ಲಾಲ್ಬಾಗ್ ಫಲಪುಷ್ಪ ಪ್ರದರ್ಶನ ಆರಂಭ, ಜ. 20-29

ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಸದಾನಂದ ಗೌಡರು, ಮುಂದಿನ ಬಜೆಟ್ ನಲ್ಲಿ ಬಾಗಲಕೋಟೆ ಸೇರಿದಂತೆ ವಿವಿಧೆಡೆ ಇರುವ ತೋಟಗಾರಿಕಾ ವಿವಿಗಳಿಗೆ ಹೆಚ್ಚಿನ ಅನುದಾನ ನೀಡಲು ನಿರ್ಧರಿಸಲಾಗಿದೆ. ಕಳೆದ ವರ್ಷ ತೋಟಗಾರಿಕಾ ಇಲಾಖೆ 3,630 ಕೋಟಿ ರು ಆದಾಯ ಗಳಿಸಿದೆ. ರಾಜ್ಯದ ಅನೇಕ ಕಡೆ ಮಿನಿ ಲಾಲ್ ಬಾಗ್ ಗಳನ್ನು ಸ್ಥಾಪಿಸಲು ಯೋಜಸಲಾಗಿದೆ ಎಂದರು.
ಸ್ವಾತಂತ್ರೋತ್ಸವ ಪುಷ್ಪಪ್ರದರ್ಶನದಲ್ಲಿ ನೂರನೇ ವರ್ಷ ತುಂಬಿರುವ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯೊಂದಿಗೆ ಈ ಬಾರಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.
ಸುಮಾರು 240 ಎಕರೆ ವಿಸ್ತೀರ್ಣದ ಹೂದೋಟದಲ್ಲಿ ಜ.26ರಿಂದ ಸುಮಾರು 30 ಅಡಿ ಎತ್ತರದ ಬುದ್ಧ ಸ್ತೂಪ ಶಾಂತಿ ಮಂತ್ರ ಸಾರಲಿದೆ.400,000 ಹೂಗಳು, 150,000 ರೋಸ್ ಬಳಸಿ ಬುದ್ಧ ಸ್ತೂಪ ನಿರ್ಮಿಸಲಾಗಿದೆ.
ಊಟಿ ಮೂಲದ ಪುಷ್ಪಸಂಯೋಜಕರು ಜಲಪಾತದ ವಿನ್ಯಾಸ ನಿರ್ಮಿಸಿದ್ದಾರೆ. ನೆದರ್ಲೆಂಡ್ ನ ವಿಶೇಷ ತಂಡ ತಮ್ಮ ದೇಶದ ಹೂಗಳನ್ನು ಗ್ಲಾಸ್ ಹೌಸ್ ನಲ್ಲಿ ವಿಶೇಷ ಅಲಂಕಾರದೊಂದಿಗೆ ಪ್ರದರ್ಶಿಸುತ್ತಿದ್ದಾರೆ.
ವಿವಿಧ ಯೋಜನೆಗಳು: ಪುಷ್ಪ ಬೆಳೆಗಳ ಮಾರುಕಟ್ಟೆಗೆ ಅಗತ್ಯ ಒತ್ತು ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ತುಮಕೂರು, ಉಡುಪಿ, ಉತ್ತರ ಕನ್ನಡ, ಮಡಿಕೇರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ 15 ಕೋಟಿ ವೆಚ್ಚದ ಪುಷ್ಪ ಹರಾಜು ಕೇಂದ್ರ ಸ್ಥಾಪನೆ ಅನುಷ್ಠಾನ ಜಾರಿಯಲ್ಲಿದೆ.
ಕೃಷಿ ವಿಶ್ವವಿದ್ಯಾಲಯದ ಜೊತೆ ತೋಟಗಾರಿಕೆ ಇಲಾಖೆ ಕೈಜೋಡಿಸಿ ರಾಜ್ಯದ ವಿವಿಧೆಡೆ ಮಿನಿ ಲಾಲ್ ಬಾಗ್ ಗಳಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುವುದು. ಕಳೆದ ವರ್ಷ ಇಲಾಖೆ ಕೋಟ್ಯಾಂತರ ರೂ ಆದಾಯ ಗಳಿಸಿದ್ದು, ಎಲ್ಲವೂ ಈ ವರ್ಷದ ಹೊಸ ಯೋಜನೆಗಳಿಗೆ ವಿನಿಯೋಗಿಸಲಾಗುವುದು ಎಂದು ತೋಟಾಗರಿಕಾ ಇಲಾಖೆ ಅಧಿಕಾರಿಗಳು ಹೇಳಿದರು.












Click it and Unblock the Notifications