• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

1 ಕೆ.ಜಿಗೆ 1 ಲಕ್ಷ ರೂ; ಪ್ರಪಂಚದ ಅತಿ ದುಬಾರಿ ತರಕಾರಿ ಬೆಳೆದ ಈ ರೈತ

|

ಪಾಟ್ನಾ, ಏಪ್ರಿಲ್ 1: ಪ್ರಪಂಚದಲ್ಲೇ ಅತಿ ದುಬಾರಿ ಎನಿಸಿಕೊಂಡ ತರಕಾರಿಯೊಂದನ್ನು ಬೆಳೆಯುವ ಪ್ರಯೋಗ ಈಗ ಭಾರತದಲ್ಲಿಯೂ ನಡೆಯುತ್ತಿದೆ. ಈ ತರಕಾರಿ ಬೆಳೆಯಲು ಬಿಹಾರದ ರೈತರೊಬ್ಬರು ಮುಂದಾಗಿದ್ದು, ಈಗಾಗಲೇ ತರಕಾರಿ ಕೊಯ್ಲನ್ನೂ ಮಾಡಿದ್ದಾರೆ. ಈ ಅಪರೂಪದ ತರಕಾರಿಯ ಫೋಟೊಗಳನ್ನು ಐಎಎಸ್ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ತರಕಾರಿ ಭಾರೀ ಸದ್ದು ಮಾಡುತ್ತಿದೆ.

ಈ ತರಕಾರಿ ಹೆಸರು ಹಾಪ್‌ ಶೂಟ್. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಎಂಬುವರು ಈ ತರಕಾರಿ ಫೋಟೊಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ಇದರ ಬಗ್ಗೆ ಚರ್ಚೆ ಶುರುವಾಗಿದೆ. ಒಂದು ಕೆ.ಜಿ ಹಾಪ್‌ಶೂಟ್‌ಗೆ ಒಂದು ಲಕ್ಷ ರೂಪಾಯಿ ಬೆಲೆ ಎಂಬುದೇ ಚರ್ಚೆಯ ಕೇಂದ್ರ ಬಿಂದುವೂ ಆಗಿದೆ. ಈ ತರಕಾರಿ ಬಗ್ಗೆ ತಿಳಿಯಲು ಮುಂದೆ ಓದಿ...

ಹಳದಿ ಎಲೆ ರೋಗ ನಿಯಂತ್ರಣ ಸಾಧ್ಯ: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್

 ಬಿಹಾರದ ರೈತ ಅಮರೇಶ್ ಸಿಂಗ್ ಪ್ರಯೋಗ

ಬಿಹಾರದ ರೈತ ಅಮರೇಶ್ ಸಿಂಗ್ ಪ್ರಯೋಗ

ಬಿಹಾರದ ಔರಂಗಾಬಾದ್‌ ರೈತ ಅಮರೇಶ್ ಸಿಂಗ್ ಇದನ್ನು ಬೆಳೆಯುವ ಸಾಹಸಕ್ಕೆ ಕೈ ಹಾಕಿದ್ದಾರೆ. 2.5 ಲಕ್ಷ ಬಂಡವಾಳದೊಂದಿಗೆ ಇದನ್ನು ಬೆಳೆಯಲು ಆರಂಭಿಸಿದ್ದಾರೆ. ಇದನ್ನು ಕೆಲವು ವರ್ಷಗಳ ಹಿಂದೆ ಭಾರತದ ಹಿಮಾಚಲ ಪ್ರದೇಶದ ಲಾಹೌಲ್ ಎಂಬಲ್ಲಿಯೂ ಸಣ್ಣ ಮಟ್ಟದಲ್ಲಿ ಬೆಳೆಯಲಾಗಿತ್ತು. ಆದರೆ ಕೆಲವು ಕಾರಣದಿಂದಾಗಿ ಯಶಸ್ವಿಯಾಗಲಿಲ್ಲ. ಇದೀಗ ಬಿಹಾರದಲ್ಲಿ ಪ್ರಯೋಗ ನಡೆಯುತ್ತಿದ್ದು, ಈ ಪ್ರಯೋಗ ಯಶಸ್ವಿಯಾದರೆ ಭಾರತದ ಕೃಷಿಯಲ್ಲಿ ಒಂದಿಷ್ಟು ಬದಲಾವಣೆ ತರಬಹುದು ಎಂದು ನಿರೀಕ್ಷಿಸಲಾಗಿದೆ.

 ಹಾಪ್‌ ಶೂಟ್ ಎಂದರೇನು?

ಹಾಪ್‌ ಶೂಟ್ ಎಂದರೇನು?

ಇದು ದೀರ್ಘಕಾಲಿಕ ಸಸ್ಯ ಎನ್ನಲಾಗಿದೆ. ಹ್ಯುಮುಲುಸ್- ಲುಪುಲಸ್ (humuluslupulus) ಇದರ ವೈಜ್ಞಾನಿಕ ಹೆಸರು. ಉತ್ತರ ಅಮೆರಿಕ ಹಾಗೂ ಯುರೋಪ್‌ ದೇಶದಲ್ಲಿ ಇದನ್ನು ಹೆಚ್ಚು ಬೆಳೆಯಲಾಗುತ್ತದೆ. ಇದರ ಗುಣಗಳ ಬಗ್ಗೆ ತಿಳಿಯುವವರೆಗೂ ಇದನ್ನು ಒಂದು ಕಳೆ ಸಸ್ಯ ಎಂದು ಪರಿಗಣಿಸಲಾಗಿತ್ತು. ಆದರೆ ಇದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂದು ತಿಳಿದ ನಂತರ ಇದಕ್ಕೆ ಏಕಾಏಕಿ ಬೇಡಿಕೆ ಬಂತು. ಇದರ ಹೂವು- ಹಾಪ್‌ ಕೋನ್ ಅನ್ನು ಬಿಯರ್‌ನಲ್ಲಿಯೂ ಬಳಸುತ್ತಾರೆ.

ಹಾಪ್‌ಶೂಟ್ ದುಬಾರಿ ಏಕೆ?

ಗಾರ್ಡಿಯನ್ ವರದಿ ಮಾಡಿದ ಪ್ರಕಾರ; ಈ ತರಕಾರಿ ಬೆಳೆಯುವುದು ಸಾಕಷ್ಟು ಶ್ರಮವನ್ನು ಬೇಡುತ್ತದೆ. ಹೀಗಾಗೇ ಇದಕ್ಕೆ ಈ ಪರಿ ಬೆಲೆಯಿದೆ. ಜೊತೆಗೆ ಈ ಬೆಳೆ ಮೇಲೆ ಸದಾ ನಿಗಾ ಇಡಬೇಕಾಗುತ್ತದೆ. ಈ ತರಕಾರಿಯನ್ನು ಆಹಾರ ಹಾಗೂ ಔಷಧ ಎರಡಕ್ಕೂ ಉಪಯೋಗಿಸಲಾಗುತ್ತದೆ. ತರಕಾರಿಯಲ್ಲಿನ ಅಂಶ ಟಿ.ಬಿಗೆ ಔಷಧವಾಗಿದೆ ಹಾಗೂ ಇದರ ಆಸಿಡ್‌ಕಾರಕ ಗುಣ ಕ್ಯಾನ್ಸರ್ ಕೋಶಗಳನ್ನು ತೊಡೆದು ಹಾಕುತ್ತದೆ ಎಂದು ಕೆಲವು ವರದಿಗಳು ತಿಳಿಸಿವೆ.

 ವಾರಾಣಸಿಯ ಸಂಶೋಧನಾ ಸಂಸ್ಥೆಯಲ್ಲಿ ಪ್ರಯೋಗ

ವಾರಾಣಸಿಯ ಸಂಶೋಧನಾ ಸಂಸ್ಥೆಯಲ್ಲಿ ಪ್ರಯೋಗ

ಈ ಹಾಪ್‌ಶೂಟ್ ಅನ್ನು ವಾರಾಣಸಿಯ ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆಯಲ್ಲಿನ ಡಾ. ಲಾಲ್ ಅವರ ನೇತೃತ್ವದಲ್ಲಿ ಬೆಳೆಯುತ್ತಿದ್ದು, ಅಲ್ಲಿಂದ ಅಮರೇಶ್ ಸಸಿಗಳನ್ನು ತಂದಿದ್ದರು. ತಮ್ಮ ಭೂಮಿಯಲ್ಲಿ ಇದರ ಕೃಷಿ ಕೈಗೊಂಡಿದ್ದು, ಒಳ್ಳೆಯ ಮಾರುಕಟ್ಟೆಯ ನಿರೀಕ್ಷೆಯಲ್ಲಿದ್ದಾರೆ.

English summary
Bihar farmer Amaresh singh growing worlds costliest vegetable Hop Shoot photo viral in social media,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X