ತೆಂಗು ಬೆಳೆಗಾರರೇ ಗಮನಿಸಿ, ಬೆಳೆ ವಿಮಾ ಯೋಜನೆ
ತುಮಕೂರು, ಡಿಸೆಂಬರ್ 30: ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ರೈತರು ತೆಂಗು ಬೆಳೆಯುತ್ತಾರೆ. ಆದರೆ ತೆಂಗಿನ ಗಿಡಗಳು, ಮರಗಳು ವಿವಿಧ ರೋಗಗಳಿಗೆ ತುತ್ತಾಗಿ ರೈತರಿಗೆ ನಷ್ಟವಾಗುತ್ತದೆ. ಆದ್ದರಿದ ತೆಂಗಿನ ಬೆಳೆಗಾರರಿಗೆ ನೆರವಾಗಲು ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ತೆಂಗು ಬೆಳೆಯುವ ರೈತರು ಈ ವಿಮಾ ಯೋಜನೆಯ ಮಾಹಿತಿ, ಬೇಕಾಗುವ ದಾಖಲೆಗಳ ಕುರಿತು ಮಾಹಿತಿ ತಿಳಿದಿರುವುದು ಅಗತ್ಯವಾಗಿದೆ.
ತೆಂಗು ಬೆಳೆ ವಿಮಾ ಯೋಜನೆ ತೆಂಗಿನ ಗಿಡ/ ಮರಗಳಿಗೆ ಇರುವ ವಿಮಾ ಯೋಜನೆಯಾಗಿದ್ದು, ತೆಂಗು ಅಭಿವೃದ್ಧಿ, ಮಂಡಳಿಯವರು Agriculture insurance company ಅವರ ಸಹಯೋಗದೊಂದಿಗೆ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಆರೋಗ್ಯವಂತ ತೆಂಗಿನ ಗಿಡಗಳು/ ಮರಗಳು (4 ರಿಂದ 60 ವರ್ಷ) ವಿಮೆಯ ವ್ಯಾಪ್ತಿಗೆ ಒಳಪಡುತ್ತವೆ. ರೈತರು ಕನಿಷ್ಠ 5 ತೆಂಗಿನ ಗಿಡಗಳು/ ಮರಗಳನ್ನು ಕಡ್ಡಾಯವಾಗಿ ವಿಮೆಗೆ ಒಳಪಡಿಸಬೇಕು 5ಕ್ಕಿಂತ ಕಡಿಮೆ ಸಂಖ್ಯೆ, ತೆಂಗಿನ ಮರಗಳು/ ಗಿಡಗಳು ಈ ವಿಮೆಯ ವ್ಯಾಪ್ತಿಗೆ ಒಳಪಡುವುದಿಲ್ಲ.
ಹವಾಮಾನ ವೈಪರಿತ್ಯದಿಂದ, ಕೀಟ ಮತ್ತು ರೋಗದಿಂದ, ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದಲ್ಲಿ, ಬರಗಾಲ, ಆಲಿಕಲ್ಲು, ಸಿಡಿಲು ಬಡಿತದಿಂದ ತೆಂಗಿನ ಗಿಡಗಳು/ ಮರಗಳು ಸಂಪೂರ್ಣ ಹಾನಿಯಾಗಿ ಸತ್ತು ಹೋದಲ್ಲಿ ಹಾನಿ ಸಂಭವಿಸಿದ 15 ದಿನಗಳೊಳಗಾಗಿ ವಿಮಾ ಕಂಪನಿಗೆ ತಿಳಿಸುವುದು ಕಡ್ಡಾಯವಾಗಿರುತ್ತದೆ.
ತಂಗು ಬೆಳೆ ವಿಮೆ ಕಂತಿನ ವಿವರಗಳು: ಈ ವಿಮಾ ಯೋಜನೆಯನ್ನು ತೆಂಗಿನ ಗಿಡ/ ಮರದ ವಯಸ್ಸಿನ ಆಧಾರದ ಮೇಲೆ ಮಾಡಲಾಗಿದೆ. 4 ರಿಂದ 15 ವರ್ಷದ ಗಿಡ/ ಮರ ವಿಮಾ ಮೊತ್ತ ಪ್ರತಿ ಮರ/ ಗಿಡಕ್ಕೆ 900 ರೂ., ಶೇ 25 ರಂತೆ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಪ್ರತಿ ಮರಕ್ಕೆ/ ಗಿಡ/ ವರ್ಷಕ್ಕೆ ಮರಕ್ಕೆ/ ಗಿಡಕ್ಕೆ 2.25 ರೂ., ಸರ್ಕಾರದ ವಂತಿಕೆ ಮರಕ್ಕೆ/ ಗಿಡಕ್ಕೆ ಶೇ 50 ಸಿಬಿಡಿ + ಶೇ 25 ರಾಜ್ಯ ಸರ್ಕಾರ 6.75 ರೂ.ಗಳು.
ಇದೇ ಮಾದರಿಯಲ್ಲಿ 16 ರಿಂದ 60 ವರ್ಷದ ಮರಕ್ಕೆ/ ಗಿಡಕ್ಕೆ 1750 ರೂ.ಗಳು. ಶೇ 25 ರಂತೆ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಪ್ರತಿ ಮರಕ್ಕೆ/ ಗಿಡ/ ವರ್ಷಕ್ಕೆ ಮರಕ್ಕೆ/ ಗಿಡಕ್ಕೆ 3.50 ರೂ., ಸರ್ಕಾರದ ವಂತಿಕೆ ಮರಕ್ಕೆ/ ಗಿಡಕ್ಕೆ ಶೇ 50 ಸಿಬಿಡಿ + ಶೇ 25 ರಾಜ್ಯ ಸರ್ಕಾರ 10.50 ರೂ.ಗಳು.
ಮೇಲೆ ತಿಳಿಸಿರುವಂತೆ ಆಸಕ್ತ ಫಲಾನುಭವಿಗಳು ರೈತರ ವಂತಿಕೆಯನ್ನು ಮತ್ತು ನಿಗದಿತ ನಮೂನೆಯಲ್ಲಿ, ಅರ್ಜಿಯನ್ನು ಭರ್ತಿಮಾಡಿ ಸಂಬಂಧಿಸಿದ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಲ್ಲಿಸಿ ಸದರಿ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬಹುದು.
ಸಲ್ಲಿಸಬೇಕಾದ ದಾಖಲೆಗಳು
* ತೆಂಗು ಅಭಿವೃದ್ಧಿ ಮಂಡಳಿಯ ನಿಗದಿತ ಅರ್ಜಿ ನಮೂನೆ
* ಆಧಾರ್‌ಕಾರ್ಡ್ ಪ್ರತಿ
* ಬ್ಯಾಂಕ್ ಪಾಸ್ ಪುಸ್ತಕ ಪ್ರತಿ
* ರೈತರ ವಂತಿಕೆ. ರೈತರು ತೆಂಗು ಬೆಳೆ ವಿಮೆಯ ವಾರ್ಷಿಕ ವಂತಿಕೆಯನ್ನು ಸಂಬಂಧಿಸಿದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಲ್ಲಿಸಿ ಸ್ವೀಕೃತಿಯನ್ನು ಪಡೆಯಬೇಕು.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications