ಮೈಸೂರು: ರೈತನ ಪ್ರಾಣ ತೆಗೆಯಿತು ಜೇನು ನೊಣ
ಮೈಸೂರು, ನವೆಂಬರ್, 07: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಜೇನು ನೊಣಗಳು ದಾಳಿ ನಡೆಸಿದ್ದು, ಜೇನು ನೊಣದ ಕಡಿತದ ನೋವಿಗೆ ರೈತ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.
ಸುಬ್ಬಯ್ಯನಕೊಪ್ಪಲು ಗ್ರಾಮದ ವೀರಪ್ಪ ಎಂಬುವರ ಪುತ್ರ ಯೋಗೇಶ್ (42) ಎಂಬಾತನೇ ಜೇನು ನೊಣಗಳ ದಾಳಿಗೆ ಮೃತಪಟ್ಟ ದುರ್ದೈವಿ ರೈತ. ರೈತ ಕೆಲಸದ ನಿಮಿತ್ತ ತನ್ನ ಜಮೀನಿಗೆ ಹೋದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.[ಬಾಲಕಿ ಪ್ರಾಣ ತೆಗೆದ ಲಾಲ್ ಬಾಗ್ ನ ಜೇನ್ನೊಣ]

ಹೊಲಕ್ಕೆ ಹೋದ ಯೋಗೇಶ್ ಎಂದಿನಂತೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಜೇನು ನೊಣಗಳು ಏಕಾಏಕಿ ದಾಳಿ ಮಾಡಿ ಇಡೀ ದೇಹವನ್ನೆಲ್ಲಾ ಮುತ್ತಿಕೊಂಡು ಆತನನ್ನು ಕಚ್ಚಿವೆ.[ಹೂವಿನ ತೋಟದಲ್ಲಿ ಕಳೆದುಹೋದ ಹೂವಿನಂಥ ಹುಡುಗಿ]
ಜೇನುನೊಣ ಕಡಿತದ ನೋವಿನಿಂದ ತೀವ್ರ ಅಸ್ವಸ್ಥರಾಗಿದ್ದ ಯೋಗೇಶ್ ಅವರನ್ನು ಬೆಟ್ಟದಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ತರುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications