ದಿನಗೂಲಿ ಪರಿಷ್ಕರಣೆಗೆ ಮುಂದಾದ ಕೇಂದ್ರ ಸರ್ಕಾರ
ನವದೆಹಲಿ, ಜುಲೈ, 05: ರಸಗೊಬ್ಬರ ದರ ಇಳಿಕೆ ಮಾಡಿ ರೈತರಿಗೆ ಸಿಹಿಸುದ್ದಿ ನೀಡಿದ್ದ ಕೇಂದ್ರ ಸರ್ಕಾರ ದಿನಗೂಲಿ ನೌಕರರ ಕುಟುಂಬಕ್ಕೂ ಸಿಹಿಸುದ್ದಿ ನೀಡಲು ಮುಂದಾಗಿದೆ.
ಕೃಷಿ, ಕಟ್ಟಡ ನಿರ್ಮಾಣ, ಗಣಿ, ಝಾಡಮಾಲಿಗಳು ಸೇರಿ 45 ವಲಯಗಳ ದಿನಗೂಲಿ ನೌಕರರ ಕನಿಷ್ಠ ವೇತನ ಪರಿಷ್ಕರಣೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ಕಾರ್ಮಿಕ ಇಲಾಖೆ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಹಾಗಾಗಿ ಇನ್ನು ಮುಂದೆ ದಿನಗೂಲಿ ಕಾರ್ಮಿಕರ ಕನಿಷ್ಠ ವೇತನ 400 ರು. ಗಿಂತ ಅಧಿಕವಾಗಲಿದೆ.[ಕಾರ್ಮಿಕನ ಕಾಡಿಸಿ ಬಸ್ ಕಳೆದುಕೊಂಡ ಕೆಎಸ್ಆರ್‌ಟಿಸಿ!]

ದೆಹಲಿಯಲ್ಲಿನ ಅಸಂಘಟಿತ ವಲಯದ ಕಾರ್ಮಿಕರ ದಿನಗೂಲಿ 449 ರು. ಗೆ ನಿಗದಿಯಾಗುವ ಸಾಧ್ಯತೆ ಇದೆ. ಶಸ್ತ್ರಾಸ್ತ್ರ ರಹಿತ ಭದ್ರತಾ ಸಿಬ್ಬಂದಿ ಪ್ರಸ್ತುತ 407 ರೂ. ದಿನಗೂಲಿ ಪಡೆಯುತ್ತಿದ್ದು, ಇವರ ದಿನಗೂಲಿ 169 ರೂ. ಹೆಚ್ಚಳಗೊಂಡು 576 ರೂ.ಗೆ ತಲುಪಲಿದೆ.[ಭವಿಷ್ಯ ನಿಧಿ ನೀತಿ ಬದಲು, ಸರ್ಕಾರ ಕೈ ಸುಟ್ಟಿಕೊಂಡಿದ್ದು ಹೇಗೆ?]
ಕನಿಷ್ಠ ಕೂಲಿ ಕಾನೂನು ಏನು ಹೇಳುತ್ತದೆ?
1948 ರ ಕನಿಷ್ಠ ಕೂಲಿ ಕಾನೂನು ಪ್ರಕಾರ ದಿನಗಗೂಲಿಯನ್ನು ಪ್ರತಿ 5 ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು. ಕೃಷಿ ಕ್ಷೇತ್ರದಲ್ಲಿ ಕೊನೆಯದಾಗಿ 2005 ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಸ್ವಚ್ಛತೆ ಕಾರ್ಮಿಕರಿಗೆ ಸಂಬಂಧಿಸಿ 2008 ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಕಟ್ಟಡ ಕಾರ್ಮಿಕರಿಗೆ 2009 ರಲ್ಲಿ ಪರಿಷ್ಕರಣೆ ನೀಡಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಎಲ್ಲ ವಿಭಾಗದ ದಿನಗೂಲಿ ಪರಿಷ್ಕರಣೆಗೆ ಮುಂದಾಗಿದೆ.











Click it and Unblock the Notifications