ಸಿದ್ದು ಸರ್ಕಾರ ಕೋಮಾವಸ್ಥೆಯಲ್ಲಿದೆ: ಯಡಿಯೂರಪ್ಪ
ಮೈಸೂರು, ಸೆ. 13: ಬಿಜೆಪಿಯ ರೈತ ಚೈತನ್ಯ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಂಸದ ಬಿಎಸ್ ಯಡಿಯೂರಪ್ಪ ಅವರು ಗುಡುಗಿದ್ದಾರೆ.
ರೈತ ಚೈತನ್ಯ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಮೈಸೂರಿಗೆ ಆಗಮಿಸ್ದಬೇಕಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಬಿಹಾರ ಚುನಾವಣೆ ಬಿಸಿಯಲ್ಲಿ ಮೈಸೂರು ಭೇಟಿ ಕಾರ್ಯಕ್ರಮವನ್ನು ಕೊನೆಕ್ಷಣದಲ್ಲಿ ರದ್ದುಗೊಳಿಸಿದ್ದರಿಂದ ಯಡಿಯೂರಪ್ಪ ಮತ್ತೊಮ್ಮೆ ಮೈಕ್ ಹಿಡಿದು ಪ್ರಖರ ಭಾಷಣ ಶುರು ಮಾಡಿದರು. ['ನಾಳೆಯಿಂದ ಸಿದ್ದರಾಮಯ್ಯ ಅವರೇ ಹೈಕಮಾಂಡ್']
ಅಮಿತ್ ಶಾ ಹಾಗೂ ಮೈಸೂರು: ಎರಡನೇ ಬಾರಿಗೆ ಅಮಿತ್ ಶಾ ಅವರು ಮೈಸೂರು ಪ್ರವಾಸ ತಪ್ಪಿಸಿಕೊಳ್ಳುತ್ತಿದ್ದಾರೆ. ಬಿಹಾರದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಗೊಂದಲ ನಿವಾರಿಸುವ ಜವಾಬ್ದಾರಿ ಹೊತ್ತಿರುವುದರಿಂದ ಅನಂತ್ ಕುಮಾರ್ ಹಾಗೂ ಅಮಿತ್ ಶಾ ಅವರು ಮೈಸೂರಿನ ಕಡೆ ಬರಲಿಲ್ಲ ಎಂದು ತಿಳಿದು ಬಂದಿದೆ.
ರಾಜ್ಯದ 27 ಜಿಲ್ಲೆಗಳಲ್ಲಿ ಸಂಚರಿಸಿ ಬಿಜೆಪಿ ರೈತ ಚೈತನ್ಯ ಯಾತ್ರೆಯನ್ನು ನಡೆಸಿದ್ದು. ಪವರ್ ಕಟ್, ರೈತರ ಸಾಲ ಮನ್ನಾ, ಆತ್ಮಹತ್ಯೆ ಪ್ರಕರಣಗಳಿಗೆ ಸಿಗದ ಪರಿಹಾರ, ಕಬ್ಬು ಬೆಳೆಗಾರರ ಹೋರಾಟ, ಕಳಸಾ ಬಂಡೂರಿ ಸೇರಿದಂತೆ ಹಲವಾರು ವಿಚಾರಗಳನ್ನು ಬಿಜೆಪಿ ನಾಯಕರು ಈ ಯಾತ್ರೆ ಸಂದರ್ಭದಲ್ಲಿ ಜನರ ಮುಂದಿಟ್ಟಿದ್ದರು. [ಯಡಿಯೂರಪ್ಪ ರಾಜ್ಯ ರಾಜಕಾರಣಕ್ಕೆ ಮರಳಿದರೆ?]

ಭಾಷಣದ ಮುಖ್ಯಾಂಶಗಳು:
ಬಿಎಸ್ ಯಡಿಯೂರಪ್ಪ: ಮೊದಲ ಹಂತದ ಸಮಾರೋಪ ಅಷ್ಟೇ. ರೈತರ ಚೈತನ್ಯ ಯಾತ್ರೆ, ಅಕ್ಟೋಬರ್ ನಲ್ಲಿ ಮೈಸೂರು, ಚಾಮರಾಜ ನಗರ, ಮಂಡ್ಯದಲ್ಲಿ ಯಾತ್ರೆ ಕೈಗೊಳ್ಳಲಾಗುವುದು. ಸಿದ್ದರಾಮಯ್ಯ ಸರ್ಕಾರ ಈವರೆಗೂ ನಿದ್ದೆ ಸರ್ಕಾರವಾಗಿತ್ತು. ಈಗ ಕೋಮಾವಸ್ಥೆಗೆ ಜಾರಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಜನತೆಯನ್ನು ಕಾಪಾಡುವವರು ಯಾರು ಎಂದು ಪ್ರಶ್ನಿಸಿದರು.
ಶ್ರೀರಾಮುಲು ಮಾತನಾಡಿ: ಸುಮಾರು 440 ಮಂದಿ ಏನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವ ಒಬ್ಬ ರೈತನ ಮನೆಗೆ ಸರ್ಕಾರ ಹೋಗಿ ಸಾಂತ್ವನ ಹೇಳಿಲ್ಲ. ನಿಮಗಾ ರೈತರ ಕಷ್ಟ ಅರ್ಥ ಆಗಿಲ್ಲ ಎಂದರು.[ನರೇಂದ್ರ ಮೋದಿಗೆ ಕರ್ನಾಟಕದ ಕೂಗು ಕೇಳಿಸಲಿ: ಚಿತ್ರರಂಗ]
ಬಿಬಿಎಂಪಿ ಗದ್ದುಗೆ ತಪ್ಪಿರುವ ಆಘಾತಕ್ಕೊಳಗಾಗಿರುವ ಆರ್ ಅಶೋಕ್ ಅವರು ಕೂಡಾ ಸಿದ್ದರಾಮಯ್ಯಅವರ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರಿಗೆ ಇರುವುದು ಕುರ್ಚಿ ಚಿಂತೆ ಅಷ್ಟೇ. ಮುಖ್ಯಮಂತ್ರಿಯಾಗುವ ಕನಸು ಈಡೇರಿದೆ ಅಷ್ಟು ಸಾಕು. ಈಗ ಸಂಪುಟ ವಿಸ್ತರಣೆ ಬಗ್ಗೆ ಚಿಂತಿಸುತ್ತಾರೆ ಹೊರತೂ ರೈತರ ಬಗ್ಗೆ ಯೋಚಿಸುವುದಿಲ್ಲ ಎಂದರು.
ಸಮಾರೋಪ ಸಮಾರಂಭದಲ್ಲಿ ಜಗದೀಶ್ ಶೆಟ್ಟರ್, ಡಿವಿ ಸದಾನಂದ ಗೌಡ, ಆರ್ ಆಶೋಕ್, ಪ್ರಹ್ಲಾದ್ ಜೋಶಿ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಭಾಗವಹಿಸಿದ್ದರು.












Click it and Unblock the Notifications