ಮೆಕ್ಕೆಜೋಳಕ್ಕೆ ಸೈನಿಕ ಹುಳು ಲಗ್ಗೆ: ಇಳುವರಿ ನಷ್ಟದ ಭಯದಲ್ಲಿ ರೈತಾಪಿ ವರ್ಗ- ಪರಿಹಾರ ನೀಡಲು ಆಗ್ರಹ!
ಚಿಕ್ಕಬಳ್ಳಾಪುರ ಜುಲೈ 12: ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅವಧಿ ಪೂರ್ವ ಮೆಕ್ಕೆಜೋಳದ ಸಣ್ಣಗಿಡಗಳಗೆ ದಾಳಿ ಮಾಡಿರುವ ಸೈನಿಕ ಹುಳುವಿನ ದಾಳಿಯಿಂದ ರೈತ ಕಂಗಾಲಾಗಿದ್ದು ರೋಗ ನಿಯಂತ್ರಣಕ್ಕೆ ಸೂಕ್ತ ಮಾಹಿತಿ ಹಾಗೂ ರಾಸಾಯನಿಕ ಔಷಧ ದೊರೆಯದ ಕಾರಣ ಫಸಲು ಇಳಿಮುಖವಾಗುವ ಬೀತಿ ಆವರಿಸಿದೆ.
ಚಿಕ್ಕಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಮುಂಗಾರಿನಲ್ಲಿ ಬಿತ್ತಿರುವ ಮೆಕ್ಕೆಜೋಳದ ಬೆಳೆಗೆ ಸೈನಿಕ ಹುಳು ಬಾಧೆ ಕಾಡುತ್ತಿದೆ. ತಾಲೂಕಿನಲ್ಲಿ ನೂರಾರು ಹೆಕ್ಟರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಉತ್ತಮ ಫಸಲು ಹಾಗೂ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡಿದ್ದು ರೈತರು ಕಂಗಾಲಾಗಿದ್ದಾರೆ.

ಜಿಲ್ಲೆಯಲ್ಲಿನ ರೈತರು ಈಗಾಗಲೇ ಮೇ ತಿಂಗಳಿನಲ್ಲೇ ಮೆಕ್ಕೆಜೋಳ ಬಿತ್ತನೆ ಮಾಡಿದ್ದು ಬೆಳೆಯು 1 ತಿಂಗಳು ರಿಂದ 45 ದಿನಗಳ ಹಂತದಲ್ಲಿದೆ. ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳು ಬಾಧೆ ಕಂಡುಬಂದಿದೆ. ಈ ಕೀಟದಿಂದ ರೈತರು ಬೆಳೆ ರಕ್ಷಣೆ ಮಾಡಿಕೊಳ್ಳಲು ಹಾಗೂ ಕೀಟ ನಿರ್ವಹಣೆ ಕ್ರಮಗಳ ಬಗ್ಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೇಶವರೆಡ್ಡಿ ಅವರಲ್ಲಿ ರೈತರಲ್ಲಿ ಮನವಿ ಮಾಡಿದ್ದಾರೆ.
ಈ ಕೀಟ ಪ್ರಮುಖವಾಗಿ ಮೆಕ್ಕೆಜೋಳದ ಪೀಡೆಯಾಗಿದೆ. ಇದರ ಜತೆಗೆ ಇತರೆ ಬೆಳೆಗಳಾದ ಭತ್ತ, ಜೋಳ ಸೇರಿದಂತೆ ಕೆಲ ತರಕಾರಿ ಬೆಳೆಗಳನ್ನು ಸಹ ಹಾನಿ ಮಾಡುತ್ತದೆ. ಮೋಡ ಕವಿದ ವಾತಾವರಣ, ಹೆಚ್ಚಿನ ಮಳೆ ಅಥವಾ ಹೆಚ್ಚಿನ ತೇವಾಂಶ ಮತ್ತು ಕಡಿಮೆ ಉಷ್ಣಾಂಶವಿದ್ದಲ್ಲಿ ಇದರ ಹಾವಳಿ ಹೆಚ್ಚಾಗುತ್ತದೆ. ಮೆಕ್ಕೆಜೋಳ ಬೆಳೆ 10ರಿಂದ 15 ದಿವಸವಿದ್ದಾಗ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಳ್ಳುಲು ಆರಂಭಿಸುತ್ತದೆ.
ಕೃಷಿ ಅಧಿಕಾರಿಗಳ ಭೇಟಿಗೆ ಆಗ್ರಹ:
ಸೈನಿಕ ಹುಳುವಿನ ದಾಳಿಗೆ ತುತ್ತಾಗಿರುವ ರೈತರ ಜಮೀನಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಕೀಟ ಬಾಧೆ ಪರಿಶೀಲಿಸಿ ಸೂಕ್ತ ಔಷಧಿಗಳ ಸಿಂಪಡಣೆ ಮಾಡಲು ಮಾಹಿತಿ ನೀಡುವಂತೆ ಹಾಗೂ ಕೃಷಿ ಇಲಾಖೆಯಲ್ಲಿ ಕಡಿಮೆ ಬೆಲೆಗೆ ಈ ರೋಗಕ್ಕೆ ಸೂಕ್ತ ರಾಸಾಯನಿಕಗಳು ದೊರಯುವಂತೆ ಮಾಡಲಿ ಎಂದು ರೈತರು ಆಗ್ರಹಿಸಿದ್ದಾರೆ.

ವೇಗವಾಗಿ ಹರದಬಲ್ಲದು:
''35 ರಿಂದ 40 ದಿನದ ಜೀವನ ಚಕ್ರದ ಈ ಪತಂಗ ಗಾಳಿಯ ಮೂಲಕ ಸಾವಿರ ಕಿ.ಮೀ. ಚಲಿಸಬಲ್ಲದು. 1,500 ಮೊಟ್ಟೆ ಇಡುವ ಈ ಕೀಟವನ್ನು ವೈಜ್ಞಾನಿಕ ಮತ್ತು ಸುರಕ್ಷಿತ ರೀತಿಯಲ್ಲಿ ನಿಯಂತ್ರಿಸಬೇಕು ಎಂಬುದು ಕೃಷಿ ಇಲಾಖೆಯ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಇಳುವಾರಿ ನಷ್ಟ:
ಮಾಗಿ ಉಳುಮೆ, ಬೇಗ ಬಿತ್ತನೆ, ಪರ್ಯಾಯ ಬೆಳೆ ಪದ್ಧತಿ ಹಾಗೂ ರಾಸಾಯನಿಕ ಸಿಂಪರಣೆ ಮೂಲಕ ಸೈನಿಕ ಹುಳುಗಳನ್ನು ನಿಯಂತ್ರಿಸಬಹುದು. ಈ ಹುಳು 20-25 ದಿನಗಳ ಜೀವನ ಚಕ್ರ ಹೊಂದಿದ್ದು, ಏಕ ಬೆಳೆಯಲ್ಲೇ ಇದರ ಮೂರು ಹಂತಗಳು (ಮೊಟ್ಟೆ, ಮರಿ ಹಳು, ಪ್ರೌಢ ಚಿಟ್ಟೆ) ಕಾಣಿಸಿಕೊಂಡು ಎಲೆ, ಸುಳಿಗಳನ್ನು ತಿಂದು, ರಂಧ್ರಗಳನ್ನು ಮಾಡಿ ಹಿಕ್ಕೆಗಳನ್ನು ಎಲೆಯ ಮೇಲೆಯೇ ಬಿಡುತ್ತದೆ. ಹೊಲದಲ್ಲಿ ದೀಪಾಕರ್ಷಕ ಬಲೆ ಅಳವಡಿಸಿ ಪತಂಗಗಳನ್ನು ಆಕರ್ಷಿಸಿ, ನಾಶಪಡಿಸ ಬಹುದಾಗಿದೆ.
ರೈತ ಸಂಪರ್ಕ ಕೇಂದ್ರಗಳಲ್ಲಿ ಔಷಧ ಖಾಲಿ:
ಮೆಕ್ಕೆಜೋಳ ಗಿಡದ ಸುಳಿಗೆ ಸೈನಿಕ ಹುಳು ಕತ್ತರಿ ಹಾಕುತ್ತಿರುವುದರಿಂದ ರೈತರು ಬೆಳೆ ನಾಶದ ಆತಂಕದಲ್ಲಿದ್ದಾರೆ. ರೈತರ ನೆರವಿಗೆ ಬರಬೇಕಿದ್ದ ಕೃಷಿ ಇಲಾಖೆ ಕೂಡ ಕೈಕಟ್ಟಿ ಕುಳಿತಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಔಷಧ ಸರಬರಾಜಾಗಬೇಕಿತ್ತು. ಆದರೆ ಈವರೆಗೂ ಔಷಧಿ ಸರಬರಾಜಾಗಿಲ್ಲ ಎಂದು ರೈತರು ಆತಂಕ ವ್ಯಕ್ತ ಪಡಿಸಿದ್ದಾರೆ.

ರೈತರ ಅಲೆದಾಟ:
ಸೈನಿಕ ಹುಳು ನಿಯಂತ್ರಣಕ್ಕೆ ಔಷಧಿ ಪಡೆಯಲು ಪ್ರತಿನಿತ್ಯ ರೈತ ಸಂಪರ್ಕ ಕೇಂದ್ರಕ್ಕೆ ರೈತರು ಅಲೆದಾಡುತ್ತಿದ್ದಾರೆ. ಅಧಿಕಾರಿಗಳು ಸರಬರಾಜು ಮಾಡುವ ಭರವಸೆ ನೀಡುತ್ತಿದ್ದೂ, ಸಮಯ ಮೀರಿದ ನಂತರ ಕೊಟ್ಟರೆ ಪ್ರಯೋಜನ ಏನು ಎಂದು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಗ್ರಾಮೀಣ ಮತ್ತು ಗಡಿ ಭಾಗದ ರೈತರಿಗೆ ಮಾಹಿತಿ ಕೊರತೆ ಇದ್ದು ಕೃಷಿ ಇಲಾಖೆಯಿಂದ ಸೈನಿಕ ಹುಳು ನಿಯಂತ್ರಣ ಮಾಡಲು ಸಲಹೆ ಹಾಗೂ ಔಷದ ಬಗ್ಗೆ ಕರಪತ್ರ ಹಂಚುವಂತೆ ರೈತರು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಗ್ರಾಪಂ ಮಾಜಿ ಸದಸ್ಯ ಹಾಗೂ ರೈತ ಮುಖಂಡ ಆರ್.ಚೊಕ್ಕನಹಳ್ಳಿ ನರಸಿಂಹಪ್ಪ, 'ರೈತರು ಬೆಳೆದ ಬೆಳೆಗೆ ಕೃಷಿ ಅಧಿಕಾರಿಗಳ ಶಿಫಾರಸು ಹಾಗೂ ಮಾರ್ಗದರ್ಶನ ಅತ್ಯಗತ್ಯ. ಇಲಾಖೆ ಅಧಿ ಕಾರಿಗಳು ಬಿತ್ತನೆಯಿಂದ ಫಸಲಿನ ಹಂತದವರೆಗೂ ರೈತರೊಂದಿಗೆ ಸಂಪರ್ಕದಲ್ಲಿದ್ದು, ಜಮೀನಿಗೆ ಭೇಟಿ ನೀಡಿ, ಬೆಳೆ ವೀಕ್ಷಿಸಿ ಮಾಹಿತಿ ನೀಡಿದರೆ ಹೆಚ್ಚು ಅನುಕೂಲವಾಗಲಿದೆ' ಎಂದರು.
ಸಹಾಯಕ ಕೃಷಿ ನಿರ್ದೇಶಕ ಕೇಶವ ರೆಡ್ಡಿ ಈ ಬಗ್ಗೆ ಮಾತನಾಡಿ, 'ಬೆಳೆಯ 45 ದಿನಗಳವರೆಗೆ ಈ ಹುಳು ಕಾಣಿಸಿಕೊಂಡು ಶೇ.70-80 ರಷ್ಟು ಇಳುವರಿ ನಷ್ಟಕ್ಕೆ ಕಾರಣವಾಗುತ್ತದೆ. ರಾಸಾಯನಿಕ ಸಿಂಪರಣೆ ಮೂಲಕ ರೋಗ ನಿಯಂತ್ರಣ ಸಾಧ್ಯವಾಗುತ್ತದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಸೈನಿಕ ಹುಳು ನಿಯಂತ್ರಣಕ್ಕೆ ಇಲಾಖೆ ಸೂಚಿಸಿ ರುವ ಮೇಟಾರೈಜಿ ಯಮ್ ರಿಲೆ ರಾಸಾಯನಿಕ ಲಭ್ಯವಾಗುವಂತೆ ಕ್ರಮ ತೆಗೆದುಕೊಳ್ಳಲಾಗುವುದು' ಎಂದರು.
'ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡುತ್ತಿಲ್ಲ, ತಾಲೂಕು ಕೇಂದ್ರದಿಂದ 30 ಕಿ.ಮೀ ದೂರದಲ್ಲಿರುವ ಮಂಡಿಕಲ್ ಹೋಬಳಿ ಕಮ್ಮಾಗುಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ರೈತರಿಗೆ ಮಾಹಿತಿ ಕೊರತೆಯಿಂದ ಅನೇಕರು ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ, ಕಳೆದ ವರ್ಷ ಬರ ಪರಿಹಾರ ಸಿಕ್ಕಿಲ್ಲ ಇದಕ್ಕೆ ಕಾರಣ ಬೆಳೆ ಸಮೀಕ್ಷೆಯಲ್ಲಿ ಲೋಪವಾಗಿದೆ. ಕೃಷಿ ಸಲಕರಣೆಗಳು ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಗ್ರಾಮೀಣ ಭಾಗದ ರೈತರಿಗೆ ಮಾಹಿತಿ ಸಿಗುವಂತಾಗಲಿ' ಎಂದು ಪ್ರಗತಿ ಪರ ರೈತರು, ಕಮ್ಮಗುಟ್ಟಹಳ್ಳಿ ಗ್ರಾಪಂ ಉಪಾಧ್ಯಕ್ಷ ಬಿ. ಎ. ಕೇಶವ ಹೇಳಿದರು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications