ಚಿಗರಿ ಹಾವಳಿ: ಬೆಳೆ ರಕ್ಷಣೆಗೆ ವಿನೂತನ ಮಾರ್ಗ ಹುಡುಕಿಕೊಂಡ ಹುಬ್ಬಳ್ಳಿ ಜಿಲ್ಲೆ ಅನ್ನದಾತ
ಹುಬ್ಬಳ್ಳಿ, ಜುಲೈ, 17: ಕಳೆದ ವರ್ಷ ಅತಿವೃಷ್ಟಿ ಬರೆ ಆಯ್ತು, ಇನ್ನು ಈ ವರ್ಷ ಅನಾವೃಷ್ಟಿ ಬಿಟ್ಟು ಬಿಡದೆ ಕಾಡುತ್ತಿರುವ ಬೆನ್ನಲ್ಲೇ ಜಿಲ್ಲೆಯ ರೈತನಿಗೆ ಮತ್ತೊಂದು ಕಂಟಕ ಎದುರಾಗಿದೆ. ಮಳೆ ಇಲ್ಲದ ಕಾರಣ ಮುಂಗಾರು ಬೆಳೆಗಳು ನೆಲಕಚ್ಚಿವೆ. ಅದರಲ್ಲೂ ಅಷ್ಟೋ ಇಷ್ಟೋ ಬಂತಂತಹ ಬೆಳೆಗಳನ್ನು ಉಳಿಸಿಕೊಳ್ಳಲು ಇಲ್ಲಿನ ರೈತರು ಭರ್ಜರಿ ಪ್ಲಾನ್ ಮಾಡಿದ್ದಾರೆ.
ರಸ್ತೆ ಬದಿ ಬಳಸಿ ಬಿಸಾಡಿದ ಬಿಯರ್ ಬಾಟಲಿ ಆಯ್ದು ತಂದು ಕಟ್ಟಿಗೆಗೆ ನೇತು ಹಾಕಿ ಅವುಗಳ ಶಬ್ಧದಿಂದ ಶೇಂಗಾ, ಹೆಸರು, ಉದ್ದು, ಸೋಯಾಬಿನ್ ಬೆಳೆಯಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ನಿತ್ಯ ಚಿಗುರಿಗಳ ಕಾಟದಿಂದ ಕಾಯುತ್ತಾ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುವಂತಹ ಪರಿಸ್ಥಿತಿ ಇದೆ.

ಧಾರವಾಡ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಜಮೀನಿಗೆ ಚಿಗರಿ ಹಾಡುಹಗಲೇ ಹಸಿವನ್ನು ತಣಿಸಿಕೊಳ್ಳಲು ಅನ್ನದಾತನ ಬೆಳೆಗಳನ್ನು ತಿನ್ನುತ್ತಿವೆ. ಮಳೆ ಕೊರತೆ ಜೊತೆಗೆ ಚಿಗರಿ ಕಾಟದಿಂದ ಬೆಳೆಗಳೆಲ್ಲ ಮಣ್ಣು ಪಾಲಾಗುವ ಆತಂಕದಲ್ಲಿ ಅನ್ನದಾತ ಇದ್ದಾನೆ ಎಂದು ರೈತ ಮುಖಂಡ ಬಸವರಾಜ ಯೊಗಪ್ಪನವರ ಹೇಳಿದ್ದಾರೆ.
ಪ್ರಸಕ್ತವಾಗಿ ಒಂದು ತಿಂಗಳುಗಳ ಕಾಲ ತಡವಾಗಿ ಬಿತ್ತನೆಯಾಗಿದ್ದರಿಂದ ಈಗಷ್ಟೇ ಬೆಳೆಗಳು ಮೇಲೆಳುತ್ತಿವೆ. ಆದರೆ ಈ ನಡುವೆ ಚಿಗರಿ ಕಾಟದಿಂದ ರೈತ ಬೇಸತ್ತು ಹೋಗಿದ್ದಾನೆ. ಸಾಲ ಮಾಡಿ ಬೀಜ, ಗೊಬ್ಬರ ಹಾಕಿ ಬಿತ್ತನೆ ಮಾಡಿದ್ದ ರೈತನಿಗೆ ಬೆಳೆ ಇನ್ನೇನು ಮೇಲೆ ಬರುತ್ತಿದ್ದಂತೆ ಬೆಳೆಗಳನ್ನು ಹಾಳಾಗುತ್ತಿರುವುದನ್ನು ಕಂಡು ಮರಗುತ್ತಿದ್ದು, ಏನಪ್ಪಾ ಮಾಡೋದು ಎಂದು ಕೈ ಕಟ್ಟಿ ಕುಳಿತ್ತಿದ್ದಾನೆ.
ಬೇಗನೆ ಬಿತ್ತನೆಯಾಗಿದ್ದರೆ ಈ ವೇಳೆ ಇವುಗಳ ಕಾಟದಿಂದ ಪಾರಾಗಬಹುತ್ತು. ಮೊದಲೇ ಎರಡೆಲೆ ಮೇಲೆ ಬಂದಿರುವುದರಿಂದ ಆ ಎರಡು ಎಲೆ ತಿನ್ನುತ್ತಿರುವುದರಿಂದ ಬೆಳೆಯೇ ಸಂಪೂರ್ಣ ನಾಶ ಆಗಲಿದೆ ಎಂದು ನೊಂದ ರೈತ ಬೀರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯ ಮುಂಗಾರು ಬೆಳೆಗೆ ಚಿಗರಿಗಳ ಕಾಟ ಅತಿಯಾಗಿರುವ ಕಾರಣ ರೈತರು ಸ್ಥಳೀಯ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ನಮ್ಮ ಬೆಳೆ ಉಳಿಸಿಕೊಡಿ, ಇಲ್ಲವೆ ಬೆಳೆ ವಿಮೆ, ಬೆಳೆ ಪರಿಹಾರವನ್ನಾದರೂ ಸರ್ಕಾರ ಕೊಡಲಿ ಎನ್ನುತ್ತಿದ್ದಾರೆ. ಚಿಗರಿಗಳ ಹಿಂಡು ಹೊಲಗಳಿಗೆ ದಾಳಿ ಮಾಡಿ ಬೆಳೆಗಳನ್ನೆಲ್ಲ ನಾಶ ಮಾಡುತ್ತಿವೆ.
ಕಣ್ಣೆದುರೇ ಬೆಳೆಗಳು ನಾಶವಾಗುತ್ತಿರುವುದನ್ನು ಕಂಡು ಕೆಲವು ರೈತರು ಮಧ್ಯರಾತ್ರಿ ಹೊಲಕ್ಕೆ ಹೋಗಿ ಚಿಗರಿ ಬೆದರಿಸುವ ಕಾರ್ಯ ಮಾಡುತ್ತಿದ್ದಾರೆ. ಇನ್ನು ಹೊಲಗಳಲ್ಲಿ ಬೀಯರ್ ಬಾಟಲಿಗಳನ್ನು ಕಟ್ಟುವ ಮೂಲಕ ಚಿಗರಿ ಬರದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಇಲ್ಲಿನ ರೈತರು ಹೇಳುತ್ತಿದ್ದಾರೆ.












Click it and Unblock the Notifications