
ಪ್ರಸಕ್ತ ವರ್ಷ ಗೋಧಿ ಬಿತ್ತನೆಯಲ್ಲಿ ಶೇ. 11ರಷ್ಟು ಪ್ರಗತಿ ಕಂಡ ಭಾರತ
ನವೆಂಬರ್ 26, ಬೆಂಗಳೂರು : ಭಾರತದಲ್ಲಿ ಈ ವರ್ಷ ಇದುವರೆಗೆ ಒಟ್ಟು 15.3 ಮಿಲಿಯನ್ ಹೆಕ್ಟೇರ್‌ಗಳಲ್ಲಿ ಗೋಧಿ ಬಿತ್ತನೆ ಆಗಿದೆ. ಈ ಮೂಲಕ ಕಳೆದ ವರ್ಷಕ್ಕಿಂತ ಶೇ. 11ರಷ್ಟು ಗೋಧಿ ಬಿತ್ತನೆ ಈ ಬಾರಿ ಹೆಚ್ಚಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ತಿಳಿಸಿದೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ ಈ ಭಾರಿ ದಾಖಲೆಯ ಮಟ್ಟದಲ್ಲಿ ಗೋಧಿ ಬಿತ್ತನೆ ಆಗಿದೆ ಎಂದರೆ ಅದಕ್ಕಿ ಗೋಧಿಯ ಬೆಲೆ ಏರಿಕೆಯೇ ಕಾರಣ ಎನ್ನಲಾಗುತ್ತಿದೆ. ಅಲ್ಲದೇ ದೇಶದ ರೈತರು ಚಳಿಗಾಲದಲ್ಲಿ ಬಿತ್ತಲಾದ ಪ್ರಮುಖ ಎಣ್ಣೆಕಾಳು ರೇಪ್‌ಸೀಡ್ ಪ್ರಮಾಣ ನವೆಂಬರ್ 25ರ ಈವರೆಗೆ 7.1 ಮಿಲಿಯನ್ ಹೆಕ್ಟೇರ್‌ಗಳಷ್ಟು ಆಗಿದೆ. ಈ ಬೆಳೆಯು ಕಳೆದ ವರ್ಷ ನವೆಂಬರ್ ಅಂತ್ಯ ವೇಳೆಗೆ 6.2 ಮಿಲಿಯನ್ ಹೆಕ್ಟೇರ್‌ಗಳಷ್ಟು ಇತ್ತು ಎಂದು ತಿಳಿದು ಬಂದಿದೆ.
ಗೋಧಿ ಉತ್ಪಾದನೆಯಲ್ಲಿ ಎರಡನೇ ದೊಡ್ಡ ರಾಷ್ಟ್ರ ಭಾರತವು ಕೆಲವು ವಾರಗಳ ಹಿಂದೆ ಗೋಧಿ ರಫ್ತಿನ ಮೇಲೆ ನಿಷೇಧ ಹೇರಿತು. ಕಾರಣ ಬೃಹತ್ ರಫ್ತುದಾರರ ದೇಶವು ಆದ ರಷ್ಯಾ ದೇಶ ಉಕ್ರೇನ್ ಮೇಲೆ ಯುದ್ಧ ಸಾರಿತು. ನಿರಂತರವಾಗಿ ನಡೆದ ಯುದ್ಧಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿಯ ಬೇಡಿಕೆ ಹೆಚ್ಚಾಯಿತು. ಯುದ್ಧ ಪ್ರಭಾವದಿಂದ ಬೇಡಿಕೆ ಹಾಗೂ ಬೆಲೆ ಹೆಚ್ಚಾಯಿತು.
ಅಗತ್ಯದಷ್ಟು ಗೋಧಿ ಪೂರೈಕೆ ಮಾಡಿದರೆ ಉತ್ಪಾದಿತ ಗೋಧಿ ಸ್ಥಳಿಯವಾಗಿ ಅಲಭ್ಯತೆ ಕಾಡಬಹುದು ಹಾಗೂ ಭವಿಷ್ಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಇತ್ತೀಚೆಗೆ ಗೋಧಿಯ ರಫ್ತಿಗೆ ನಿರ್ಬಂಧ ವಿಧಿಸಿ ಆದೇಶಿಸಿತ್ತು. ರಫ್ತು ನಿಷೇಧ ಹೊರತಾಗಿ ಗೋಧಿಯ ಬೆಲೆ ದೇಶದಲ್ಲಿ ಏರಿಕೆ ಕಂಡಿದೆ. ಆದರೆ ಈ ಬೆಲೆ ಏರಿಕೆಯ ಕುರಿತು ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಂಡಿಲ್ಲ ಎಂದು ಮೊನ್ನೆಯಷ್ಟೇ ಸಷ್ಪಪಡಿಸಿದೆ.
7.6 ಮಿ.ಹೆಕ್ಟೇರ್‌ನಲ್ಲಿ ಎಣ್ಣೆಬೀಜ ಬಿತ್ತನೆ
ಅಕ್ಟೋಬರ್ 1 ರಿಂದ ನವೆಂಬರ್ 15ರ ನಡುವೆ ಒಟ್ಟು ಎಣ್ಣೆ ಬೀಜಗಳನ್ನು 7.6 ಮಿಲಿಯನ್ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 6.7 ಮಿಲಿಯನ್ ಹೆಕ್ಟೇರ್ ದಲ್ಲಿ ಎಣ್ಣೆ ಬೀಜ ಬಿತ್ತಲಾಗಿತ್ತು ಎಂದು ಕೇಂದ್ರ ತಿಳಿಸಿದೆ.

ಮಲೇಷ್ಯಾ, ಇಂಡೋನೇಷ್ಯಾ, ಬ್ರೆಜಿಲ್, ಅರ್ಜೆಂಟೇನಾ, ರಷ್ಯಾ ಮತ್ತು ಉಕ್ರೇನ್ ದೇಶಗಳಿಂದ ಖಾದ್ಯ ತೈಲಗಳನ್ನು ದುಬಾರಿ ಬೆಲೆಗೆ ಖರೀದಿಯನ್ನು ಕಡಿಮೆ ಮಾಡಲು ಭಾರತದಲ್ಲೇ ಎಣ್ಣೆಬೀಜ ಅಧಿಕ ಉತ್ಪಾದನೆ ಆಗುತ್ತಿದೆ. ಇದಕ್ಕೆ ಎಣ್ಣೆ ಆಮದುದಾರರ ರಾಷ್ಟ್ರಗಳು ಭಾರತಕ್ಕೆ ನೆರವಿನ ಹಸ್ತಚಾಚಿವೆ.
ಭಾರತವು ಪ್ರಸ್ತಕ 2022 ಮಾರ್ಚ್ 31ರ ಆರ್ಥಿಕ ವರ್ಷದಲ್ಲಿ ಅಡುಗೆ ಎಣ್ಣೆಯ ಆಮದಿಗೆ ಬರೋಬ್ಬರಿಗೆ 18.99 ಶತಕೋಟಿ ಡಾಲರ್ ಖರ್ಚು ಮಾಡಿದೆ. ಹೀಗೆ ನಿರಂತರವಾಗಿ ಅಡುಗೆ ಎಣ್ಣೆಯ ಆಮದಿನ ಬೆಲೆ ಹೆಚ್ಚುತ್ತಲೆ ಇರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಖಾದ್ಯ ತೈಲ ಆಮದುಗಳ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡಲು ರೇಪ್‌ಸಿಡ್ ಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.