ಸಗಣಿ ಸಂಗ್ರಹಕ್ಕೆ ಮುಂದಾದ ಸರ್ಕಾರ, ಕೆಜಿಗೆ 1.50 ರು!
ರಾಯಪುರ್, ಜುಲೈ 06: ಗ್ರಾಮೀಣ ಜನ, ಹೈನುಗಾರಿಕೆ, ರೈತರಿಗೆ ಆರ್ಥಿಕ ಉತ್ತೇಜನ ನೀಡುವ ಸಲುವಾಗಿ ಛತ್ತೀಸ್ ಗಢ ಸರ್ಕಾರವು ಮಹತ್ವದ ಯೋಜನೆಯನ್ನು ಭಾನುವಾರದಂದು ಜಾರಿಗೆ ತಂದಿದೆ. ಸಾವಯವ, ಎರೆ ಹುಳು ಗೊಬ್ಬರ ಉತ್ಪಾದನೆಗೆ ಮುಂದಾಗಿರುವ ಸರ್ಕಾರ, ದನಗಾಹಿಗಳಿಂದ ಸಗಣಿ ಸಂಗ್ರಹಿಸತೊಡಗಿದೆ.
Recommended Video
Virat Kohli Conflict Of Interest Trouble | Oneindia Kannada
ಒಂದು ಕೆ.ಜಿ ಸಗಣಿಗೆ 1.50 ರೊ.ನಂತೆ ಖರೀದಿರಲು ಛತ್ತೀಸ್ ಘಢ ಸರ್ಕಾರ ಬೆಲೆ ನಿಗದಿ ಮಾಡಿದೆ. ಜುಲೆೈ 20ರಿಂದ ಹರೇಲಿ ಹಬ್ಬದ ಅಂಗವಾಗಿ ಗೋಧನ್ ನ್ಯಾಯ ಯೋಜನೆ ಅನ್ವಯ ಸಗಣಿ ಖರೀದಿಸಲಾಗುವುದು, ಸಗಣಿ ಸಂಗ್ರಹಕ್ಕೆ ಮಹಿಳಾ ಸ್ವಯ ಸಹಾಯ ಸಂಘದವರನ್ನು ಬಳಸಿಕೊಳ್ಳಲಾಗುತ್ತಿದೆ.

ಕೃಷಿ ಸಚಿವ ರವೀಂದ್ರ ಚೌಬೆ ನೇತೃತ್ವ ಉಪ ಸಮಿತಿ ನೀಡಿದ ವರದಿ ಆಧಾರದ ಮೇಲೆ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಜೂನ್ 25ರಂದೇ ಈ ಯೋಜನೆ ಬಗ್ಗೆ ಘೋಷಣೆ ಮಾಡಿದ್ದರು. ಈಗ ಹರೇಲಿ ಹಬ್ಬದಿಂದ ಆರಂಭಗೊಂಡು ಸಗಣಿ ಸಂಗ್ರಹ ಬೃಹತ್ ಪ್ರಮಾಣದಲ್ಲಿ ಆಗಲಿದ್ದು, ಸಾವಿರಾರು ಟನ್ ಸಗಣಿ ಸಂಗ್ರಹಿಸಿ, ಸಾವಯವ ಗೊಬ್ಬರ ಉತ್ಪಾದನೆ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.












Click it and Unblock the Notifications