ಮೃತ ರೈತ ಸುರೇಶ್ ಮನೆಗೆ ಭೇಟಿ ನೀಡಿ 5 ಲಕ್ಷ ಪರಿಹಾರ ನೀಡಿದ ಸಿಎಂ

Recommended Video

      ಮಂಡ್ಯದ ಅಘಾಲಯ ಗ್ರಾಮದಲ್ಲಿರುವ ಮೃತ ರೈತನ ಮನೆಗೆ ಭೇಟಿ ನೀಡಿದ ಎಚ್ ಡಿ ಕೆ | Oneindia Kannada

      ಮಂಡ್ಯ, ಜೂನ್ 18: ಕೆ.ಆರ್.ಪೇಟೆ ತಾಲ್ಲೂಕಿನ ಅಘಲಯ ಗ್ರಾಮದಲ್ಲಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಸುರೇಶ್ ಮನೆಗೆ ಸಿಎಂ ಎಚ್​.ಡಿ.ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, 5 ಲಕ್ಷ ರೂಪಾಯಿ ಪರಿಹಾರದ ಚೆಕ್​ ನೀಡಿದರು. ಮೃತ ರೈತನ ಮನೆಯ ಪರಿಸ್ಥಿತಿ ಕುರಿತು ಕುಟುಂಬದವರಿಂದ ಚರ್ಚಿಸಿ, ಸುರೇಶ್ ಮಗ ಚಂದ್ರಶೇಖರ್​​ಗೆ ಉದ್ಯೋಗ ನೀಡುವುದಾಗಿ, ಮಗಳು ಸುವರ್ಣ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಭರವಸೆಯನ್ನು ನೀಡಿದರು.

      ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸುರೇಶ್ ಕೆರೆಗಳನ್ನು ತುಂಬಿಸಿ ಎಂದು ಮನವಿ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ 213 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಭಾಗದ ಕೆರೆಗಳನ್ನು ತುಂಬಿಸುವ ಕಾರ್ಯ ಆರಂಭವಾಗಲಿದೆ. ಆತುರ ಪಟ್ಟು ಯಾವುದೇ ರೈತರು ಆತ್ಮಹತ್ಯೆಯ ದಾರಿ ಹಿಡಿಯಬಾರದು ಎಂದು ಮನವಿ ಮಾಡಿದರು.

      cm Kumaraswamy visited Aghalaya and gave 5 lakh compensation to suresh family

      ಯಡಿಯೂರಪ್ಪರವರ ಗ್ರಾಮವಾಸ್ತವ್ಯದ ಕುರಿತ ಟೀಕೆಗೆ ಪ್ರತಿಕ್ರಿಯಿಸಿ, ನಾನು ಹಳ್ಳಿಯ ಜನರಿಗೆ ಧೈರ್ಯ ತುಂಬಲು ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದೇನೆ. ಗಿಮಿಕ್​ ಮಾಡಲು ಅಲ್ಲ. ಗ್ರಾಮ ವಾಸ್ತವ್ಯ ಬೇಡ, ಬರ ಪರಿಹಾರ ಅಧ್ಯಯನ ಮಾಡಿ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ನಾನು ಸ್ಟಾರ್ ಹೋಟೆಲ್ ಅನ್ನೂ ನೋಡಿದ್ದೇನೆ. ಸಣ್ಣ ಹಳ್ಳಿಯಲ್ಲೂ ವಾಸ್ತವ್ಯ ಹೂಡಿದ್ದೇನೆ ಎಂದು ತಿರುಗೇಟು ನೀಡಿದರು.

      cm Kumaraswamy visited Aghalaya and gave 5 lakh compensation to suresh family

      ಕೆರೆ ತುಂಬಿಸುವಂತೆ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದ ರೈತನ ಮನವಿಗೆ ಸ್ಪಂದಿಸಿ ಅಘಲಯ ಕೆರೆಯನ್ನು ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+