ಅಚ್ಛೆ ದಿನ್! ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್
ನವದೆಹಲಿ, ಜುಲೈ 04: ಲೋಕಸಭೆ ಚುನಾವಣೆ ಸನಿಹದಲ್ಲಿದ್ದಂತೆ ಕೇಂದ್ರದ ಬಿಜೆಪಿ ಸರ್ಕಾರವು ರೈತರಿಗೆ ಭರ್ಜರಿ ಉಡುಗೊರೆ ನೀಡಿದೆ. ಸುಮಾರು 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಪಡಿಸಿರುವ ಸರ್ಕಾರ ರೈತರ ಓಲೈಕೆಗೆ ಮುಂದಾಗಿದೆ.
ಭತ್ತ, ರಾಗಿ, ಕಬ್ಬು ಸೇರಿದಂತೆ ಒಟ್ಟು 14 ಮುಂಗಾರಿನ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಏರಿಸಿದ್ದು ಇದು ರಾಷ್ಟ್ರದ ಕೋಟ್ಯಂತರ ರೈತರಿಗೆ ಇದರ ಲಾಭ ತಲುಪಲಿದೆ.
ಉತ್ಪಾದನಾ ವೆಚ್ಚದ 150% ರಷ್ಟು ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದ್ದು, ಇತಿಹಾಸದಲ್ಲಿಯೇ ದೊಡ್ಡ ಪ್ರಮಾಣ ಏರಿಕೆ ಎನ್ನಲಾಗಿದೆ. ಈ ಏರಿಕೆಯಿಂದ ಕೇಂದ್ರವು ಸುಮಾರು 15000 ಕೋಟಿ ಹೆಚ್ಚುವರಿ ಹಣವನ್ನು ವ್ಯಯಿಸಬೇಕಾಗಿದೆ.

ಇಂದು ನಡೆದ ನಡೆದ ಕೇಂದ್ರ ಸಂಪುಟದಲ್ಲಿ ಈ ನಿರ್ಣಯವನ್ನು ಮಾಡಲಾಗಿದ್ದು, 14 ಮುಂಗಾರಿನ ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕ್ವಿಂಟಾಲ್‌ಗೆ 200 ಗಳಿಂದ 1750ಕ್ಕೆ ಹೆಚ್ಚಿಸಿದೆ ಕೇಂದ್ರ ಸರ್ಕಾರ.
ಬಿಜೆಪಿಯು ಲೋಕಸಭೆ ಚುನಾವಣೆಗೆ ಮುನ್ನಾ ಕೃಷಿ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಆದಾಯ ಬರುವ ಹಾಗೆ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಅಲ್ಲದೆ ರೈತರ ಆದಾಯ ದ್ವಿಗುಣ ಮಾಡುವುದಾಗಿಯೂ ಭರವಸೆ ನೀಡಿತ್ತು ಹಾಗಾಗಿ ಲೋಕಸಭೆ ಚುನಾವಣೆ ಹತ್ತಿರವಿದ್ದಾಗ ಈ ಮಹತ್ವದ ನಿರ್ಣಯವನ್ನು ಮೋದಿ ಸರ್ಕಾರ ತೆಗೆದುಕೊಂಡಿದೆ.












Click it and Unblock the Notifications