ನಕ್ಸಲರು ಕೂಡ ಮಣ್ಣಿನ ಮಕ್ಕಳೇ: ದೇವೇಗೌಡ

HD Devegowda describes Maoists as the sons of the soil
ಪಾಟ್ನಾ, ಸೆ.2: ನಾಗರೀಕ ಸೌಲಭ್ಯ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಮನೆ ಕಳೆದುಕೊಂಡು ಬೀದಿಗೆ ಬೀಳುವ ಬುಡಕಟ್ಟು ಜನಾಂಗದವರೇ ನಕ್ಸಲ್ ಗಳಾಗುತ್ತಿರುವುದು. ಇವರು ಅಕ್ಷರಶಃ ಮಣ್ಣಿನ ಮಕ್ಕಳು. ಕೈಗಾರಿಕೆಗಳ ಅಭಿವೃದ್ಧಿಗಾಗಿ ಇವರ ಜೀವನವನ್ನು ಹಾಳು ಮಾಡಲಾಗುತ್ತಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಮನೆ ಕಳೆದುಕೊಂಡ ರೈತರು, ಹಿಂದುಳಿದ ವರ್ಗದವರು ಕೈಲಿ ಆಯುಧ ಹಿಡಿದು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದರೆ ಅದರಲ್ಲಿ ತಪ್ಪೇನಿದೆ.

ಆರ್ಥಿಕ ಪ್ರಗತಿ ಹೆಸರಿನಲ್ಲಿ ಸರ್ಕಾರ ನೀಡುತ್ತಿರುವ ವರದಿ ಸಂಪೂರ್ಣ ಸುಳ್ಳು. ದೇಶದಲ್ಲಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಬಡವರ ನೋವಿನ ಕೂಗು ಸರ್ಕಾರದ ಕಿವಿ ಮುಟ್ಟುತ್ತಿಲ್ಲ. ಎಲ್ಲಾ ಸ್ತರ, ಎಲ್ಲಾ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿ ಹೊಂದಿದಾಗ ಮಾತ್ರ ಆರ್ಥಿಕ ಪ್ರಗತಿ ಸಾಧನೆಯ ವಿಷಯ ಮಾತನಾಡಬೇಕು. ಈ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ದೇವೇಗೌಡ ಕಿಡಿಕಾರಿದ್ದಾರೆ.

ಜನತಾ ಪರಿವಾರವನ್ನು ಮತ್ತೆ ಒಗ್ಗೂಡಿಸುವ ಕನಸು ಹೊತ್ತಿರುವ ದೇವೇಗೌಡ,ಶೋಷಿತ ವರ್ಗದ ದನಿಯಾಗಿ ಕೊನೆಯುಸಿರಿರುವವರೆಗೂ ದುಡಿಯುವುದಾಗಿ ಘೋಷಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+