ಬೆಲೆ ಕುಸಿಯಿತು ಎಂಬ ಸಿಟ್ಟಲ್ಲಿ ಟೊಮೆಟೊ ಪುಕ್ಕಟೆ ಹಂಚಿದ ರೈತ
ಬೆಳಗಾವಿ, ಫೆಬ್ರವರಿ 3 : ಟೊಮೆಟೊ ಬೆಲೆ ಕುಸಿತದಿಂದ ಆಕ್ರೋಶಗೊಂಡ ರೈತರೊಬ್ಬರು ಸಾರ್ವಜನಿಕರಿಗೆ ಪುಕ್ಕಟೆ ವಿತರಿಸಿ, ಪ್ರತಿಭಟಿಸಿದ್ದಾರೆ. ರಾಜ್ಯ ಸರಕಾರದ ವಿರುದ್ಧ ಶನಿವಾರ ತೀವ್ರ ಆಕ್ರೋಶ ವ್ಯಕ್ತಪಡಿದ್ದಾರೆ. ಟೊಮೆಟೊ ಬೆಲೆ ಕುಸಿದ ಪರಿಣಾಮವಾಗಿ ರೈತರು ಉಚಿತವಾಗಿ ಟೊಮೆಟೊ ನೀಡಿ, ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಎಲ್ಲರ ಗಮನ ಸೆಳೆದರು.
ಟೊಮೆಟೊ ಬೆಳೆದ ನಾರಾಯಣ್ ಪಾಟೀಲ ಎಂಬ ರೈತರಿಂದ ಈ ರೀತಿಯ ವಿನೂತನ ಪ್ರತಿಭಟನೆ ನಡೆಯಿತು. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ವಾಹನದಲ್ಲಿ ಟೊಮೆಟೊ ತುಂಬಿಕೊಂಡು ಬಂದು ಸಾರ್ವಜನಿಕರಿಗೆ ಉಚಿತವಾಗಿ ನೀಡಿದರು. ಟೊಮೆಟೊ ಬೆಲೆ ಕುಸಿದ ಪರಿಮಾಣ ಸರಕಾರ ಬೆಂಬಲ ಬೆಲೆ ಘೋಷಣೆ ಮಾಡುವಂತೆ ರಾಜ್ಯ ಸರಕಾರಕ್ಕೆ ಆಗ್ರಹ ಪಡಿಸಿದ್ದು ವಿಶೇಷವಾಗಿತ್ತು

ಉಚಿತವಾಗಿ ಟೊಮೆಟೊ ಸಿಕ್ಕಿದ್ದರಿಂದ ನಾ ಮುಂದು ತಾ ಮುಂದು ಎಂದು ಟೊಮೆಟೊ ತೆಗೆದುಕೊಂಡು ಹೋದರು ಸಾರ್ವಜನಿಕರು. ರೈತರ ಸಮಸ್ಯೆ ಏನು ಅಂತ ತಿಳಿದುಕೊಳ್ಳುವ ಪುರಸೊತ್ತು ಕೂಡ ಅವರಿಗೆ ಇರಲಿಲ್ಲ. ಟ್ರ್ಯಾಕ್ಟರ್ ಟ್ರ್ಯಾಲಿ ಟೊಮೆಟೋ ಕ್ಷಣಾರ್ಧದಲ್ಲಿ ಖಾಲಿಯಾಯಿತು.












Click it and Unblock the Notifications