ಎಡೆದೊರೆ ನಾಡಿಗೆ ಬಾರದ ಕೇಂದ್ರ ಬರ ಅಧ್ಯಯನ ತಂಡ, ಆಕ್ರೋಶಗೊಂಡ ರೈತರು
ರಾಯಚೂರು, ಅಕ್ಟೋಬರ್, 07: ಜಿಲ್ಲೆಯಲ್ಲಿ ಮಾರುಕಟ್ಟೆಗೆ ಬರುವ ಮುಂಚೆಯೇ ಹತ್ತಿ ದರ ತೀವ್ರ ಕುಸಿತ ಕಂಡಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಪ್ರಸಕ್ತ ವರ್ಷ ಸಕಾಲಕ್ಕೆ ಮಳೆ ಬಾರದೇ ಇರುವುದರಿಂದ ಮಳೆಯೂ ಬಂದಿಲ್ಲ. ಇಳುವರಿಯೂ ಬಂದಿಲ್ಲ. ಹತ್ತಿ ಮಾರುಕಟ್ಟೆಗೆ ಬರುವುದಕ್ಕಿಂತ ಮುಂಚೆಯೇ ದರ ಕುಸಿದಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿದೆ.
ಮುಂಗಾರು ಮಳೆ ಸರಿಯಾದ ಸಮಯಕ್ಕೆ ಬಾರದೆ ತಡವಾಗಿ ಮಳೆಯ ಅಭಾವದಿಂದ ಬೆಳೆ ಅಷ್ಟಕಷ್ಟೆ ಬಂದಿದೆ. ಈ ಹೊತ್ತಿನಲ್ಲಿ ಹತ್ತಿಯ ದರ ಕುಸಿದಿದೆ. ತುಂಗಭದ್ರಾ ಮತ್ತು ಕೃಷ್ಣಾ ನೀರಾವರಿ ಪ್ರದೇಶದಲ್ಲಿ ಹತ್ತಿ ಬೆಳೆದ ರೈತರು ಬೆಲೆ ಕುಸಿತದ ಬಿಸಿಗೆ ಭಯದ ಸೃಷ್ಟಿಯಾಗಿದೆ.

ಕಳೆದ ವರ್ಷ ಮೊದಲಿಗೆ ಹತ್ತಿ ಬೆಳೆ ಉತ್ತಮವಾಗಿ ಬಂದಿತ್ತು. ಆದರೆ ನಿರಂತರ ಮಳೆ ಕಾಟದಿಂದ ಹತ್ತಿ ಬೆಲೆ ಕೇವಲ 6 ಸಾವಿರ ರೂಪಾಯಿ ಇತ್ತು. ಧೃತಿಗೆಡದ ರೈತರು ಮತ್ತೆ ಈ ವರ್ಷ ಪ್ರಾರಂಭದಲ್ಲೇ ಹತ್ತಿ ಬೆಳೆದಿದ್ದರು. ಬೆಲೆ ಹೆಚ್ಚುವ ನಿರೀಕ್ಷೆಯಲ್ಲಿ ರೈತರಿಗೆ ನಿರಾಸೆ ಹುಟ್ಟಿಸಿದೆ. ರಾಯಚೂರು ಹತ್ತಿ ಮಾರುಕಟ್ಟೆಗೆ ಯಾದಗಿರಿ, ರಾಯಚೂರು ಮತ್ತಿತರ ಜಿಲ್ಲೆಗಳ ಬೆಳೆಗಾರರು ಇಲ್ಲಿಗೆ ತಂದು ಮಾರುವ ವಾಡಿಕೆ ಇದೆ. ಆದರೆ ಬೆಲೆ ಇಲ್ಲದೆ ಇರುವುದರಿಂದ ಸಂಕಷ್ಟಕ್ಕೆ ಸಿಲುಕಿರುವುದು ಗೋಚರಿಸಿದೆ.
ಪ್ರಸಕ್ತ ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1.79 ಲಕ್ಷ ಹೆಕ್ಟೇರ್‌ನಲ್ಲಿ ಹತ್ತಿ ಬೆಳೆಯಲಾಗಿದೆ. ರಾಯಚೂರು 1 ತಾಲೂಕಿನಲ್ಲಿ 65,674 ಹೆಕ್ಟೇರ್, ದೇವದುರ್ಗ ತಾಲೂಕಿನಲ್ಲಿ 73,500 ಹೆಕ್ಟೇರ್ , ಸಿಂಧನೂರು ತಾಲೂಕಿನಲ್ಲಿ 1,322 ಹೆಕ್ಟೇರ್, ಲಿಂಗಸೂಗೂರು ತಾಲೂಕಿನಲ್ಲಿ 3,767 ಹೆಕ್ಟೇರ್, ಮಾನ್ವಿ ತಾಲೂಕಿನಲ್ಲಿ 20,160 ಹೆಕ್ಟೇರ್, ಸಿರವಾರ ತಾಲೂಕಿನಲ್ಲಿ 8,611 ಹೆಕ್ಟೇರ್, ಮಸ್ಕಿ ತಾಲೂಕಿನಲ್ಲಿ 6,386 ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತಿದ್ದು, ಪ್ರಸಕ್ತ ವರ್ಷ ಸುರಿದ ಧಾರಾಕಾರ ಮಳೆಯಿಂದ ಕಂಟಕ ಎದುರಾಗಿದೆ. ಈಗ ಮಳೆಯ ಅಭಾವ ಕಾಡಿದೆ.
ಕಳೆದ ವರ್ಷ ಪ್ರಾರಂಭದಲ್ಲಿ 9 ರಿಂದ 13 ಸಾವಿರ ರೂಪಾಯಿ ಪ್ರತಿ ಕ್ವಿಂಟಾಲ್‌ಗಿದ್ದ ಹತ್ತಿ ಬೆಲೆ ಸದ್ಯ ರಾಯಚೂರು ಹತ್ತಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ 6,600 ರೂಪಾಯಿಗಳಿಂದ 7000 ರೂಪಾಯಿವರೆಗೆ ಬಂದು ತಲುಪಿದೆ. ಮಾರುಕಟ್ಟೆಗೆ ಹತ್ತಿ ಅವಕವಾಗುತ್ತಿರುವುದರಿಂದ ದರ ಕುಸಿತವಾಗಿದೆ. ಇನ್ನೂ ಸಾಕಷ್ಟು ಹತ್ತಿ ಮಾರುಕಟ್ಟೆಗೆ ಬರಲಿರುವುದರಿಂದ ದರ ಮತ್ತಷ್ಟು ಕುಸಿತ ಕಾಣಲಿದೆ ಎಂಬ ಮಾತು ಕೇಳಿಬರುತ್ತಿವೆ.
ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆಯಬೇಕಿದೆ. ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದಲೂ ಹತ್ತಿಯು ರಾಯಚೂರು ಮಾರುಕಟ್ಟೆಗೆ ಅವಕವಾಗುತ್ತಿದ್ದು, ಇದರಿಂದಾಗಿ ಹತ್ತಿ ಬೆಳೆಗಾಗರರ ಮಧ್ಯೆಯೇ ಪೈಪೋಟಿ ಹೆಚ್ಚಾಗಿದೆ. ಹತ್ತಿ ಬೆಳೆಯು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇದರಿಂದ ರೈತರಿಗೆ ತೀವ್ರ ತೊಂದರೆ ಎದುರಾಗಿದೆ. ಈಗಷ್ಟೇ ಹತ್ತಿ ಮಾರುಕಟ್ಟೆಗೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಆರ್ಥಿಕ ನಷ್ಟದ ಹೊರೆ ಎದುರಾಗಲಿದೆ. ಸರ್ಕಾರ ಕೂಡಲೇ ರೈತರಿಗೆ ಬರ ಪರಿಹಾರದ ಜೊತೆಗೆ ಹತ್ತಿ ದರ ಕುಸಿತ ತಡೆಗೆ ಮುಂದಾಗಬೇಕು ಎಂದು ರೈತ ಮುಖಂಡ ಕಡಗಂದೊಡ್ಡಿ ಆಗ್ರಹಿಸಿದ್ದಾರೆ.
ಎಡೆದೊರೆ ನಾಡಿಗೆ ಬರ ಅಧ್ಯಯನ ತಂಡ ಬರದೆ ಇರುವುದರಿಂದ ರೈತ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಮುಂಗಾರು ಬೆಳೆ ಕೈ ಕೊಟ್ಟಿದೆ. ವರುಣನ ಅವಕೃಪೆಯಿಚಿದಾಗಿ ಬಿತ್ತಿದ ಬೆಳೆಗಳೆಲ್ಲವೂ ಬಾಡಿವೆ. ಇಳುವರಿಯೂ ಬಂದಿಲ್ಲ. ರೈತ ಸಮೂಹದ ಬದುಕು ಮೂರಾಬಟ್ಟೆಯಾಗಿದೆ. ಜಿಲ್ಲೆಯಲ್ಲಿ ಭೀಕರ ಬರ ಇದ್ದರೂ ಕೇಂದ್ರ ಬರ ಅಧ್ಯಯನ ತಂಡ ಬಂದಿಲ್ಲ. ಬರುವ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ. ಪಕ್ಕದ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಅಧ್ಯಯನ ನಡೆಯುತ್ತಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಯಾಕಿಲ್ಲ ಎಂಬ ಪ್ರಶ್ನೆ ಎದ್ದಿದೆ.
ಜಿಲ್ಲೆಯಲ್ಲಿ ಹಿಂಗಾರು ಆರಂಭವಾಗದೇ ತೀವ್ರ ಬರಗಾಲು ಎದುರಿಸುತ್ತಿರುವ ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಅಧ್ಯಯನ ತಂಡ ಪ್ರವಾಸ ಮಾಡುತ್ತಿಲ್ಲ. ಹೀಗಾಗಿ ಇಲ್ಲಿನ ರೈತ ಸಮುದಾಯ ಆಕ್ರೋಶಗೊಂಡಿದ್ದು, ಶಾಶ್ವತ ನಿಧಿ ಸ್ಥಾಪಿಸುವಂತೆ ಒತ್ತಡ ಹೇರಿದೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಸರ್ಕಾರ ರಾಜ್ಯದ 161 ತಾಲೂಕುಗಳನ್ನು ತೀವ್ರ ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಿದ್ದು, ಈ ಹಿನ್ನೆಲೆ ಬರ ವೀಕ್ಷಣೆಗೆ ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಕಾಲಿಟ್ಟಿದೆ. ರಾಯಚೂರು ಜಿಲ್ಲೆಗ್ಯಾಕೆ ಬಂದಿಲ್ಲ ಎಂಬ ಸಂಶಯ ವ್ಯಕ್ತವಾಗಿದೆ.
ಎಡೆದೊರೆ ನಾಡಿನಲ್ಲಿ ಕೃಷ್ಣ ಹಾಗೂ ತುಂಗಭದ್ರಾ ನದಿಗಳಿದ್ದರೂ ತೀವ್ರ ಬರಗಾಲದಿಂದ ಕುಡಿಯವ ನೀರಿಗೆ ಪರದಾಡುವಚಂತಹ ಸ್ಥಿತಿ ಇದೆ. ಮೊದಲೇ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿದ ಜಿಲ್ಲೆಯ 7 ತಾಲೂಕುಗಳ ಪೈಕಿ 6 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಆದರೆ ಕೇಂದ್ರ ಅಧ್ಯಯನ ತಂಡ ಜಿಲ್ಲೆಗೆ ಮಾತ್ರ ಭೇಟಿ ನೀಡದೆ ಕೇಂದ್ರದಿಂದ ತಾರತಮ್ಯ ಮಾಡಲಾಗುತ್ತಿದೆ ಎಂಬ ಮಾತುಗಳು ವ್ಯಕ್ತವಾಗಿವೆ.
ಜಿಲ್ಲೆಯಲ್ಲಿ ಬರಗಾಲಕ್ಕೆ ಸಂಬಂಧಪಟ್ಟಂತೆ ಮೊದಲ ಸುತ್ತಿನಲ್ಲಿ ಕೇಂದ್ರ ಬರ ಅಧ್ಯಯನ ತಂಡ ಬಂದಿಲ್ಲ. ಎರಡನೇ ಸುತ್ತಿನಲ್ಲಿ ಬರಬಹುದು ಎಂದು ಕಾಯುತ್ತಿದ್ದೇವೆ. ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲ ಮಾಹಿತಿಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು.
ಜಿಲ್ಲೆಯ 6 ತಾಲೂಕಿನಲ್ಲಿ ಬರಗಾಲಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಬೆಳೆ ಸಮೀಕ್ಷೆ ವರದಿ ಸಲ್ಲಿಸಲಾಗಿದೆ. ಆದರೆ ಕೇಂದ್ರ ಬರ ಅಧ್ಯಯನ ತಂಡ ಬಂದಿಲ್ಲ. ಮುಂದಿನ ಸುತ್ತಿನಲ್ಲಿ ಬರುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಆರ್.ದೇವಿಕಾ ಹೇಳಿದರು.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications