ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರು ರಫ್ತುದಾರರಾಗಲು ಎಕ್ಸ್‌ಪೋರ್ಟ್ ಲ್ಯಾಬ್: ಬಿ.ಸಿ.ಪಾಟೀಲ್

|
Google Oneindia Kannada News

ಬೆಂಗಳೂರು, ಆಗಸ್ಟ್‌ 20: ರೈತರನ್ನು ರಫ್ತುದಾರರನ್ನಾಗಿ ಮಾಡಿ ಅವರ ಲಾಭವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಎಕ್ಸ್ಪೋರ್ಟ್ ಲ್ಯಾಬ್ ಆರಂಭಿಸಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

ಕೃಷಿ ಇಲಾಖೆ ಜಲಾನಯನ ಅಭಿವೃದ್ಧಿ ಇಲಾಖೆ ಅಪೆಡಾ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ‌ ಜಿಕೆವಿಕೆಯಲ್ಲಿ ನಡೆದ ಉತ್ಪಾದಕರ ಸಂಸ್ಥೆಗಳ ಹಾಗೂ ರಫ್ತುದಾರರ ಸಮಾವೇಶದಲ್ಲಿ ಅವರು ಮಾತನಾಡಿದರು.

"ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಐದು ಎಕ್ಸ್‌ಪೋರ್ಟ್ ಲ್ಯಾಬ್‌ಗಳನ್ನು ಗುರುತಿಸಲಾಗಿದೆ. ಇಂಡಿ ಹನುಮನಮಟ್ಟಿ ನಾಗೇನಹಳ್ಳಿ ವರದಗೇರಾ ಬನವಾಸಿಗಳಲ್ಲಿ ರಫ್ತುದಾರರ ಲ್ಯಾಬ್ ಆರಂಭಿಸಲು ಗುರುತಿಸಲಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ಪ್ರೊಸೆಸ್ ಇಂಡಸ್ಟ್ರಿಯಿಂದ ರೈತ ಲಾಭ ಹೊಂದಬೇಕು," ಎಂದು ಪಾಟೀಲ್‌ ಹೇಳಿದರು.

ಧಾರವಾಡ: ರೋಗಕ್ಕೆ ತುತ್ತಾದ ಬೆಳೆಗಳು- ಔಷಧಿ ಸಿಂಪಡಣೆಗೆ ಡ್ರೋಣ್ ಮೊರೆಹೋದ ರೈತರುಧಾರವಾಡ: ರೋಗಕ್ಕೆ ತುತ್ತಾದ ಬೆಳೆಗಳು- ಔಷಧಿ ಸಿಂಪಡಣೆಗೆ ಡ್ರೋಣ್ ಮೊರೆಹೋದ ರೈತರು

ಅಪೆಡಾದ ಡಿಜಿಎಂ ನಮ್ಮ ಕರ್ನಾಟಕದವರೇ ಇದ್ದಾರೆ. ಬಾಂಬೆಯಲ್ಲಿ ರಫ್ತುದಾರರನ್ನು ನೋಡಿದ ಮೇಲೆ ನಮ್ಮಲ್ಲಿಯೂ ರೈತರು ಯಾಕೆ ರಫ್ತುದಾರರಾಗಬಾರದೆಂದು ಚಿಂತನೆ ನಡೆಸಲಾಯಿತು. ಎಕ್ಸ್ಪೋರ್ಟ್ ಮಾಡಲು ಫುಡ್ ಯುನಿಟ್‌ಗಳನ್ನು ಬಳಸಿಕೊಳ್ಳಬೇಕು. ಜನಸಂಖ್ಯೆ ಹೆಚ್ಚಿದಂತೆ ಅನ್ನ ತಿನ್ನುವವರ ಸಂಖ್ಯೆಯೂ ಹೆಚ್ಚಿದೆ. ಜನಸಂಖ್ಯೆ ಹೆಚ್ಚಿದಂತೆ ಅನ್ನ ಕೊಡುವ ತಾಕತ್ತು ಕೊಡುವ ಶಕ್ತಿಯೂ ನಮ್ಮ ರೈತರದ್ದು ಹೆಚ್ಚಿದೆ ಎಂದರು.

ಅಂಬಾನಿಯಂತವರಿಂದ ಅನ್ನ ಕೊಡಲು ಸಾಧ್ಯವಿಲ್ಲ. ಅನ್ನಕೊಡುವ ಶಕ್ತಿ ಇರುವುದು ನಮ್ಮ ರೈತ ಅನ್ನದಾತನದ್ದು ಇದು ರೈತರ ಹೆಮ್ಮೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಗಿತಗೊಳ್ಳದ ಕಾಯಕವೆಂದರೆ ಕೃಷಿ. ಕಾಯಕ ಯೋಗಿ ಎಂದರೆ ರೈತ. ಕೃಷಿ ಇಲಾಖೆ ಕೆಪೆಕ್ ಸ್ಥಾಪಿಸುವ ಮೂಲಕ ರೈತ ತನ್ನ ಬೆಳೆಯನ್ನು ಹಳ್ಳಿಯಲ್ಲ ದಿಲ್ಲಿ ವಿದೇಶಕ್ಕೂ ಮಾರುವಂತಾಗಬೇಕು. ರೈತರೇ ತಮ್ಮ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್ ಮಾಡುವಂತಾಗಬೇಕು. ನಮ್ಮ ರೈತ ರಫ್ತುದಾರ ಉದ್ಯಮಿಯಾಗಬೇಕು ಎಂದು ಪಾಟೀಲ್‌ ಆಶಯ ವ್ಯಕ್ತಪಡಿಸಿದರು.

ಭಾರಿ ಮಳೆಗೆ ಕೊಳೆತ ತರಕಾರಿ, ಸಂಕಷ್ಟಕ್ಕೆ ಸಿಲುಕಿದ ಕಡವಾಡ ಸಾವಯವ ಕೃಷಿಕರುಭಾರಿ ಮಳೆಗೆ ಕೊಳೆತ ತರಕಾರಿ, ಸಂಕಷ್ಟಕ್ಕೆ ಸಿಲುಕಿದ ಕಡವಾಡ ಸಾವಯವ ಕೃಷಿಕರು

 ಸಾಮಾನ್ಯ ರೈತ ಸ್ವಾವಲಂಬಿಯಾಗಬೇಕು

ಸಾಮಾನ್ಯ ರೈತ ಸ್ವಾವಲಂಬಿಯಾಗಬೇಕು

ರೈತ ಇನ್ನೊಬ್ಬರಿಗೆ ಪರಾವಲಂಬನೆಯಾಗದೇ ತಾನೇ ವೈಜ್ಞಾನಿಕ ಬೆಲೆ‌ ಪಡೆಯುವಂತಾಗಬೇಕು. ಸಾಮಾನ್ಯ ರೈತ ಸ್ವಾವಲಂಬಿಯಾಗಬೇಕು. ಹೀಗಾಗಿ ರೈತ ಮತ್ತು ರಫ್ತುದಾರರ ಮಧ್ಯೆ ಸೇತುವೆಯಂತೆ ಕೊಂಡಿ ಜೋಡಿಸುವ ಕೆಲಸ ಕೆಪೆಕ್ ಮಾಡುತ್ತಿದೆ. ಇಡೀ ಜಗತ್ತಿನ ಬಹುತೇಕ ಕಡೆ ಆರ್ಗನಿಕ್ ಫುಡ್ (ಸಾವಯವ ಆಹಾರ) ಬಗ್ಗೆ ಹೆಚ್ಚು ಜನರು ಒಲವು ತೋರುತ್ತಿದ್ದಾರೆ. ಹೆಚ್ಚು ರಾಸಾಯನಿಕ ಬಳಕೆಯಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಹಸಿರೆಲೆ ಗೊಬ್ಬರ ಸೆಣಬು ಸೇರಿದಂತೆ ಭೂಮಿಯ ಫಲವತ್ತತೆ ಹೆಚ್ಚಿಸಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯ್ದ ಐದು ನೂರು ಜನರಿಗೆ ಸಿಎಫ್‌ಡಿಆರ್‌ಐನಲ್ಲಿ ರೈತರಿಗೆ ತರಬೇತಿ ನೀಡಲಾಗಿದ್ದು ಅವರೆಲ್ಲ ಈಗ ರೈತೋದ್ಯಮಿಗಳಾಗಿದ್ದಾರೆ. ಹಾಗೆಯೇ ರೈತರು ಕಿರು ಉದ್ಯಮಗಳನ್ನು ರೈತರು ಆರಂಭಿಸಬೇಕು ಎಂದು ಪಾಟೀಲ್‌ ಕರೆ ನೀಡಿದರು.

 ರೈತರ‌ ಆದಾಯ ದ್ವಿಗುಣಗೊಳಿಸುವ ಕೆಲಸ

ರೈತರ‌ ಆದಾಯ ದ್ವಿಗುಣಗೊಳಿಸುವ ಕೆಲಸ

ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರಾದ ಎಂ.ವಿ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, "ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಇರುವ ಸಂಸ್ಥೆ ರೈತ ಉತ್ಪಾದಕ ಸಂಸ್ಥೆಯಾಗಿದೆ. ಕೃಷಿ‌ ಸಚಿವರು ರೈತರಿಗೆ ಲಾಭ‌‌ಒದಗಿಸುವ ನಿಟ್ಟಿನಲ್ಲಿ ರೈತರನ್ನು ಎಂಟರ್‌ಪ್ರೈನರ್ಸ್‌ಗಳಾಗಿ ಮಾಡಿ ರೈತರು ‌ರೈತೋದ್ಯಮಿಗಳಾಗಬೇಕಂಬ ನಿಟ್ಟಿನಲ್ಲಿ ದೇಶದ ಹಲವು ರಾಜ್ಯಗಳಿಗೆ ಇಲಾಖಾಧಿಕಾರಿಗಳೊಂದಿಗೆ ಭೇಟಿ ನೀಡಿ ಅಧ್ಯಯನ ಮಾಡಿ ನಮ್ಮ ರಾಜ್ಯದ ರೈತರ‌ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರೈತ ಉತ್ಪಾದಕರ ಸಂಸ್ಥೆಗಳ ಹಾಗೂ ರಫ್ತುದಾರರ ಸಮಾವೇಶ ಆಯೋಜಿಸಿ ರೈತರನ್ನು ಉತ್ತೇಜಿಸುತ್ತಿದ್ದಾರೆ," ಎಂದರು.

 ಕೃಷಿ ಇಲಾಖೆ ಇಡೀ ದೇಶದಲ್ಲಿ ನಂ.1

ಕೃಷಿ ಇಲಾಖೆ ಇಡೀ ದೇಶದಲ್ಲಿ ನಂ.1

ಐದು ಪ್ರಾಂತ್ಯಗಳಲ್ಲಿ ರಫ್ತು ಉದ್ಯಮ ಕೇಂದ್ರಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ. ನಮ್ಮ ಇಲಾಖೆ ಇಡೀ ದೇಶದಲ್ಲಿ ನಂ.1ಆಗಿದೆ. ಇದರ ಮುಂದಾಳತ್ವ ಕೃಷಿ ಸಚಿವ ಬಿ.ಸಿ.ಪಾಟೀಲರಾಗಿದೆ. ರೈತರು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕಾಲಕ್ಕೆ ತಕ್ಕಂತೆ ಬದಲಾಗಿ ನೇರವಾಗಿ ಮಾರುಕಟ್ಟೆಗೆ ರಫ್ತುದಾರರಾಗಬೇಕು. ಈ ಮೂಲಕ ನೇರವಾಗಿ ಗ್ರಾಹಕರನ್ನು ಮುಟ್ಟಬೇಕೆಂಬ ಎಂಬ ಉದ್ದೇಶ ನಮ್ಮದು ಎಂದರು.

 ಮೌಲ್ಯಾಧರಿತ ಉತ್ಪನ್ನಗಳನ್ನು ತಯಾರಿಸುವ ಉದ್ದೇಶ

ಮೌಲ್ಯಾಧರಿತ ಉತ್ಪನ್ನಗಳನ್ನು ತಯಾರಿಸುವ ಉದ್ದೇಶ

ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ ಮಾತನಾಡಿ, ಜರ್ಮನಿ, ಇಟಲಿ, ಸ್ವಿಜರ್ಲೆಂಡ್ ದೇಶಗಳಿಗೆ ಸಚಿವರೊಂದಿಗೆ ಇತ್ತೀಚೆಗೆ ಕೃಷಿ ಅಧ್ಯಯನಕ್ಕೆ ಭೇಟಿ ನೀಡಲಾಗಿದೆ. ನಿಜವಾದ ಅರ್ಥದಲ್ಲಿ ಬೆಳೆದ ರೈತನಿಗೆ ಯೋಗ್ಯ ಬೆಲೆಯ ಜೊತೆಗೆ ಮೌಲ್ಯಾಧರಿತ ಉತ್ಪನ್ನಗಳನ್ನು ತಯಾರಿಸುವ ಉದ್ದೇಶ ಹೊಂದಲಾಗಿದೆ. ರೈತ ಬೆಳೆಗಷ್ಟೇ ಸೀಮಿತವಾಗದೇ ರೈತನ ಲಾಭವನ್ನು ದ್ಚಿಗುಣಗೊಳಿಸಲು ರೈತರನ್ನು ತಂಡತಂಡವಾಗಿ ತರಬೇತುಗೊಳಿಸಿ ರೈತ ಉದ್ಯಮಿಯಾಗಿ ಆದಾಯವನ್ನು ಹೆಚ್ಚಿಸುವುದು ಈ ಸಮಾವೇಶದ ಉದ್ದೇಶವಾಗಿದೆ. ರೈತ ಸಿಂಗಲ್ ವಿಂಡೋ ಏಜೆನ್ಸಿ ಮೂಲಕ ನೇರವಾಗಿ ರಫ್ತುದಾರರನಾಗಿ ಮಾಡುವ ಉದ್ದೇಶ ಯೋಜನೆ ಇದಾಗಿದ್ದು, ಈಗಾಗಲೇ ರಾಜ್ಯದಲ್ಲಿ ಹತ್ತು ಲಕ್ಷ ರೈತೋತ್ಪಾದನ ಸಂಘಟನೆ‌ ಸದ್ಯ ನಮ್ಮ ರಾಜ್ಯದಲ್ಲಿ ಆಗಿದೆ. ಮುಂದಿನ ದಿನಗಳಲ್ಲಿ ಇವು ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದರು.

Recommended Video

ಬೆಂಗಳೂರಿನಲ್ಲೊಂದು ದಾರುಣ ಘಟನೆ: ಕುಟುಂಬವೇ ದುರಂತ ಅಂತ್ಯ | OneIndia

English summary
Agriculture Minister B. C. Patil said that export lab is being started to make farmers exporters and double their profits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X