ರಾಜ್ಯದ ನೂರು ತಾಲ್ಲೂಕುಗಳು ಬರಪೀಡಿತ, ಅಧ್ಯಯನಕ್ಕೆ ಕೇಂದ್ರ ತಂಡ
ಬೆಂಗಳೂರು, ನವೆಂಬರ್ 13: ರಾಜ್ಯದ ನೂರು ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದ್ದು, ಮುಂಗಾರು ಸರಿ ಆಗದ ಕಾರಣ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.
ರಾಜ್ಯದ ಬರ ಅಧ್ಯಯನಕ್ಕಾಗಿ ಕೇಂದ್ರದ ತಂಡವು ಇದೇ ವಾರದಲ್ಲಿ ರಾಜ್ಯಕ್ಕೆ ಬರಲಿದ್ದು, ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಿದೆ. ಕೇಂದ್ರದಿಂದ ಸಹಾಯದ ನಿರೀಕ್ಷೆಯೂ ಇದೆ.
ರಾಜ್ಯದಲ್ಲಿ ಸುಮಾರು 16 ಸಾವಿರ ಕೋಟಿ ರೂಪಾಯಿ ಬೆಳೆ ನಷ್ಟವಾಗಿದೆ. ರಾಜ್ಯದ ಬರ ಪೀಡಿತ ಪ್ರದೇಶದ ರೈತರಿಗೆ ಸಹಾಯ ಮಾಡುವಂತೆ ಇತ್ತೀಚೆಗಷ್ಟೆ ರಾಜ್ಯಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿತ್ತು ಹಾಗಾಗಿ ಕೇಂದ್ರವು ತಂಡವನ್ನು ಕಳುಹಿಸುತ್ತಿದೆ.

ಬರಪೀಡಿತ ಪ್ರದೇಶಗಳಿಗೆ 2432 ಕೋಟಿ ರೂ. ಪರಿಹಾರ ನೀಡುವಂತೆ ರಾಜ್ಯಸರ್ಕಾರ ಕೇಂದ್ರಸರ್ಕಾರಕ್ಕೆ ಕೆಲವು ತಿಂಗಳ ಹಿಂದೆ ಮನವಿ ಮಾಡಿತ್ತು. ಜಿಲ್ಲಾವಾರು ಮತ್ತು ತಾಲೂಕು ವಾರು ಮಳೆ, ಬೆಳೆ ಪರಿಸ್ಥಿತಿ, ಹಾನಿಯ ಪ್ರಮಾಣದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯ ಸಲ್ಲಿಸಿತ್ತು.
ಕೇಂದ್ರದ ತಜ್ಞರ ತಂಡ ಆಗಮಿಸಿ ಅಧ್ಯಯನ ನಡೆಸಿ ನೀಡುವ ವರದಿ ಆಧರಿಸಿ ಕೇಂದ್ರವು ರಾಜ್ಯಕ್ಕೆ ಸಹಯಾ ಬಿಡುಗಡೆ ಮಾಡುವ ನಿರೀಕ್ಷೆ ಇದೆ.












Click it and Unblock the Notifications