ಚಿಕ್ಕಬಳ್ಳಾಪುರ ಮಾವು, ನೇರಳೆ ಬೆಳೆಗಳಿಗೆ ಕಾಂಡ ಕೊರಕ ಕಾಟ: ಹೀಲರ್ ಔಷಧ ಬಳಕೆಗೆ ವಿಜ್ಞಾನಿಗಳ ಸಲಹೆ
ಚಿಕ್ಕಬಳ್ಳಾಪುರ ನವೆಂಬರ್ 26: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಮಾವು ಮತ್ತು ನೇರಳೆ ಬೆಳೆಗಳಿಗೆ ಕಾಂಡಕೋರಕದ ಹಾವಳಿ ಹೆಚ್ಚಾಗಿದ್ದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಾಲೂಕಿನ ಹಲವಾರು ಹಳ್ಳಿಗಳ ತೋಟಗಳಿಗೆ ಭೇಟಿ ನೀಡಿ ಮಾವು ಮತ್ತು ನೇರಳೆ ಬೆಳೆಗಾರರಿಗೆ ರೋಗ ತಡೆಗೆ ತೆಗೆದುಕೊಳ್ಳ ಬೇಕಾದ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಈ ವೇಳೆ ಕಾಂಡ ಕೊರಕದ ಬಗ್ಗೆ ವಿವರಣೆ ನೀಡಿದ ವಿಜ್ಞಾನಿಗಳು ಕೊರಕದ ಹೆಣ್ಣು ದುಂಬಿಗಳು ತೊಗಟೆಯ ಬಿರುಕುಗಳಲ್ಲಿ ಒಂದೊಂದಾಗಿ ಮೊಟ್ಟೆಗಳನ್ನು ಇಟ್ಟು ಮೆತ್ತುತ್ತವೆ. ಮರಿ ಹುಳು ಮೃದುವಾದ ಭಾಗದಲ್ಲಿ ತಿನ್ನುತ್ತ ಸುರಂಗಗಳನ್ನು ಮಾಡುತ್ತಾ ತೊಗಟೆಯನ್ನ ಕೊರೆದು ರಂದ್ರಗಳನ್ನ ಕಂದು ಬಣ್ಣದ ಅಂಟು ದ್ರಾವಣ ಮತ್ತು ಕೊರೆದಂತಹ ಮರದ ಪುಡಿಯಿಂದ ಮುಚ್ಚುತ್ತವೆ ಎಂದರು.

ಈ ಸಮಯದಲ್ಲಿ ಗಾದೆಗಳ ಪಟ್ಟ ಭಾಗದಿಂದ ಕಂದು ಬಣ್ಣದ ಅಂಟು ದ್ರಾವಣ ಹಾಗೂ ಮರದ ಪುಡಿಯು ಉದುರುವುದು ಕಂಡುಬರುತ್ತದೆ. ಈ ಹುಳುಗಳು ಮಧ್ಯಕಾಂಡವನ್ನು ಕೊರೆಯುತ್ತಾ ತಿನ್ನುವುದರಿಂದ ರೆಂಬೆಗಳು ಒಣಗುತ್ತ ಗಿಡಗಳು ನಿಶಕ್ತಿ ಹೊಂದಿ ಕೆಲವೇ ತಿಂಗಳಲ್ಲಿ ಸಾಯುತ್ತವೆ, ರೈತರು ಯಾವುದೇ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದು ತಡ ಮಾಡಿದರೆ ಇಡೀ ತೋಟವೆಲ್ಲ ಒಣಗುತ್ತದೆ ಎಂದು ತಿಳಿಸಿದರು.
ಮಾವು ಬೆಳೆಗಾರರು ಜಾಗೃತಾಗಲಿ-
ಮಾವಿಗೆ ತಗಲುವ ಕಾಂಡ ಕೊರಕವು ಮಾವು ಅಲ್ಲದೆ ಇತರೆ 150 ಜಾತಿಯ ಹಣ್ಣಿನ ಮರಗಳಿಗೆ ಹಾನಿ ಉಂಟುಮಾಡುತ್ತದೆ. ಒಂದು ಅಂದಾಜಿನ ಪ್ರಕಾರ ಹತ್ತರಿಂದ ಹದಿನೈದು ವರ್ಷದ ಮಾವಿನ ಮರ ಒಣಗಿದರೆ ರೈತನಿಗೆ 2 ಲಕ್ಷದಿಂದ 4 ಲಕ್ಷ ರೂಪಾಯಿ ನಷ್ಟವಾಗುತ್ತದೆ. ಆದ ಕಾರಣ ರೈತರು ತಮ್ಮ ತೋಟಗಳನ್ನು ಕಾಂಡ ಕೊರಕದಿಂದ ಕಾಪಾಡಿಕೊಳ್ಳಬೇಕು ಎಂದರು.

ನಿರ್ವಹಣಾ ಕ್ರಮಗಳು ಮೊದಲಿಗೆ ಕಾಂಡ ಕೊರಕದಿಂದ ಬಳಲುತ್ತಿರುವ ಮರಗಳನ್ನು ಗುರುತಿಸಬೇಕು. ಕೊರಕದ ಬಾದೆಗೆ ಒಳಪಟ್ಟಿರುವ ತೊಗಟೆಗಳನ್ನು ಸಡಿಲಿಸಿ ಬಿಡಿಸಬೇಕು. ಕೊರಕವು ಕಾಂಡದೊಳಗೆ ಮೇಲಿಂದ ಕೆಳಗೆ, ಕೆಳಗಿನಿಂದ ಮೇಲೆ, ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಸುರಂಗಗಳನ್ನು ಕೊರೆದು ತೊಗಟೆಯನ್ನು ನಾಶಪಡಿಸುತ್ತದೆ. ಸಾಧ್ಯವಾದಷ್ಟರ ಮಟ್ಟಿಗೆ ಕೊರೆದು ತೊಗಟೆಯನ್ನ ಸ್ವಚ್ಛಗೊಳಿಸಬೇಕು ಒಂದು ವೇಳೆ ಕೊರಕಗಳು ಸಿಕ್ಕಿದಲ್ಲಿ ನಾಶಪಡಿಸಬೇಕು.
ತೊಗಟೆಯನ್ನು ಕೆತ್ತಿದ ಭಾಗಕ್ಕೆ 250 ಗ್ರಾಂ ಸೀಲರ್ ಮತ್ತು ಹೀಲರ್ ಜೊತೆಗೆ 5 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್ ಅನ್ನು ಪ್ರತಿ ಲೀಟರ್ ಗೆ ಬೆರಿಸಿದ ದ್ರಾವಣವನ್ನು ಕಾಂಡಕ್ಕೆ ಬಳಿಯಬೇಕು. ಕ್ಲೋರೊಪೈರಿಫಾಸ್ 10 ಮಿ.ಲೀ ಹಾಗೂ 40 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್ ಅನ್ನು ಡಿಸ್ಟೆಂಪರ್ 100 ಮಿ.ಲೀ ಅನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿದ ದ್ರಾವಣವನ್ನು ಕಾಂಡಕ್ಕೆ ಬಳಿಯಬೇಕು ಎಂದು ವಿವರಿಸಿದರು.

ಎಚ್ಚರಿಕೆ ಅತ್ಯಗತ್ಯ -
ಔಷಧ ದ್ರಾವಣವನ್ನು ಬಳಿಯುವಾಗ ಕಾಂಡದ ಕೆಳಭಾಗದಿಂದ 3 ರಿಂದ 4 ಅಡಿವರೆಗೆ ಹಾಗೂ ಕೈಗೆ ಗ್ಲೌಸ್ ಗಳನ್ನು ( ಕೈಕವಚ ) ಬಳಸಬೇಕು ಹಾಗೂ ಶರೀರದ ಯಾವುದೇ ಭಾಗಕ್ಕೂ ತಾಗದಂತೆ ಎಚ್ಚರಿಕೆ ವಹಿಸಬೇಕು. ಕಾಂಡದಲ್ಲಿ ಕೊರೆದ ಪ್ರತಿ ರಂದ್ರಕ್ಕೆ ಕ್ಲೋರಂಟ್ರೀನೀಲಿ ಪ್ರೋಲ್ 18.5 ಪ್ರತಿ ಲೀಟರ್ ಗೆ ಬೆರೆಸಿದ ದ್ರಾವಣವನ್ನು ಸಿರಿಂಜ್ ಮೂಲಕ ಅಥವಾ ರಂಧ್ರಗಳು ದೊಡ್ಡದಿದ್ದಲ್ಲಿ ಹತ್ತಿಯಲ್ಲಿ ಅದ್ದಿ ರಂದ್ರಗಳಿಗೆ ಹಾಕಿ ಒಂದು ಕೆಜಿ ಸೀಲರ್ - ಹೀಲರ್ ಪುಡಿಯನ್ನು 500 ಮಿ.ಲೀ ನೀರಿಗೆ ಬೆರೆಸಿ ಚಪಾತಿ ಹಿಟ್ಟು ಅಥವಾ ರಾಗಿ ಮುದ್ದೆ ರೀತಿಯಲ್ಲಿ ಮಾಡಿಕೊಂಡು ರಂದ್ರಗಳಿಗೆ ಬಿಗಿಯಾಗಿ ತುರಿಕೆ ಎಲ್ಲಾ ರಂದ್ರಗಳನ್ನ ಮುಚ್ಚಬೇಕು ಎಂದು ತಿಳಿಸಿದರು.
ಮರವು ಕಾಂಡ ಕೊರಕದ ಕಾಟದಿಂದ ತೀರಾ ಹದಗೆಟ್ಟಿದ್ದಲ್ಲಿ ಗಿಡಕ್ಕೆ ಪೋಷಕಾಂಶಗಳ ಕೊರತೆ ಕಂಡು ಬರುತ್ತದೆ. ಆದ್ದರಿಂದ ರೈತರು ಅಂತಹ ಮರಗಳಿಗೆ ವಿಶೇಷ ಕಾಳಜಿ ವಹಿಸಿ 100 ಗ್ರಾಂ ಯೂರಿಯಾ, 200 ಗ್ರಾಂ ಎಸ್ಎಸ್ ಪಿ, 100 ಗ್ರಾಂ ಯೂರಿಯಾ ರಸಗೊಬ್ಬರಗಳನ್ನು 200 ಲೀಟರ್ ನಲ್ಲಿ ಕರಗಿಸಿ ಗಿಡದ ಸುತ್ತ ಸುರಿಯಬೇಕು. ಕಾಂಡ ಕೊರಕ ರೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗೆ ಸಸ್ಯ ರೋಗಶಾಸ್ತ್ರದ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ ಚಿಂತಾಮಣಿ ಇವರನ್ನು ಸಂಪರ್ಕಿಸಲು ವಿಜ್ಞಾನಿಗಳು ಕೋರಿದ್ದಾರೆ.
ಮರ ಕೊರಕದ ಲಕ್ಷಣಗಳು ಕಂಡು ಬಂದರೆ ಮಾವಿನ ಇಳುವರಿ ಖಚಿತವಾಗಿ ಕುಂಠಿತವಾಗುವುದಲ್ಲದೆ ರೆಂಬೆಕೊಂಬೆಗಳು ಒಣಗಿ ಕೊನೆಗೆ ಇಡಿ ಮರವೇ ಒಣಗಿ ಹೋಗುತ್ತದೆ. ಆದ್ದರಿಂದ ರೈತರು ಈ ಲಕ್ಷಣ ಬರುವವರೆಗೂ ಕಾಯದೆ ಆರೋಗ್ಯವಂತ ಮರಗಳ ಸೀಲರ್ ಹೀಲರ್ ಚಿಕಿತ್ಸೆಯನ್ನು ವರ್ಷಕ್ಕೆ ಎರಡು ಬಾರಿ ಇಲ್ಲವೇ ಕನಿಷ್ಠ ಒಮ್ಮೆಯಾದರೂ ಕೊಡಬೇಕು. ಮಳೆಗಾಲದ ನಂತರ ಕೊಡಲು ಸರಿಯಾದ ಸಮಯ ಕಾಂಡ ಕೊರಕದ ಕೀಟಗಳು ಕಾಂಡದ ಮೇಲೆ ಮೊಟ್ಟೆ ಇಡುವುದು ಈ ಸಮಯದಲ್ಲೇ ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಆರೋಗ ಶಾಸ್ತ್ದ ವಿಜ್ಞಾನಿ ಡಾ. ಬಿ. ಸ್ವಾತಿ ತಿಳಿಸಿದರು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications