Deemed forest: ರೈತರಿಗೆ ಸಂಕಷ್ಟ ತಂದೊಡ್ಡಿದ ಡೀಮ್ಡ್ ಫಾರೆಸ್ಟ್- ಬರೋಬ್ಬರಿ 50 ಸಾವಿರ ಎಕರೆ ಪ್ರದೇಶಕ್ಕೆ ಕಂಟಕ
ಚಿಕ್ಕಬಳ್ಳಾಪುರ ಜೂನ್ 26: ಡೀಮ್ಡ್ ಫಾರೆಸ್ಟ್ (ಪರಿಭಾವಿತ ಅರಣ್ಯ ಪ್ರದೇಶ) ಸದ್ಯ ಜಿಲ್ಲೆಯ ರೈತರನ್ನು ಕಂಗೆಡಿಸಿದೆ. ನಮ್ಮದೇ ಜಾಗ ಎಂದು ಸಿಕ್ಕ ಸಿಕ್ಕ ಕಡೆ ಅರಣ್ಯ ಇಲಾಖೆ ಬೇಲಿ ಹಾಕುತಿರುವುದರಿಂದ ಜಮೀನನ್ನು ಸಾಗುವಳಿ ಮಾಡಿ ಜೀವನ ನಡೆಸುತ್ತಿದ್ದ ರೈತರು ಕಂಗಾಲಾಗಿದ್ದಾರೆ. ರೈತರು ಮಾತ್ರವಲ್ಲ ಸರಕಾರಿ ಜಾಗವೂ ಸಿಗದೇ ಜಿಲ್ಲೆಯ ಅಭಿವೃದ್ಧಿಗೂ ಹಿನ್ನಡೆಯಾಗಿದೆ.
ಜಿಲ್ಲೆಯಲ್ಲಿ ಪರಿಭಾವಿತ ಅರಣ್ಯವೆಂದು ಸರಕಾರದಿಂದ ಘೋಷಣೆಯಾಗಿರುವ ಪ್ರದೇಶದಲ್ಲಿ ಪ್ರಸ್ತುತ ಸ್ವಾಭಾವಿಕ ಗಿಡ, ಮರ, ಕೆರೆ ಕುಂಟೆ, ಕಲ್ಲುಬಂಡೆ, ಲೀಸ್ ಲ್ಯಾಂಡ್, ಮುಜರಾಯಿ ಜಮೀನು, ಅರಣ್ಯ, ರೈತರ ಹಿಡುವಳಿ ಜಮೀನು ಸೇರಿದೆ. ಆದರೆ ಅದ್ಯಾವ ಮಾನದಂಡ ಇಟ್ಟುಕೊಂಡು ಡೀಮ್ಸ್ ಫಾರೆಸ್ಟ್ ಎಂದು ಘೋಷಿಸಿದ್ದಾರೋ ಗೊತ್ತಿಲ್ಲ. ಜಿಲ್ಲೆಯ ಬರೋಬ್ಬರಿ 50 ಸಾವಿರ ಎಕರೆ ಪ್ರದೇಶ ಈಗ ವಿವಾದಕ್ಕೆ ಸಿಲುಕಿದೆ.

ಸರಕಾರಕ್ಕೂ ಇಲ್ಲ ಜಾಗ!
ಇನ್ನೊಂದೆಡೆ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಾಗಿರುವ ಕಟ್ಟಡಗಳ ನಿರ್ಮಾಣ ಸೇರಿದಂತೆ ಇನ್ನಿತರ ಮೂಲಸೌಕರ್ಯ ಕಲ್ಪಿಸಲು ಅಗತ್ಯವಾಗಿ ರುವ ಜಾಗವೂ ನಗರಗಳ ಹಾಸುಪಾಸು ಸಿಗುತ್ತಿಲ್ಲ, ಖಾಲಿ ಇರುವ ಜಾಗಕ್ಕೆಲ್ಲಾ ಡೀಮ್ಸ್ ಫಾರೆಸ್ಟ್ ಎಂದು ತೋರಿಸುತ್ತಿದ್ದು, ಸರಕಾರಿ ಜಾಗ ಸಿಗುವುದೇ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಪುರಾತನ ಕಾಲದ ಕಾಯಿದೆ ಯಿಂದ ಇರುವ ಖಾಲಿ ಭೂಮಿಯೆಲ್ಲಾ ಪರಿಭಾವಿತ ಅರಣ್ಯ ಪ್ರದೇಶ ಎಂದು ಘೋಷಿಸಿದ್ದು ರೈತರನ್ನು ಕಂಗೆಡಿಸಿದೆ.
ಸಮಸ್ಯೆ ಏನು?
ರಾಜ್ಯದಲ್ಲಿ ನಿಗದಿತ ಪ್ರಮಾಣದ ಅರಣ್ಯವಿರಬೇಕು ಎಂದು 1982ರಲ್ಲಿ ಕಂದಾಯ ಇಲಾಖೆಯ ಅಧಿ ನದಲ್ಲಿದ್ದ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಲಾಯಿತು. ಇದರ ಆಧಾರದ ಮೇಲೆ ಆರಣ್ಯ ಇಲಾಖೆ ಅಧಿಕಾರಿಗಳು ಸಾಗುವಳಿದಾರರನ್ನು ಒಕ್ಕ ಲೆಬ್ಬಿಸಲು ಆರಂಭಿಸಿದರು. ಇದು ರಾಜ್ಯ ವ್ಯಾಪಿ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಯಿಂದ ಜಂಟಿ ಸಮೀಕ್ಷೆ ನಡೆಸಲು ರಾಜ್ಯ ಸರಕಾರ ನಿರ್ಧರಿಸಿತು.

ಸುಪ್ರೀಂಕೋರ್ಟ್ ನ 1996 ರ ಗೋಧವರ್ಮನ್ ಪ್ರಕರಣದ ತೀರ್ಪಿನ ಮಾನದಂಡದಂತೆ ಇಂತಿಷ್ಟು ಪ್ರದೇಶದಲ್ಲಿ ಇಂತಿಷ್ಟು ಮರಗಳಿದ್ದರೆ ಮಾತ್ರ ಅದನ್ನು ಆರಣ್ಯ ಎಂಬಂತೆ ವರದಿ ಸಿದ್ದಪಡಿಸಲಾ ಗಿದೆ. 2015ರಲ್ಲಿ ಅಂದಿನ ಸರಕಾರ ಈ ವರದಿಯನ್ನು ಸಂಪುಟದ ಅನುಮೋದನೆ ಗಾಗಿ ಮಂಡನೆ ಮಾಡಿತ್ತು. ಆದರೆ, ಅನುಮೋದನೆ ಬಳಿಕ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಬಳಿಕ, ಪ್ರಕರಣಗಳು ಉಳಿದುಕೊಂಡರೆ ಮತ್ತೊಮ್ಮೆ ಪರಿಗಣಿ ಸಲು ಕಷ್ಟವಾಗುತ್ತದೆ ಎಂದು ಅಂತಿಮ ದೃಢೀಕರಣಕ್ಕೆಂದು ಸೂಚಿಸಲಾಗಿತ್ತು. ಆ ಪ್ರಕ್ರಿಯೆಯಲ್ಲಿ ಪ್ರಗತಿ ಕಾಣದೇ ಸಾಗು ವಳಿದಾರರು ಸಮಸ್ಯೆ ಎದುರಿಸುವಂತಾಗಿದೆ.
ಸಾಗುವಳಿ ಭೂಮಿಗೆ ಬೇಲಿ:
ದಶಕ ಗಳಿಂದ ಸಾಗುವಳಿ ಮಾಡುತ್ತಿರುವ ಜಮೀನಿಗೂ ಅರಣ್ಯ ಇಲಾಖೆಯಿಂದ ಬೇಲಿ ಹಾಕಲು ಆರಂಭಿಸುತ್ತಿದ್ದು ಕೃಷಿ ಮಾಡುತ್ತಿದ್ದ ರೈತರೆಲ್ಲಾ ದಿಕ್ಕೆಟ್ಟು ಕೂತಿ ದ್ದಾರೆ. ಕೆಲವೆಡೆ ಸರಕಾರವೇ ರೈತರಿಗೆ ಪಹಣಿ ಹಾಗೂ ಇನ್ನಿತರ ದಾಖಲೆಗಳನ್ನು ನೀಡಿ ಜಾಮೀನು ಮಂಜೂರು ಮಾಡಿದೆ. ಸರಕಾರದ ದಾಖಲೆಗಳನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತೋರಿಸಿದರೂ ಪ್ರಯೋಜನವಾಗುತ್ತಿಲ್ಲ ಸಿಕ್ಕ ಸಿಕ್ಕ ಕಡೆಯಲ್ಲ ನಮ್ಮದೇ ಜಮೀನು ಎಂದು ಬೇಲಿ ಹಾಕಲು ಆರಂಭಿಸಿದ್ದು, ರೈತರು ಪರದಾಡುವಂತಾಗಿದೆ.

144 ದೂರು ದಾಖಲು:
ಸದ್ಯ ಜಿಲ್ಲೆಯಲ್ಲಿ ಪರಿಭಾವಿತ ಆರಣ್ಯ ಪ್ರದೇಶದ ಸಂಬಂಧ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 144 ಪ್ರಕರಣಗಳು ದಾಖಲಾಗಿವೆ. ಪ್ರಮುಖವಾಗಿ ಖಾಸಗಿಯಾಗಿ ಹಿಡುವಳಿ ಹೊಂದಿರುವ ಜಮೀನುಗಳನ್ನು ದಶಕ ಗಳಿಂದ ಉಳುಮೆ ಮಾಡುತ್ತಿರುವ ಜಮೀ ನನ್ನು, ಸರಕಾರದಿಂದ ಗುತ್ತಿಗೆ ನೀಡಿದ್ದರೂ ಅಂತಹ ಜಮೀನುಗಳನ್ನು ಪರಿಭಾವಿತ ಪ್ರದೇಶಗಳೆಂದು ಘೋಷಿಸಲಾಗಿದೆ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿ ದೂರುಗಳನ್ನು ನೀಡಿದ್ದಾರೆ.
ಮರು ಸರ್ವೆ ಮೇಲೆ ಆಶಾಭಾವ:
ಸದ್ಯ ಜಿಲ್ಲೆಯಲ್ಲಿ 49,463 ಎಕರೆ ಪ್ರದೇಶ ವನ್ನು ಪರಿಭಾವಿತ ಅರಣ್ಯ ಪ್ರದೇಶ ಎಂದು ಗುರುತಿಸಲಾಗಿದೆ. ಆದರೆ ಜಂಟಿ ಅಳತೆ ನಂತರ ಪರಿಭಾವಿತ ಅರಣ್ಯ ಪ್ರದೇಶ ಎಂದು 16,976 ಎಕರೆಯನ್ನು ಉಳಿಸಬಹುದು ಎಂದು ವರದಿ ನೀಡಲಾ ಗಿದೆ. ಈಗ ಮತ್ತೊಮ್ಮೆ ಜು.15ರೊಳಗೆ ಮರು ಸರ್ವೆ ಕೈಗೊಂಡು ವಾಸ್ತವ ವರದಿ ನೀಡುವಂತೆ ಆದೇಶಿಸಲಾಗಿದ್ದು, ರೈತರಲ್ಲಿ ಆಶಾಭಾವ ಮೂಡಲು ಕಾರಣವಾಗಿದೆ.

ಇನ್ನೂ ಈ ವಿಷಯದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ. ಸಿ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು ನಿಯಮಾವಳಿ ಪ್ರಕಾರ ಸ್ವಾಭಾವಿಕ ಗಿಡ ಮರಗಳು ಬೆಳೆದು ಅರಣ್ಯ ಪ್ರದೇಶ ವಿರುವ ಜಾಗವನ್ನು ಪರಿಭಾವಿತ ಆರಣ್ಯ ಪ್ರದೇಶವೆಂದು ಘೋಷಿಸಿರುವುದಕ್ಕೆ ನಮ್ಮ ತಕರಾರೇನಿಲ್ಲ, ಆದರೆ ಅರಣ್ಯವಲ್ಲದ ಇತರೆ ಪ್ರದೇಶಗಳನ್ನು ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಸೇರ್ಪಡೆ ಮಾಡುವುದು ಸರಿಯಲ್ಲ, ಅಂತಹ ಪರಿಭಾವಿತ ಆರಣ್ಯ ಪ್ರದೇಶವನ್ನು ಅರಣ್ಯ ವ್ಯಾಪ್ತಿಯಿಂದ ಕೈಬಿಡಲು ಮರು ಸರ್ವೆಗೆ ಆದೇಶಿಸಿದ್ದು, ಜು.15ರೊಳಗೆ ವರದಿ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಧ್ಯಕ್ಷ ಭಕ್ತರಹಳ್ಳಿಬೈರೇಗೌಡ ರೈತರ ಪರವಾಗಿ ಪ್ರತಿಕ್ರಿಯೆ ನೀಡಿದ್ದು ಸರಕಾರವೇ ಹಲವಾರು ವರ್ಷಗಳ ಹಿಂದೆ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಿದೆ. ಅಂತಹ ಜಮೀನುಗಳಿಗೆ ಅರಣ್ಯ ಇಲಾಖೆ ಡೀಮ್ಸ್ ಫಾರೆಸ್ಟ್ ಎಂದು ಬೇಲಿ ಹಾಕುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ಕಾರ್ಯಗಳಿಗೆ ಅವಕಾಶ ನೀಡುವುದಿಲ್ಲ. ಸರಕಾರ ತಕ್ಷಣ ಆಗಿರುವ ಆಚಾತುರ್ಯವನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲೆಯ ಡೀಮ್ಸ್ ಫಾರೆಸ್ಟ್ ಪ್ರದೇಶದ ವಿಸ್ತೀರ್ಣ:- 49,463 ಎಕರೆ - 02 ಕುಂಟೆ.
ಚಿಕ್ಕಬಳ್ಳಾಪುರ ತಾಲೂಕಿನಲ್ಲಿ -10,623-31,
ಗೌರಿಬಿದನೂರು ತಾಲೂಕಿನಲ್ಲಿ -9.590-38,
ಮಂಚೇನಹಳ್ಳಿ ತಾಲೂಕಿನಲ್ಲಿ- 2,262-38,
ಗುಡಿಬಂಡೆ ತಾಲೂಕಿನಲ್ಲಿ - 2.262-38,
ಬಾಗೇಪಲ್ಲಿ ತಾಲೂಕಿನಲ್ಲಿ - 2,697-24,
ಶಿಡ್ಲಘಟ್ಟ ತಾಲೂಕಿನಲ್ಲಿ - 14,677-22,
ಚಿಂತಾಮಣಿ ತಾಲೂಕಿನಲ್ಲಿ - 9,610-09 ಒಳಗೊಂಡಿದೆ.
ಪರಿಭಾವಿತ ಅರಣ್ಯ ಸಂಬಂಧ ದೂರುಗಳು:-
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 144 ಪ್ರಕರಣಗಳು ದಾಖಲಾಗಿದ್ದು, ತಾಲೂಕುಗಳ ಪಟ್ಟಿ ನೋಡುವುದಾದರೆ ಚಿಕ್ಕಬಳ್ಳಾಪುರದಲ್ಲಿ 82, ಗೌರಿಬಿದನೂರಿನಲ್ಲಿ 32, ಮಂಚೇನಹಳ್ಳಿಯಲ್ಲಿ 13, ಶಿಡ್ಲಘಟ್ಟದಲ್ಲಿ 15, ಚಿಂತಾಮಣಿಯಲ್ಲಿ 02 ದೂರುಗಳು ಬಂದಿದ್ದರೆ, ಗುಡಿಬಂಡೆ ಮತ್ತು ಬಾಗೇಪಲ್ಲಿ ತಾಲೂಕಿನಲ್ಲಿ ಯಾವುದೇ ದೂರುಗಳು ದಾಖಲಾಗಿಲ್ಲ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications