• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಫಿ ಬೆಳೆಗಾರರು ವರ್ಷಪೂರ್ತಿ ಆದಾಯ ಗಳಿಸುವ ತಂತ್ರಜ್ಞಾನ ಅಭಿವೃದ್ಧಿ

|
Google Oneindia Kannada News

ಕಾಫಿ ಬೆಳೆಗಾರರಿಗೊಂದು ಸಂತಸದ ಸುದ್ದಿಯೊಂದು ಮೈಸೂರಿನ ಸೆಂಟ್ರಲ್ ಫುಡ್ ಟೆಕ್ನಾಲಾಜಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಎಫ್‌ಟಿಆರ್ಐ) ಸಂಸ್ಥೆಯಿಂದ ಹೊರಬಿದ್ದಿದೆ.

ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಕಾಫಿ ಎಲೆಗಳನ್ನು ಮೌಲ್ಯವರ್ಧನೆ ಮಾಡುವ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದೆ. ಸಿಎಫ್‌ಟಿಆರ್ಐನ ಮಸಾಲೆ ಹಾಗೂ ಸುವಾಸನೆ ವಿಜ್ಞಾನಗಳ ಮುಖ್ಯ ವಿಜ್ಞಾನಿ ಪುಷ್ಪ. ಎಸ್. ಮೂರ್ತಿ ಕಾಫಿ ಎಲೆಗಳ ಬ್ರ್ಯೂ ಮಿಕ್ಸ್ ಅಭಿವೃದ್ಧಿಪಡಿಸಿದ್ದಾರೆ. 2019ರಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಸಚಿವಾಲಯದಿಂದ ಧನಸಹಾಯ ಪಡೆದ ಯೋಜನೆ ಇದಾಗಿದೆ.

ವಾರ್ಷಿಕ ಮೂರು ತಿಂಗಳ ಕಾಫಿ ಕೊಯಿಲಿನ ಸಂದರ್ಭ ಹೊರತುಪಡಿಸಿ ಕಾಫಿ ಬೆಳೆಗಾರರು ಇನ್ನಿತರ ತಿಂಗಳುಗಳಲ್ಲಿ ಕಾಫಿ ಬೀನ್ ಮೂಡಲು ತೊಡಕಾಗದಂತೆ ಎಲೆಗಳನ್ನು ಕಿತ್ತು ಸಂಸ್ಕರಿಸಿದಲ್ಲಿ ವರ್ಷ ಪೂರ್ತಿ ಆದಾಯ ಪಡೆಯಬಹುದಾಗಿದೆ ಎಂದು ಪುಷ್ಪ. ಎಸ್. ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಕಾಫಿ ಬ್ರ್ಯೂ ಮಿಕ್ಸ್ ಇತಿಯೋಪಿಯಾದ ಸ್ಥಳೀಯ ಪಾನೀಯವಾಗಿದ್ದು, ಇದನ್ನು ಅಲ್ಲಿ "ಕುಟಿ ಟೀ" ಎಂದು ಕರೆಯಲಾಗುತ್ತದೆ. ಪಶ್ಚಿಮ ಸುಮಾತ್ರ ಹಾಗೂ ಇಂಡೋನೇಷಿಯಾದಲ್ಲಿ ಇದನ್ನು "ಕಾಹ್ವಾ ಡಾನ್" ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇದೀಗ ಸಿಎಫ್‌ಟಿಆರ್ಐ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ಅವುಗಳಿಗಿಂತ ಭಿನ್ನವಾದುದು ಎಂದೂ ಅವರು ಹೇಳಿದ್ದಾರೆ.

ಈ ಪಾನೀಯದಲ್ಲಿ ಫೆನೋಲಿಕ್ ಆಸಿಡ್ಸ್ ಪ್ರಮಾಣ ಹೆಚ್ಚಿದ್ದು, ಇದು ಆರೋಗ್ಯಕ್ಕೆ ಒಳ್ಳೆಯದು, ಕಾಫಿ ಎಲೆಗಳಲ್ಲಿ ಗ್ರೀನ್ ಟೀ ಗಿಂತಾ ಶೇಕಡಾ 17ರಷ್ಟು ಹೆಚ್ಚು ಆಂಟಿ ಆಕ್ಸಿಡೆಂಟ್ಸ್ ಇರುವುದಾಗಿ ತಿಳಿಸಿದ್ದಾರೆ. ಇನ್ನು ಕಾಫಿ ಬೆಳೆಗಾರರಿಗೆ ಈ ತಂತ್ರಜ್ಞಾನ ತಲುಪಬೇಕಷ್ಟೇ.

English summary
The Central Food Technology Research Institute has developed a technology to validate coffee leaves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X