ಎಚ್‌ಡಿಕೆಗೆ 2 ಲಕ್ಷ ಪಾರ್ಟಿ ಫಂಡ್ ನೀಡಿ ಅಚ್ಚರಿ ಮೂಡಿಸಿದ ರೈತ!

ಬೆಂಗಳೂರು, ಏಪ್ರಿಲ್ 25: ಜೆಡಿಎಸ್ ಪಕ್ಷಕ್ಕೆ ಸಾಮಾನ್ಯ ರೈತನೊಬ್ಬ 2 ಲಕ್ಷ ರೂ ನೀಡಿ ಎಚ್.ಡಿ ಕುಮಾರಸ್ವಾಮಿಯವರೇ ಈ ಬಾರಿ ಮುಖ್ಯಮಂತ್ರಿಯಾಗಬೇಕು ಎಂದು ಹರಸಿದ್ದಾರೆ.

ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟಗಲ್ ಗ್ರಾಮದ ರೈತ ಕೃಷ್ಣಪ್ಪ 2 ಲಕ್ಷ ರೂ ಹಣವನ್ನು ನೀಡಿ ನೀವು ಹಣ ಪಡೆಯಲೇ ಬೇಕೆಂದು ಹಠ ಹಿಡಿದರು. ಏಕಾಂಗಿಯಾಗಿ ರಾಜ್ಯಾದ್ಯಂತ ರೈತರ ಪರವಾದ ಧ್ವನಿಯಾಗಿರುವ ಕುಮಾರಸ್ವಾಮಿಯವರಿಗೆ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆಂದು ಕೃಷ್ಣಪ್ಪ ಹೇಳಿದರು.

ಬಿಜೆಪಿಯವರು ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ, ಆದರೆ ಕುಮಾರಸ್ವಾಮಿ ಅವರ ಬಳಿ ಹಣವಿಲ್ಲ, ನಮ್ಮೂರು ಕೂಟಗಲ್ ನಲ್ಲೇ ಕಾಂಗ್ರೆಸ್ ನವರು ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದಾರೆ. ಅದನ್ನ ನೋಡಿದ ನಾನು ನಾನು ದುಡಿದು ಸೇರಿಸಿಟ್ಟಿದ್ದ 2 ಲಕ್ಷ ಹಣವನ್ನ ಕುಮಾರಣ್ಣನಿಗೆ ಕೊಟ್ಟಿರೋದು ನನಗೆ ಆತ್ಮ ತೃಪ್ತಿ ಇದೆ ಎಂದರು.

Farmer donates Rs2 lakhs to HDK as party fund

ನಾನು ಯಾರು ಅನ್ನೋದು ಕುಮಾರಣ್ಣನಿಗೆ ಗೊತ್ತೊ ಇಲ್ವೋ ಗೊತ್ತಿಲ್ಲ. ಆದರೆ ದೇವೇಗೌಡರು ಕುಮಾರಣ್ಣ ರೈತರನ್ನ ಕಾಪಾಡ್ತಾರೆ ಅನ್ನೋ ನಂಬಿಕೆ ನನಗಿದೆ. ಆದ್ದರಿಂದ ನಾನು ಎರಡು ಲಕ್ಷ ಹಣ ಕೊಟ್ಟಿದ್ದೇನೆ. ಕುಮಾರಣ್ಣರಿಂದ ನನಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲ. ಅವರು ಮುಖ್ಯಮಂತ್ರಿಯಾಗಬೇಕು ಅನ್ನೋದೊಂದೇ ಆಸೆ ಎಂದು ಕೃಷ್ಣಪ್ಪ ಹೇಳಿದ್ದಾರೆ.

ಬಡವರ, ರೈತರ ನಾಯಕನ ಕುಮಾರಸ್ವಾಮಿಯವರ ಕಷ್ಟ ನೋಡಿ ನಾಡಿನ ಪ್ರತಿಯೊಬ್ಬ ರೈತ ಕೂಡ ಮಿಡಿತಿದ್ದಾನೆ. ಕೂಡಗಲ್ ಕೃಷ್ಣಪ್ಪನಿಗೆ ಕಷ್ಟದ ನಡುವೆಯೂ ಸಹಾಯ ಮಾಡಿದ್ದಾರೆ. ಅವರಿಗೆ ಭಗವಂತ ಒಳ್ಳೆಯದನ್ನ ಮಾಡಲಿ. ಇಂತಹ ಮುಗ್ಧ ನಿಷ್ಕಲ್ಮಷ ಮನಸ್ಸಿನ ರೈತರ ಆಶೀರ್ವಾದದಿಂದ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+