ವರಮಹಾಲಕ್ಷ್ಮಿ ಸಂಭ್ರಮ : ಬೆಂಗಳೂರು ಮಾರ್ಕೆಟಿನ ಪಿಚ್ಚರ್

ಬೆಂಗಳೂರು, ಆಗಸ್ಟ್, 11: ಹಬ್ಬಗಳ ಮಾಸ ಆರಂಭವಾಗಿದೆ. ಶುಕ್ರವಾರ ಆಗಸ್ಟ್ 12 ರಂದು ವರಮಹಾಲಕ್ಷ್ಮೀ ಹಬ್ಬ. ಎಲ್ಲರೂ ಖರೀದಿ ಭರಾಟೆಯಲ್ಲಿ ನಿರತರಾಗಿದ್ದಾರೆ. ನಾವು ಹಾಗೇ ಮಾರುಕಟ್ಟೆ ಮೇಲೆ ಒಂದು ರೌಂಡ್ ಹಾಕಿಕೊಂಡು ಬರೋಣ.

ಈ ಹಬ್ಬಗಳಿಗೂ ಬೆಲೆ ಏರಿಕೆಗೂ ಬಿಡಿಸದ ಬಂಧ. ಹೂವು-ಹಣ್ಣುಗಳ ಬೆಲೆ ಏರಿಕೆಯ ಹಾದಿಯಲ್ಲಿದ್ದರೆ ತೆಂಗಿನಕಾಯಿ ದರ ಗ್ರಾಹಕರ ಕೈಗೆ ಎಟಕುವಂತೆ ಇದೆ. ಕನಕಾಂಬರ ಹೂವು ಕೆ.ಜಿ.ಗೆ 2ಸಾವಿರ ರೂ. ದಾಟಿ ಗೃಹಿಣಿಯರ ತಲೆ ಬಿಸಿ ಹೆಚ್ಚು ಮಾಡಿದೆ.[ವರಮಹಾಲಕ್ಷ್ಮೀ ಹಬ್ಬಕ್ಕೆ ಹಣ್ಣು ಖರೀದಿಗೆ ಹಾಪ್‌ಕಾಮ್ಸ್‌ಗೆ ಬನ್ನಿ]

ಗಾಂಧಿ ಬಝಾರ್, ಕೆಆರ್ ಮಾರುಕಟ್ಟೆ, ಯಶವಂತಪುರ, ಎನ್ ಆರ್ ಕಾಲೋನಿ, ಮಲ್ಲೇಶ್ವರಂ ಸೇರಿದಂತೆ ಪ್ರಮುಖ ಮಾರುಕಟ್ಟೆ ಮತ್ತು ಬೀದಿ ಬದಿಯಲ್ಲಿ ಬಾಳೆ ಕಂದುಗಳು, ಮಾವಿನ ಸೊಪ್ಪು, ಹೂವು-ಹಣ್ಣು ಮಾರಾಟ ಜೋರಾಗಿದೆ. ಸಂಜೆ ಹೆಂಡತಿಯೊಂದಿಗೆ ಮಾರುಕಟ್ಟೆಗೆ ತೆರಳುವ ಮುನ್ನ ದರ ಪಟ್ಟಿಯನ್ನು ಒಮ್ಮೆ ನೋಡಿಕೊಂಡು ಹೋಗಿ...[ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಮತ್ತು ಹಿನ್ನೆಲೆ]

ಹಾಪ್ ಕಾಮ್ಸ್ ದರಪಟ್ಟಿ ನೋಡಿ

ಬಿಡಿ ಹೂವು

ಬಿಡಿ ಹೂವು

ಗಾಂಧಿ ಬಝಾರ್, ಕೆಆರ್ ಮಾರುಕಟ್ಟೆ, ಯಶವಂತಪುರದಲ್ಲಿ ಬಿಡಿ ಹೂವು ಕೆಜಿಗೆ 200 ರಿಂದ 250 ರು, ನಡುವೆ ಬಿಕರಿಯಾಗುತ್ತದೆ. ರಸ್ತೆ ಬದಿಯಲ್ಲಿ ಇದೇ ಬಿಡಿ ಹೂವಿಗೆ 300 ರಿಂದ 400 ರು. ನೀಡಬೇಕು.

ಸೇವಂತಿಗೆ

ಸೇವಂತಿಗೆ

ಬಂಗಾರದ ಬಣ್ಣದ ಸೇವಂತಿಗೆ ಬಂಗಾರದಂತೆ ದರ ಹೆಚ್ಚಳ ಮಾಡಿಕೊಂಡಿದೆ. ಕೆಜಿಗೆ 300 ರಿಂದ 400 ರು. ನೀಡಲೇಬೇಕು.

ಮಾವಿನ ಸೊಪ್ಪಿನ ಕಟ್ಟು

ಮಾವಿನ ಸೊಪ್ಪಿನ ಕಟ್ಟು

20 ಮಾವಿನ ತುಂಡುಗಳಿರುವ ಕಟ್ಟಿಗೆ 10 ರು. ಸಂಜೆ ವೇಳೆಗೆ ಇದು 20 ರು. ಆಗುವ ಸಾಧ್ಯತೆ ಇದೆ. ಒಂದು ತಾವರೆ ಹೂವಿಗೆ 25 ರು. ನೀಡಬೇಕಿದೆ.

ತುಳಸಿ

ತುಳಸಿ

ತುಳಸಿ ಕೆಜಿಗೆ 350 ರು. ನೀಡಬೇಕಾಗಿದೆ. 200ರು . ಆಸುಪಾಸಿನಲ್ಲಿದ್ದ ತುಳಸಿ ಏಕಾಏಕಿ ದರ ಏರಿಕೆ ಮಾಡಿಕೊಂಢಿದೆ.

 ವೀಳ್ಯದೆಲೆ

ವೀಳ್ಯದೆಲೆ

ವೀಳ್ಯದೆಲೆ 100 ಕ್ಕೆ 80 ರು. ನೀಡಬೇಕಿದೆ. ಸಂಜೆ ವೇಳೆಗೆ 100ಕ್ಕೆ 100 ರು. ಆದರೂ ಆಶ್ಚರ್ಯವಿಲ್ಲ.

ಮಲ್ಲಿಗೆ

ಮಲ್ಲಿಗೆ

ಪರಿಮಳಸೂಸುವ ಮಲ್ಲಿಗೆ ಹೂವಿಗೆ ಕೆಜಿಗೆ 400 ರಿಂದ 450 ರು ನೀಡಬೇಕು.

ತೆಂಗಿನಕಾಯಿ

ತೆಂಗಿನಕಾಯಿ

ಎರಡು ಬಗೆಯ ತೆಂಗಿನಕಾಯಿ ಲಭ್ಯವಿದೆ. 12 ರು. ಮತ್ತು 15 ರು. ದಲ್ಲಿ ತೆಂಗಿನಕಾಯಿ ಬಿಕರಿಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ತೆಂಗಿನಕಾಯಿ ದರದಲ್ಲಿ ಇಳಿಕೆಯಾಗಿದೆ.

ದರ ಏರಿಸಿಕೊಂಡ ಹಣ್ಣುಗಳು

ದರ ಏರಿಸಿಕೊಂಡ ಹಣ್ಣುಗಳು

ಹಾಪ್‌ಕಾಮ್ಸ್‌ನಲ್ಲಿ ಏಲಕ್ಕಿ ಬಾಳೆಗೆ 88 ರೂ. ಸಗಟು ದರ ಇದ್ದರೆ ಚಿಲ್ಲರೆ ಮಾರುಕಟ್ಟೆಯಲ್ಲಿ 90 ರಿಂದ 100 ರೂ.ಗೆ ಏರಿಕೆ ಕಂಡಿದೆ. ಉಳಿದಂತೆ ಸೇಬು- 177ರು., ಬಾಳೆ ಹಣ್ಣು- 60 ರು. ದ್ರಾಕ್ಷಿ ಹಣ್ಣು120 ರು., ಮೂಸಂಬಿ 60 ರು. ಗೆ ಬಿಕರಿಯಾಗುತ್ತಿದೆ.

ಹಾಪ್ ಕಾಮ್ಸ್ ನಿಂದ ರಿಯಾಯಿತಿ

ಹಾಪ್ ಕಾಮ್ಸ್ ನಿಂದ ರಿಯಾಯಿತಿ

ವರಮಹಾಲಕ್ಷ್ಮೀ ಹಬ್ಬಕ್ಕೆ ಹಣ್ಣುಗಳನ್ನು ಹಾಪ್‌ಕಾಮ್ಸ್‌ನಲ್ಲಿ ಖರೀದಿ ಮಾಡಬಹುದು. ಹಬ್ಬದ ಪ್ರಯುಕ್ತ ಹಣ್ಣುಗಳ ಖರೀದಿ ಮೇಲೆ ಶೇ 5ರಷ್ಟು ರಿಯಾಯಿತಿಯನ್ನು ಹಾಪ್‌ಕಾಮ್ಸ್ ಘೋಷಣೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+