ಬೆಂಗಳೂರು ಹೂವಿನ ಅರಮನೆ ನೋಡದಿದ್ದರೆ ನಿಮಗೇ ನಷ್ಟ
ಬೆಂಗಳೂರು, ಆಗಸ್ಟ್. 10: ಲಾಲ್ ಬಾಗ್ ನಲ್ಲಿ ಬೆಂಗಳೂರು ಅರಮನೆ ನಿರ್ಮಾಣವಾಗಿದೆ. ಗಾಜಿನ ಮನೆ ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ. ಕೆಂಪು-ಹಸಿರು-ಬಿಳಿ ಗುಲಾಬಿಯಲ್ಲಿ ಅರಳಿರುವ ಅರಮನೆಯ ಸೌಂದರ್ಯವನ್ನು ವರ್ಣಿಸಲು ಅಸಾಧ್ಯ.
ಪುರುಸೊತ್ತು ಮಾಡಿಕೊಂಡು ಲಾಲ್ ಬಾಗ್ ಗೆ ಒಂದು ಭೇಟಿ ನೀಡಲು ಮರಯಬೇಡಿ. ಹಾ.. ನೆನಪಿರಲಿ ಆಗಸ್ಟ್ 17 ಪ್ರದರ್ಶನದ ಅಂತಿಮ ದಿನ. ಬೆಂಗಳೂರು ಹೂವಿನ ಅರಮನೆಯನ್ನು ಒಮ್ಮೆ ಕಣ್ಣು ತುಂಬಿಕೊಂಡು ಬನ್ನಿ. ಸಂಜೆ ಸುಮಧುರ ಸಂಗೀತ ಆಸ್ವಾದಿಸುತ್ತ, ಬಣ್ಣದ ಕಾರಂಜಿಯ ನಡುವೆ ಹೂವಿನ ಅರಮನೆಯನ್ನು ನೋಡಿದರೆ ...[ಅರಮನೆಯ ಚಿತ್ರಗಳನ್ನು ಕಣ್ಣು ತುಂಬಿಸಿಕೊಳ್ಳಿ]
ಎಲ್ಲವನ್ನು ನೋಡಿ ಮುಗಿಸಲು ನಿಮಗೆ ಕನಿಷ್ಠ ಅರ್ಧ ದಿನವಾದರೂ ಬೇಕು. ತೋಟಗಾರಿಕಾ ಇಲಾಖೆಯ ಮಳಿಗೆಗಳು, ಹಣ್ಣು ಮತ್ತು ತರಕಾರಿ ಬೆಳವಣಿಗೆಯ ಮಾಹಿತಿ ಕೇಂದ್ರಗಳು, ಲಾವಂಚ, ಹೂವಿನ ಗಿಡ, ಗೃಹೋಪಯೋಗಿ ಸಾಮಗ್ರಿ ಎಲ್ಲವನ್ನು ನೋಡಿಕೊಂಡು ವಾಪಸ್ ಆಗಬಹುದು. ಹಾಗಾದರೆ ನೀವು ಕುಳಿತಲ್ಲೇ ಲಾಲ್ ಬಾಗ್ ನ್ನು ಒಂದು ಸುತ್ತು ಹಾಕಿ ಬನ್ನಿ....

ಗಾಜಿನ ಮನೆಯಲ್ಲಿ ಬೆಂಗಳೂರು ಅರಮನೆ
ಗಾಜಿನ ಮನೆ ಆವರಣದಲ್ಲಿ ಹೂವಿನಿಂದ ನಿರ್ಮಿಸಿರುವ 'ಬೆಂಗಳೂರು ಅರಮನೆ ಪ್ರಮುಖ ಆಕರ್ಷಣೆ ಬಿಂದು. ಜತೆಗೆ ಮೈಸೂರು ರಾಜವಂಶಸ್ಥರ ಪ್ರತಿಮೆ, ಛಾಯಾಚಿತ್ರ ಪ್ರದರ್ಶನ, ಅಲಂಕಾರಿಕ ಗಿಡಗಳು, ತರಹೇವಾರಿ ಹೂ, ಬೋನ್ಸಾಯ್ ನಿಮ್ಮನ್ನು ಒಂದು ಕ್ಷಣ ಅಲ್ಲಿಯೇ ನಿಲ್ಲಿಸುವುದು ಸುಳ್ಳಲ್ಲ.

ಜನರ ರಾಷ್ಟ್ರಪತಿ ಅಬ್ದುಲ್ ಕಲಾಂಗೆ ನಮನ
ಗಾಜಿನ ಮನೆಯ ಹಿಂಭಾಗದಲ್ಲಿ ಮರಳಿನಲ್ಲಿ ಮೂಡಿದ ಅಬ್ದುಲ್ ಕಲಾಂ ಅವರು ನಿಮ್ಮನ್ನು ತಡೆದು ನಿಲ್ಲಿಸುತ್ತಾರೆ. ಒಂದೆಡೆ ಭಾರತದ ನಕಾಶೆಯನ್ನು ಹೊತ್ತಿರುವ ಮರಳಿನ ಕಲಾಕೃತಿ ದೇಶಪ್ರೇಮವನ್ನು ಪುಟಿದೇಳಿಸುತ್ತದೆ. ಮೈಸೂರಿನ ಯುವ ಕಲಾವಿದರಾದ ಎಂ.ಎನ್.ಗೌರಿ ಮತ್ತು ನೀಲಾಂಬಿಕಾ ಸಹೋದರಿಯರ ಕಲ್ಪನೆಯಲ್ಲಿ ಕಲಾಂ ಅವರ ಕಲಾಕೃತಿಯು ಮೂಡಿಬಂದಿದೆ.

ಕಲಾಕೃತಿಗೆ ಒಂದು ಲಾರಿ ಮರಳು
ಒಂದು ಲಾರಿ ಮರಳು ಬಳಸಿ, 6 ಅಡಿ ಎತ್ತರ, 10 ಅಡಿ ಉದ್ದ ಮತ್ತು 10 ಅಡಿ ಅಗಲದ ಕಲಾಕೃತಿಯನ್ನು ನಿರ್ಮಿಸಲಾಗಿದೆ. ಈ ಕಲಾಕೃತಿ ನಿರ್ಮಾಣಕ್ಕೆ ಕಲಾವಿದರಿಬ್ಬರು 13 ತಾಸು ನಿರಂತರ ಪರಿಶ್ರಮ ಪಟ್ಟಿದ್ದಾರೆ. ಮಳೆ ಬಂದರೆ ಕಲಾಕೃತಿ ಹಾಳಾಗಬಾರದು ಎಂದು ಮೇಲ್ಛಾವಣಿಯನ್ನು ನಿರ್ಮಿಸಲಾಗಿದೆ.

ವ್ಯವಸ್ಥಿತ ಭದ್ರತೆ
ಯಾವ ಕಡೆಯಿಂದ ಪ್ರವೇಶ ಮಾಡಿದರೂ ಮೆಟಲ್ ಡಿಟೆಕ್ಟರ್ ತಪಾಸಣೆ ಕಡ್ಡಾಯ. ಗಾಜಿನನ ಅರಮನೆ ಎದುರು ಸಹ ಸರತಿ ಸಾಲಿನಲ್ಲೇ ಸಂಚರಿಸಬೇಕು. ಕಳೆದ ಬಾರಿ ಹೋಲಿಸಿದರೆ ಭದ್ರತೆ ಹೆಚ್ಚಾಗಿಯೇ ಇದೆ. ಜತೆಗೆ ಎರಡೂ ಕಡೆಗೆ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ.

ಮನೆಯ ಸೌಂದರ್ಯ ಹೆಚ್ಚಿಸಬೇಕೆ?
ಗೃಹಿಣಿಯರು ಪ್ರದರ್ಶನಕ್ಕೆ ಒಮ್ಮೆ ಭೇಟಿ ನೀಡಲೇಬೇಕು. ನಿಮ್ಮ ಮನೆಯ ಸೌಂದರ್ಯವನ್ನು ಕಡಿಮೆ ಖರ್ಚಿನಲ್ಲಿ ಹೆಚ್ಚಿಸಿಕೊಳ್ಳಲು, ಟೆರೆಸ್ ನರ್ಸರಿ ಬಗ್ಗೆ ತಿಳಿವಳಿಕೆ ಬೆಳೆಸಿಕೊಳ್ಳಲು ಜತೆಗೆ ಮಕ್ಕಳೊಂದಿಗೆ ಪ್ರಶಾಂತವಾಗಿ ಕಾಲ ಕಳೆಯಲು ಲಾಲ್ ಬಾಗ್ ತೆರಳಿದರೆ ನಷ್ಟವಿಲ್ಲ.

ಭಾನುವಾರ 45 ಸಾವಿರ ಜನ ಭೇಟಿ
ಭಾನುವಾರ ಆಗಸ್ಟ್ 9 ರಂದು ಒಂದೇ ದಿನ ಸುಮಾರು 45 ಸಾವಿರ ಪ್ರವಾಸಿಗರು ಲಾಲ್ ಬಾಗ್ ಗೆ ಭೇಟಿ ನೀಡಿ ಸೌಂದರ್ಯ ಕಣ್ಣು ತುಂಬಿಕೊಂಡಿದ್ದಾರೆ. ರಜಾ ದಿನದ ಹಿನ್ನೆಲೆಯಲ್ಲಿ ಜನಜಂಗುಳಿ ಅಧಿಕವಾಗಿಯೇ ಇತ್ತು.
-
Cylinder Shortage: ರಾಜ್ಯದಲ್ಲಿ ಅನಿಲ ಪೂರೈಕೆ ಸಮಸ್ಯೆಗೆ ಮುಕ್ತಿ? ಸಚಿವ ಮುನಿಯಪ್ಪ ಮಹತ್ವ ಮಾಹಿತಿ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ











Click it and Unblock the Notifications