ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ : ಡಿ.7ರಂದು ಭತ್ತ ಕಟಾವು ಮಾಡಲಿದ್ದಾರೆ ಕುಮಾರಸ್ವಾಮಿ

|
Google Oneindia Kannada News

ಮಂಡ್ಯ, ಡಿಸೆಂಬರ್ 06 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು‌ ಶುಕ್ರವಾರ ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಕುಮಾರಸ್ವಾಮಿ ಪಾಂಡವಪುರ ತಾಲೂಕಿನಲ್ಲಿ ಭತ್ತ ಕಟಾವು ಮಾಡಲಿದ್ದಾರೆ.

ಡಿಸೆಂಬರ್ 7 ರ ಶುಕ್ರವಾರ ಮಧ್ಯಾಹ್ನ 3.25ಕ್ಕೆ ಹೆಲಿಕಾಪ್ಟರ್ ಮೂಲಕ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಹೆಲಿಪ್ಯಾಡ್ ಎಚ್.ಡಿ.ಕುಮಾರಸ್ವಾಮಿ ಆಗಮಿಸಲಿದ್ದಾರೆ. ಬಳಿಕ ರಸ್ತೆಯ ಮೂಲಕ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮಕ್ಕೆ ತೆರಳಿದ್ದಾರೆ.

ಭತ್ತ ನಾಟಿ ರಾಜಕೀಯ ಗಿಮಿಕ್ ಅಲ್ಲ : ಕುಮಾರಸ್ವಾಮಿಭತ್ತ ನಾಟಿ ರಾಜಕೀಯ ಗಿಮಿಕ್ ಅಲ್ಲ : ಕುಮಾರಸ್ವಾಮಿ

ಸೀತಾಪುರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಜೊತೆ ಭತ್ತ ನಾಟಿ ಮಾಡಿದ್ದರು. ಆ ಹೊಲದಲ್ಲಿ ಈಗ ಭತ್ತ ಕಟಾವಿಗೆ ಬಂದಿದೆ. ಕುಮಾರಸ್ವಾಮಿ ಅವರು ಭತ್ತ ಕಟಾವು ಕಾರ್ಯಕ್ರಮದಲ್ಲಿ ರೈತರ ಜೊತೆ ಪಾಲ್ಗೊಳ್ಳಲಿದ್ದಾರೆ.

ಮಂಡ್ಯದಲ್ಲಿ ಭತ್ತ ನಾಟಿ ಮಾಡಿದ ಕುಮಾರಸ್ವಾಮಿಮಂಡ್ಯದಲ್ಲಿ ಭತ್ತ ನಾಟಿ ಮಾಡಿದ ಕುಮಾರಸ್ವಾಮಿ

CM HD Kumaraswamy to participate in paddy crop cutting

ಬಳಿಕ ಸಂಜೆ 5.30ಕ್ಕೆ ಇತ್ತೀಚೆಗೆ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ ಪಾಂಡವಪುರ ತಾಲೂಕಿನ ವದೆಸಮುದ್ರ ಗ್ರಾಮದಲ್ಲಿ ಪರಿಹಾರದ ಚೆಕ್ ವಿತರಣೆಯನ್ನು ಮಾಡಲಿದ್ದಾರೆ.

ಭತ್ತ ಖರೀದಿಯಲ್ಲಿ ಮಧ್ಯವರ್ತಿಗಳಿಗೆ ಕಡಿವಾಣ ಹಾಕಿದ ಡಿಸಿಭತ್ತ ಖರೀದಿಯಲ್ಲಿ ಮಧ್ಯವರ್ತಿಗಳಿಗೆ ಕಡಿವಾಣ ಹಾಕಿದ ಡಿಸಿ

ಸಂಜೆ 7.30ಕ್ಕೆ ಮಂಡ್ಯ ನಗರದ ಪ್ರವಾಸಿ ‌ಮಂದಿಕ್ಕೆ ಮುಖ್ಯಮಂತ್ರಿಗಳು ಆಗಮಿಸಲಿದ್ದು, ಬಳಿಕ ರಾತ್ರಿ 8.30ಕ್ಕೆ ರಸ್ತೆಯ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

English summary
Karnataka Chief Minister H.D.Kumaraswamy will tour in Mandya district on December 7, 2018. He will participate in paddy crop cutting in Seethapura village of Pandavapura taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X