ಮಂಡಸೌರ್ ಉರಿಯುವ ಬೆಂಕಿಗೆ ವಿರೋಧಿಗಳ ರಾಜಕೀಯ ತುಪ್ಪ

ಭೋಪಾಲ್, ಜೂನ್ 08 : ಮಂಡಸೌರ್ ನಲ್ಲಿ ನಡೆದ ಗೋಳಿಬಾರ್ ನಲ್ಲಿ ಐವರು ರೈತರು ಹತ್ಯೆಗೀಡಾರುವುದನ್ನು ನೆಪವಾಗಿಟ್ಟುಕೊಂಡು ಬಿಜೆಪಿಯನ್ನು ಸದೆಬಡಿಯಲು ವಿರೋಧ ಪಕ್ಷಗಳು ಕತ್ತಿ ಮಸೆಯಲು ಆರಂಭಿಸಿವೆ.

ಇದರ ಮೊದಲ ಹಂತವಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಮಂಡಸೌರ್ ಅನ್ನು ತಲುಪಿದ್ದು, ಅವರ ಹಿಂದೆಯೇ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಪಟಾಲಂ ಮಧ್ಯಪ್ರದೇಶ ಪ್ರವೇಶಿಸಲು ಸಜ್ಜಾಗಿ ಕುಳಿತಿದೆ.

ವಿರೋಧದ ನಡುವೆಯೂ ರಸ್ತೆಯ ಮೂಲಕ ಮಧ್ಯಪ್ರದೇಶವನ್ನು ಪ್ರವೇಶಿಸಿರುವ ರಾಹುಲ್ ಗಾಂಧಿ ಅವರು, ಮೋಪೆಡ್ ಮೇಲೆ ಕುಳಿತು ಸಾಗುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ.

ರೈತರ ಮೇಲೆ ನಡೆಸಿದ ಗುಂಡಿನ ದಾಳಿಯಿಂದಾಗಿ ಧಗಧಗಿಸುತ್ತಿರುವ ಮಧ್ಯಪ್ರದೇಶದ ಮಂಡಸೌರ್ ಪ್ರವೇಶವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನಿರಾಕರಿಸಲಾಗಿದೆ.

ಕೆಲದಿನಗಳ ಹಿಂದೆ ಉತ್ತರಪ್ರದೇಶದ ಶರಣಪುರವನ್ನು ಪ್ರವೇಶಿಸಲು ಕೂಡ ರಾಹುಲ್ ಗಾಂಧಿ ಅವರಿಗೆ ಅವಕಾಶ ನೀಡಲಾಗಿರಲಿಲ್ಲ. ದಂಗೆಗ್ರಸ್ತ ಶರಣಪುರದಲ್ಲಿ ದಲಿತರನ್ನು ನಿರ್ದಯವಾಗಿ ಹತ್ಯೆ ಮಾಡಿದ ನಂತರ ರಾಹುಲ್ ಅಲ್ಲಿನ ಜನರನ್ನು ಭೇಟಿಯಾಗಿ ಸಾಂತ್ವನ ನೀಡಲು ಹೋಗಿದ್ದರು.

ಈಗ ಕೂಡ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಐವರು ರೈತರು ಗುಂಡಿಗೆ ಬಲಿಯಾಗಿದ್ದು, ಅವರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ನೀಡಲು ರಾಹುಲ್ ಗಾಂಧಿ ಮಂಡಸೌರ್ ಗೆ ಹೋಗಿದ್ದಾರೆ. [ರೈತರ ಕ್ರೋಧಾಗ್ನಿಗೆ ಸಿಕ್ಕು ಹೊತ್ತಿ ಉರಿಯುತ್ತಿದೆ ಮಧ್ಯಪ್ರದೇಶ]

Congress vice president Rahul Gandhi denied permission to enter Mandsaur

ರಾಜಸ್ತಾನದ ಮುಖಾಂತರ ಪ್ರವೇಶಿಸಲು ಅವರು ಪ್ರಯತ್ನಿಸಿದಾಗ, ಸುಪರಿಂಟೆಂಡೆಂಟ್ ಆಫ್ ಪೊಲೀಸ್ ನೀಮುಚ್ ಮನೋಜ್ ಕುಮಾರ್ ಅವರು, ರಾಹುಲ್ ಮತ್ತು ಸಹಚರರನ್ನು ಅಲ್ಲಿಯೇ ತಡೆದು, ಬಲವಂತವಾಗಿ ಪ್ರವೇಶಿಸಲು ಯತ್ನಿಸಿದರೆ ಬಂಧಿಸುವುದಾಗಿ ಎಚ್ಚರಿಸಿದ್ದಾರೆ.

ಕಳೆದ ವರ್ಷ ಹೈದರಾಬಾದ್ ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ವೇಮುಲ ಆತ್ಮಹತ್ಯೆ ಮಾಡಿಕೊಂಡ ಮೇಲೆ, ತೀವ್ರ ಹಿಂಸಾಕೃತ್ಯಗಳು ನಡೆದ ನಂತರ ರಾಹುಲ್ ಗಾಂಧಿ ಅವರು ಅಲ್ಲಿಗೂ ಹೋಗಿ ವೇಮುಲ ಮತ್ತು ಹೋರಾಟಗಾರರನ್ನು ಭೇಟಿಯಾಗಿ ಬಂದಿದ್ದರು.

ರಾಹುಲ್ ಗಾಂಧಿಯ ಭೇಟಿಯ ನಂತರ ಮಂಡಸೌರ್ ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ತಂಡವೊಂದು ಭೇಟಿ ನೀಡಲು ಸಿದ್ಧತೆ ನಡೆಸಿದೆ. ಬಿಜೆಪಿಯನ್ನು ರಾಜಕೀಯವಾಗಿ ಬಗ್ಗುಬಡಿಯಲು ಅವರ ವಿರೋಧಿಗಳಿಗೆ ಒಳ್ಳೆಯ ಅವಕಾಶ ಸಿಕ್ಕಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+