೆ 12 ವರ್ಷ ವಯಸ್ಸು 12 ವರ್ಷ ವಯಸ್ಸು 6 ನೇ ತರಗತಿ ಓದುತ್ತಿದ್ದಾನೆ.

ನನಗೆ ನಮ್ಮ ತಂದೆಯವರಿಂದ ಬಂದಿರುವ ಆಸ್ತಿ 27 ಗುಂಟೆ ಜಮೀನು ಮತ್ತು ಒಂದು ಕೈಹಂಚಿನ ಮನೆ (ಸುಮಾರು 70 ವರ್ಷ ಹಳೆಯದು) ಇದು ನನ್ನ ಆಸ್ತಿ. 15/03/2015 ರಲ್ಲಿ ನನ್ನ ತಾಯಿಗೆ ಶುಗರ್ ಮತ್ತು ಬಿಪಿ ಇದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡರು. ಅದೇ ವರ್ಷ ನನ್ನ ತಂದೆ ಅವರಿಗೆಗ ಲಿವರ್ ಕುತ್ತು ಆಗಿ ಮರಣ ಹೊಂದಿರುತ್ತಾರೆ.

ನನಗೆ ಇಬ್ಬರು ತಮ್ಮಂದಿರು ಸಿದ್ದರಾಜು-ಬಸವರಾಜು ಅವರಿಗೂ ಇಷ್ಟೆ ಆಸ್ತಿ ಇದೆ. ಅವರು ಸಹ ಉತ್ತಮ ಸ್ಥಿತಿಯಲ್ಲಿಲ್ಲ. ನನ್ನ ತಂದೆಯ ಚಿಕಿತ್ಸೆಗೆ 1.50 ರಿಂದ 2 ಲಕ್ಷ ಸಾಲ ಮಾಡಿ ಆಸ್ಪತ್ರೆ ಮತ್ತು ಪುಣ್ಯ ಕಾರ್ಯ ಮಾಡಿರುತ್ತೇನೆ.

ಈಗ ನನಗೆ ಗಂಟಲು ಕ್ಯಾನ್ಸರ್‌ ಎಂದು ವೈದ್ಯರು ಹೇಳಿರುವ ಕಾರಣ ನಾನು ಕುಗ್ಗಿ ಹೋಗಿದ್ದೇನೆ. ನನ್ನ ಚಿಕಿತ್ಸೆಗೆ ಮೂರು ಲಕ್ಷ ಬೇಕೆಂದು ವೈದ್ಯರು ಹೇಳಿರುತ್ತಾರೆ. 4 ವರ್ಷದಿಂದ ಬರಗಾಲ ಬಂದು ವ್ಯವಸಾಯ ಮಾಡಲಿಲ್ಲ. ಈಗ 80 ಸಾವಿರ ವ್ಯವಸಾಯಕ್ಕೆ ಹಾಕಿದೆ ಅದು ಸಹ ಕೈಹಿಡಿಯಲಿಲ್ಲ. ಆದ್ದರಿಂದ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ.
*ಇದಕ್ಕೆ ಸಾಕ್ಷಿ ಅಂಗಡಿ ಡ್ರಾಯರ್‌ನಲ್ಲಿದೆ.

ಜಯಕುಮಾರ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+