ಡಿಆರ್ ಡಿಒ: ಜಗತ್ತಿನ ಅತ್ಯುನ್ನತ ಸಂಶೋಧನಾ ಕೇಂದ್ರ ಸ್ಥಾಪನೆ

ನವದೆಹಲಿ, ಅಕ್ಟೋಬರ್, 05 : ಡಿಆರ್ ಡಿಒ (Defence Research and Development Organization) ಸಂಸ್ಥೆಯು ಸಮುದ್ರ ಮಟ್ಟದಿಂದ ಸುಮಾರು 17,600 ಅಡಿ ಎತ್ತರದಲ್ಲಿ ಜಗತ್ತಿನ ಅತ್ಯಂತ ದೊಡ್ಡದಾದ ಸಂಶೋಧನಾ ಭೂಕೇಂದ್ರವನ್ನು ಲೋಕಾರ್ಪಣೆಗೊಳಿಸಿದೆ.

ಜಮ್ಮು ಕಾಶ್ಮೀರದ ಲಡಾಕ್ ಬಳಿಯ ಪ್ಯಾಂಗಾಂಗ್ ನ ಚೆಂಗ್ಲಾದಲ್ಲಿ ಭೂಕೇಂದ್ರವನ್ನು ಉದ್ಘಾಟಿಸಿದ ಡಿಆರ್ ಡಿಒ ಸಂಸ್ಥೆಯ ನಿರ್ದೇಶಕ ಕ್ರಿಸ್ಟೋಫರ್ 'ಈ ಭೂಕೇಂದ್ರವು ಆಹಾರ ಮತ್ತು ಕೃಷಿ ಸಂಶೋಧನೆ ಹಾಗೂ ಭೂ ವಿಜ್ಞಾನದ ಚಟುವಟಿಕೆಗಳಿಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.[ಡಿಆರ್ ಡಿಒ ಡೈರೆಕ್ಟರ್ ಆಗಿ ಜೆ. ಮಂಜುಳಾ ನೇಮಕ]

DRDO inaugurates world’s highest research and development centre in ChangLa

ಈ ಭೂಕೇಂದ್ರದಲ್ಲಿ ವಿಜ್ಞಾನದ ಹಲವಾರು ಸಂಶೋಧನೆ ಕೈಗೊಳ್ಳಲು ಅವಕಾಶವಿದೆ. ಮಾನವನ ಅಂಗಾಂಗ ಸಂಶೋಧನೆ, ಹಲವು ವರ್ಷಗಳಿಂಧ ಸಂರಕ್ಷಣೆ ಮಾಡಿದ ಸಸಿಗಳ ತಳಿಗಳನ್ನು ಪರೀಕ್ಷೆಗೆ ಒಳಪಡಿಸಬಹುದು, ಮಣ್ಣು ರಹಿತ ಸೂಕ್ಷ್ಮ ತೋಟದ ತಂತ್ರಜ್ಞಾನ ಬಗೆಗಿನ ಸಂಶೋಧನೆ, ಔ‍ಷಧಿ ಸಸ್ಯಗಳ ವೃದ್ಧಿ ಇನ್ನಿತರ ಸಂಶೋಧನೆಗಳಿಗೆ ಇಲ್ಲಿ ಮುಕ್ತವಾದ ಅವಕಾಶವಿದೆ ಎಂದು ಹೇಳಿದ್ದಾರೆ.[ಮೋದಿ ಸಲಹೆ: ಡಿಆರ್ ಡಿಓ ನಡೆ ಏನು?]

'ಡಿಆರ್ ಡಿಒ ಸ್ಥಾಪಿಸಿದ ಈ ಪ್ರಮುಖ ಕೇಂದ್ರದಲ್ಲಿ ಎಲೆಕ್ಟ್ರಾನಿಕ್ ಮತ್ತು ಸಂವಹನ ಸಲಕರಣೆಗಳು, ಇವುಗಳಿಗೆ ಸಂಬಂಧಿಸಿದ ಪರೀಕ್ಷೆಗಳ ಜೊತೆಗೆ ಜೀವ ವಿಜ್ಞಾನದ ಎಲ್ಲಾ ಸಂಶೋಧನೆಗಳಿಗೂ ಪೂರಕ ಪರಿಸರ ಒದಗಲಿದೆ' ಎಂದು ಡಿಆರ್ ಡಿಒ ಸಂಸ್ಥೆಯ ಜೀವ ವಿಜ್ಞಾನದ ಡಿಜಿ ಯಾದ ಭುವನೇಶ್ ಕುಮಾರ್ ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+