ಮೈಸೂರಿನಲ್ಲಿ ವಿಷ ಕುಡಿದು ರೈತ ಆತ್ಮಹತ್ಯೆ
ಮೈಸೂರು, ಜೂ. 26 : ರಾಜ್ಯದಲ್ಲಿ ರೈತ ಆತ್ಮಹತ್ಯೆ ಸರಣಿ ಮುಂದುವರೆದಿದ್ದು, ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ರೈತನೊಬ್ಬ ಆತ್ಮಹತ್ಯೆ ಶರಣಾಗಿದ್ದಾನೆ. ಮೃತ ರೈತ ವಿವಿಧ ಬ್ಯಾಂಕ್‌ಗಳಲ್ಲಿ 5 ಲಕ್ಷ ರೂ.ಸಾಲ ಮಾಡಿದ್ದ.
ನಂಜನಗೂಡು ತಾಲೂಕು ಸಿಬ್ಬೇಗೌಡನಹುಂಡಿಯ ರೈತ ಶಿವಲಿಂಗೇಗೌಡ (40) ಶುಕ್ರವಾರ ತಮ್ಮ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಬ್ಬು ಮತ್ತು ಹತ್ತಿ ಬೆಳೆಗಾಗಿ ಶಿವಲಿಂಗೇಗೌಡ 5 ಲಕ್ಷ ರೂ. ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.

ಕಾವೇರಿ ಗ್ರಾಮೀಣ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಶಿವಲಿಂಗೇ ಗೌಡರು ಸಾಲ ಪಡೆದಿದ್ದರು. ಆದರೆ, ಕಬ್ಬಿಗೆ ಸರಿಯಾದ ಬೆಂಬಲ ಬೆಲೆ ಸಿಗದ ಕಾರಣ ಸಾಲ ತೀರಿಸಲು ಆಗಿರಲಿಲ್ಲ. ಇದರಿಂದ ನೊಂದ ಅವರು ಶುಕ್ರವಾರ ವಿಷ ಕುಡಿದು ಸಾವಿಗೆ ಶರಣಾಗಿದ್ದಾರೆ. [ಮಂಡ್ಯ : ಕಬ್ಬಿನ ಗದ್ದೆಗೆ ಬೆಂಕಿ ಹಾಕಿ ಸಾವಿಗೆ ಶರಣಾದ ರೈತ]
ಆತ್ಮಹತ್ಯೆ ಪ್ರಕರಣಗಳು
* ಜೂನ್ 8, ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಗುರುನಾಥ ಮಲ್ಲಪ್ಪ ಚಾಪಗಾವಿ (50) ಆತ್ಮಹತ್ಯೆ
* ಜೂನ್ 25, ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಗಾಣದಹೊಸೂರಿನ ನಿಂಗೇಗೌಡ (50)












Click it and Unblock the Notifications