ಜಯಲಲಿತಾರಿಗೆ ದೇವೇಗೌಡರಿಂದ ಆತ್ಮೀಯ ಆಹ್ವಾನ

ಎಐಎಡಿಎಂಕೆ ಮುಖಂಡರಲ್ಲದೆ, ಡಿಎಂಕೆ ಕರುಣಾನಿಧಿ ಅವರು ಕೂಡಾ ಒಂದು ನಿಯೋಗ ಮಾಡಿಕೊಂಡು ಕಾವೇರಿಕೊಳ್ಳದಲ್ಲಿ ಒಮ್ಮೆ ಸುತ್ತಾಡಿಕೊಂಡು ಬರಲಿ. ನಮ್ಮ ಜನರ ಸಂಕಷ್ಟಗಳು, ಬರ ಪರಿಸ್ಥಿತಿ ಕಣ್ಣಾರೆ ನೋಡಲಿ ಆಗಲಾದರೂ ಅವರ ಮನಸ್ಥಿತಿ ಬದಲಾಗುತ್ತದೆಯೋ ನೋಡೋಣ ಎಂದು ದೇವೇಗೌಡ ಅವರು ಹೇಳಿದ್ದಾರೆ.
ನಾವು ನೀರಾವರಿ, ಕೃಷಿಗಾಗಿ ಮಾತ್ರ ನೀರು ಉಳಿಸಿಕೊಂಡಿಲ್ಲ. ಕುಡಿಯುವುದಕ್ಕೆ ನೀರಿಲ್ಲದ್ದಂತೆ ಪರದಾಡುವ ಸ್ಥಿತಿ ಎದುರಾಗಿದೆ. ಜಯಲಲಿತಾ ಅವರು ಬರುವುದಾದರೆ ನಾನೇ ಖುದ್ದಾಗಿ ಅವರನ್ನು ಆಹ್ವಾನಿಸುತ್ತೇನೆ ಎಂದು ದೇವೇಗೌಡರು ಹೇಳಿದರು.
ರಾಜೀನಾಮೆ ಪರಿಹಾರವಲ್ಲ: ಜೆಡಿಎಸ್ ಶಾಸಕರು ಮತ್ತು ಸಂಸದರು ಭಾವನಾತ್ಮಕವಾಗಿ ಯೋಚಿಸುತ್ತಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಮಾತುಗಳನ್ನಾಡಿದ್ದಾರೆ. ಆದರೆ, ಇದರಿಂದ ಯಾವುದೇ ಪ್ರಯೋಜನವಿಲ್ಲ. ಜೆಡಿಎಸ್ ನ ಯಾವೊಬ್ಬ ಜನಪ್ರತಿಧಿಯೂ ರಾಜೀನಾಮೆ ನೀಡುವುದಿಲ್ಲ ಎಂದು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಸಂಸದ ಚೆಲುವರಾಯ ಸ್ವಾಮಿ, ಕುಮಾರಸ್ವಾಮಿ ರಾಜೀನಾಮೆ ನೀಡಿದರೆ ಪಕ್ಷದ ಪರವಾಗಿ ಹೋರಾಟ ನಡೆಸುವವರು ಯಾರು. ಪಕ್ಷ ಇರುವುದು ವಾಸ್ತವಾಂಶದ ಮೇಲೆ ಹೋರಾಟ ನಡೆಸುವುದಕ್ಕಾಗಿ. ಈ ಹೋರಾಟವು ಯಾವುದೇ
ರಾಜಕೀಯ ಲಾಭ ಪಡೆಯುವುದಕ್ಕಾಗಿ ಅಲ್ಲ ಎಂದರು.
ತಮಿಳುನಾಡು ಸರಕಾರ ಯಾವುದೆ ಅಡ್ಡಿ-ಆತಂಕವಿಲ್ಲದೆ ಏನು ಬೇಕಾದರೂ ಮಾಡುವಂತಹ ಸ್ವಾತಂತ್ರ್ಯ ಪಡೆದುಕೊಂಡಿರುವುದಕ್ಕೆ ಹೊಗೇನಕಲ್ ಪ್ರದೇಶದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಕುಡಿಯುವ ನೀರಿನ ಯೋಜನೆಯೆ ಸಾಕ್ಷಿ. ಇಂತಹ ವಿಚಾರಗಳನ್ನು ಪ್ರಧಾನಮಂತ್ರಿಗೆ ಮನವರಿಕೆ ಮಾಡಿಕೊಡುವ ಕೆಲಸವಾಗಬೇಕಿದೆ ಎಂದು ಅವರು ಸರಕಾರಕ್ಕೆ ಸಲಹೆ ನೀಡಿದರು.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಯ ಮತವನ್ನು ಪಡೆದು ಕೇಂದ್ರವನ್ನು ಪ್ರತಿನಿಧಿಸುವವರು ರಾಜೀನಾಮೆ ನೀಡಿ ಹೊರ ಬಂದರೆ ಹೋರಾಟ ನಡೆಸುವರು ಯಾರು ಎಂದು ತಿಳಿಸಿ ಅವರ ಮನ ಒಲಿಸಿದ್ದೇನೆ. ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
60 ವರ್ಷಗಳಿಂದ ನಮ್ಮ ಪಕ್ಷವೂ ಸೇರಿದಂತೆ ಎಲ್ಲಾ ನಾಯಕರು ಅವರವರ ಚೌಕಟ್ಟಿನಲ್ಲಿ ಉತ್ತಮ ಪ್ರಯತ್ನ ನಡೆಸಿದ್ದಾರೆ. ಈವಿಚಾರದಲ್ಲಿ ಯಾರನ್ನೂ ದೂರುವಂತೆ ಇಲ್ಲ ಎಂದರು. ಈಗಾಗಲೇ 2 ಲಕ್ಷದ 43 ಸಾವಿರ ಕ್ಯೂಸೆಕ್ ನೀರು ಹೊರ ಹೋಗಿದೆ. ರಾಜ್ಯ ಎದುರಿಸುತ್ತಿರುವ ಸಮಸ್ಯೆಯ ಗಂಭೀರತೆಯನ್ನು ಪ್ರಧಾನಿ ಅವರಿಗೆ ಮನವರಿಕೆ ಮಾಡಿದ್ದೇನೆ ಎಂದು ದೇವೇಗೌಡ ಹೇಳಿದರು.


Click it and Unblock the Notifications
