ಮೋದಿಯನ್ನು ನಂಬಿ ಸಾಲಮನ್ನಾ ಮಾಡುತ್ತಿಲ್ಲ: ಕುಮಾರಸ್ವಾಮಿ
Recommended Video

ಬೆಂಗಳೂರು, ಡಿಸೆಂಬರ್ 04: ಮೋದಿಯನ್ನು ನಂಬಿಕೊಂಡು ಸಾಲಮನ್ನಾ ಮಾಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಹೇಳಿದರು.
ವಿಧಾನಸೌದದಲ್ಲಿ ಸದ್ದಿಗಾರರೊಂದಿಗೆ ರೈತರ ಸಾಲಮನ್ನಾ ಬಗೆಗಿನ ಮಾಹಿತಿ ಹಂಚಿಕೊಳ್ಳುವ ವೇಳೆ ಮಾತನಾಡಿದ ಅವರು, ರೈತರಿಗೆ ಮಾತು ಕೊಟ್ಟಿದ್ದಾಗಿ ಅದನ್ನು ಉಳಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಡಿಸೆಂಬರ್ 8 ರಿಂದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲಮನ್ನಾ ಕಾರ್ಯ ಪ್ರಾರಂಭವಾಗಲಿದ್ದು, ಮೊದಲ ಹಂತವಾಗಿ ರೈತರ 50000 ರೂಪಾಯಿ ಸಾಲಮನ್ನಾ ಆಗಲಿದೆ ಎಂದು ಅವರು ಹೇಳಿದರು.

ಸಾಲಮನ್ನಾಕ್ಕೆ 6500 ಕೋಟಿ ಹಣವನ್ನು ಈ ಆರ್ಥಿಕ ವರ್ಷದಲ್ಲಿ ಮೀಸಲಿಡಲಾಗಿದೆ. ಸರ್ಕಾರಕ್ಕೆ ಆರ್ಥಿಕ ಕೊರತೆ ಇಲ್ಲ, 17 ಲಕ್ಷ ರೈತರ ರಾಷ್ಟ್ರೀಯ ಬ್ಯಾಂಕುಗಳಿಲ್ಲನ 50,000 ಸಾಲಮನ್ನಾ ಆಗಲಿದೆ ಎಂದು ಅವರು ಮಾಹಿತಿ ನೀಡಿದರು.
ಮೊದಲ ಹಂತವಾಗಿ ದೊಡ್ಡಬಳ್ಳಾಪುರ ಹಾಗೂ ಸೇಡಂ ತಾಲ್ಲೂಕಿನಲ್ಲಿ ಸಾಲಮನ್ನಾ ಜಾರಿ ಆಗಲಿದೆ. ಆ ನಂತರ ಪೂರ್ಣ ರಾಜ್ಯದ ರೈತರ ಸಾಲಮನ್ನಾ ಆಗಲಿದೆ. ಇದಕ್ಕಾಗಿ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸಾಲಮನ್ನಾಕ್ಕೆ ಸಹಾಯ ಮಾಡುವಂತೆ ಎರಡು ಬಾರಿ ಪ್ರಧಾನಿ ಮೋದಿ ಅವರ ಬಳಿಗೆ ನಿಯೋಗ ಕರೆದುಕೊಂಡು ಹೋಗಿ ಮನವಿ ಮಾಡಿದ್ದೇವೆ ಆದರೆ ಕೇಂದ್ರದಿಂದ ಯಾವುದೇ ನೆರವು ಬಂದಿಲ್ಲ. ಆದರೆ ನಾವು ಮಾತುಕೊಟ್ಟಿದ್ದೇವೆ ಸಾಲಮನ್ನಾ ಮಾಡಿಯೇ ಸಿದ್ಧ ಎಂದು ಅವರು ಸ್ಪಷ್ಟಪಡಿಸಿದರು.
ಸಾಲಮನ್ನಾ ಆಗಿಲ್ಲವೆಂದು ಬೊಬ್ಬೆ ಇಡುತ್ತಿರುವ ಬಿಜೆಪಿ ನಾಯಕರು ತಮ್ಮ ಕೇಂದ್ರ ಸರ್ಕಾರದ ಬಳಿ ಕೇಳಬೇಕು, ಏಕೆ ಸಹಾಯ ಮಾಡಲಿಲ್ಲ ಎಂದು ಅವರು ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.












Click it and Unblock the Notifications