ಬೆಂಗಳೂರು ಕಾವೇರಿ ಕಣಿವೆಯುದ್ದಕ್ಕೂ ಮಳೆ ಮಳೆ

ಹಿಂದಿನ ಸುದ್ದಿ: ರಾಜ್ಯದಲ್ಲಿ ಕಾವೇರಿ ಕಣಿವೆಯುದ್ದಕ್ಕೂ ನಿನ್ನೆ ರಾತ್ರಿಯಿಂದ ಅಕ್ಷರಶಃ ಹೊತ್ತಿ ಉರಿಯಬೇಕಿತ್ತು. ಆದರೆ ಎಲ್ಲವೂ ಶಾಂತ ಶಾಂತ ಶಾಂತ. ಥ್ಯಾಂಕ್ಸ್ ಟು ಸಕಾಲಿಕ (ಅಕಾಲಿಕ) ಮಳೆ.
ಹೌದು ನಿನ್ನೆ ಪ್ರಧಾನಿ ಸಿಂಗ್ ಸಿಆರ್ ಎ ಆಜ್ಞೆ ವಾಪಸ್ ಪಡೆಯೋಲ್ಲ. ತಮಿಳುನಾಡಿಗೆ ನೀರು ಬಿಡಲೇಬೇಕು ಎಂದು ಕರ್ನಾಟಕದ ಪ್ರಯತ್ನಗಳಿಗೆ ತಣ್ಣಿರೆರೆಚಿದ ಬಳಿಕ ಸುಪ್ರೀಂಕೋರ್ಟ್ ಸಹ ತಡೆಯಾಜ್ಞೆ ನೀಡೊಲ್ಲ ಎನ್ನುತ್ತಿದ್ದಂತೆ ಇತ್ತ ಕರ್ನಾಟಕ ಹೊತ್ತಿ ಉರಿಯಲು ಅಣಿಯಾಗುತ್ತಿತ್ತು. ಆದರೆ ಕರ್ನಾಟಕ ಸರಕಾರ ದಿಟ್ಟ ಕ್ರಮ ಕೈಗೊಂಡು ತಮಿಳುನಾಡಿಗೆ ಒಂದು ಹನಿ ನೀರೂ ಬಿಟ್ಟಿಲ್ಲ. ಇದರಿಂದ ಕರ್ನಾಟಕ ಸ್ವಲ್ಪ ಶಾಂತವಾಗಿತ್ತು.
ಇಂತಹ ವೇಳೆಯಲ್ಲೇ ಕಾಕತಾಳಿಯವೋ ಎಂಬಂತೆ ನಿನ್ನೆ ಮಧ್ಯ ರಾತ್ರಿಯಿಂದ ಕಾವೇರಿಯ ತವರೂ ಸೇರಿದಂತೆ ಕಣಿವೆಯುದ್ದಕ್ಕೂ ಭರ್ಜರಿ ಮಳೆಯಾಗುತ್ತಿದೆ. ಇದರಿಂದ ರಾಜ್ಯದ ಜನತೆ ಅದರಲ್ಲೂ ನಮ್ಮ ರೈತರ ಮೈ-ಮನಗಳು ಒಂದಷ್ಟು ತಂಪಾಗಿವೆ. ಇತ್ತ ಕಾವೇರಿ ನದಿ ನೀರು ಫಲಾನುಭವಿಯಾದ ಬೆಂಗಳೂರು ಮೇಲೆ ಮಳೆ ಮೋಡಗಳು ಆವರಿಸಿದ್ದು, ಆಗ್ಲೋ ಈ್ಲಗ್ಲೋ ಮಳೆಯಾಗುವ ಅಂದಾಜಿದೆ.
ನಿನ್ನೆ ರಾತ್ರಿಯಿಂದ ಶ್ರೀರಂಗಪಟ್ಟದಲ್ಲಿ ಜಾಸ್ತಿ ಮಳೆಯಾಗುತ್ತಿದೆ. ಒಂದೆರಡು ಕಡೆ ನಾಲೆಗಳು ಒಡೆದಿವೆ. ವಿರಿಜಾ, ಆರ್ ಬಿಎಲ್ಎಲ್ ನಾಲೆಗಳು ಒಡೆದು ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ಇದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಕೆಆರ್ ಎಸ್ ಅಣೆಕಟ್ಟಿಗೆ 5 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಕೆಆರ್ ಎಸ್ ನಲ್ಲಿ ಇಂದಿನ ನೀರಿನ ಮಟ್ಟ 104.29 ಅಡಿ. ಮೈಸೂರು, ಮಂಡ್ಯ, ಮಡಿಕೇರಿಯಲ್ಲೂ ಸಖತ್ ಮಳೆಯಾಗಿದೆ.












Click it and Unblock the Notifications