ಕರ್ನಾಟಕದಲ್ಲಿ ಚಟ್ನಿಯಾದ ಲಾ ಟೊಮ್ಯಾಟಿನಾ ಹಬ್ಬ

La Tomatina festival Cancel
ಬೆಂಗಳೂರು, ಸೆ.11: ಜಿಂದಗಿ ನಾ ಮಿಲೇ ದುಬಾರಾ ಚಿತ್ರದಲ್ಲಿ ಲಾ ಟೊಮ್ಯಾಟಿನಾ ಕೊಳೆತ ಟೊಮ್ಯಾಟೋ ಎರೆಚಾಡುವ ಸ್ಪ್ಯಾನಿಷ್ ಹಬ್ಬ ಬೆಂಗಳೂರಿನಲ್ಲಿ ರಿಪೀಟ್ ಮಾಡಲು ಚಿಂತಿಸಿದ್ದವರಿಗೆ ಕರ್ನಾಟಕ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ತಣ್ಣೀರೆರೆಚಿದ್ದಾರೆ.

ರೈತರಿಗೆ ಮಾರಕವಾಗಿದ್ದ ಈ ಟೊಮ್ಯಾಟೋ ಹೋಳಿ ಹಬ್ಬದ ವಿರುದ್ಧ ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಅನೇಕ ದೂರುಗಳನ್ನು ಸಿಎಂ ಸದಾನಂದ ಗೌಡರಿಗೆ ಸಲ್ಲಿಸಲಾಗಿತ್ತು.

ಬೆಂಗಳೂರಲ್ಲದೆ ಮೈಸೂರಿನಲ್ಲೂ ಈ ಹಬ್ಬ ಆಚರಣೆಗೆ ಅವಕಾಶ ನೀಡಬಾರದು ಎಂದು ಪೊಲೀಸರಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಟೊಮ್ಯಾಟೋ ದುರ್ಬಳಕೆ ಮಾಡಿ, ರೈತರ ಬೆವರ ಹನಿಗೆ ಬೆಲೆ ಇಲ್ಲದಂತೆ ಮಾಡುವ ಯುವಕರು ಪಾಶ್ಚಾತ್ಯ ಸಂಸ್ಕೃತಿಯತ್ತ ಕೊಂಡೊಯ್ಯುವ ಈ ಹಬ್ಬ ನಮ್ಮ ಸಂಸ್ಕೃತಿಗೆ ಮಾರಕ ಎಂದು ಸದಾನಂದ ಗೌಡರು ಅಭಿಪ್ರಾಯಪಟ್ಟಿದ್ದಾರೆ.

ಲಾ ಟೋಮ್ಯಾಟಿನೊ[ಸಂಪೂರ್ಣ ಕಥೆ ಓದಿ] ಬೇಕೇ?ಬೇಡವೇ? ಎಂಬುದರ ಬಗ್ಗೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಸೇರಿದಂತೆ ಅನೇಕ ವೇದಿಕೆಗಳಲ್ಲಿ ಭಾರಿ ಚರ್ಚೆ ನಡೆದಿತ್ತು. ಕೆಲ ಸಂಘಟನೆಗಳು ಆನ್ ಲೈನ್ ಮೂಲಕ ಈ ಹಬ್ಬದ ವಿರುದ್ಧ ಅರ್ಜಿ ಸಲ್ಲಿಸಿದ್ದರು.

ಸೆ.18 ರಂದು ಅರಮನೆ ಮೈದಾನದಲ್ಲಿ ಲಾ ಟೋಮ್ಯಾಟಿನಾ ಹಬ್ಬ ಆಚರಣೆಗೆ ವೇದಿಕೆ ಸಿದ್ಧವಾಗಿತ್ತು. ಸ್ಪ್ಯಾನಿಷ್ ಟೊಮ್ಯಾಟೊ ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಯುವಕ/ತಿಯರು ಸಾವಿರಾರು ರುಪಾಯಿ ಟಿಕೆಟ್ ತೆತ್ತು ಮಜಾ ಮಾಡಲು ಕಾದಿದ್ದರು.

ಆದರೆ, ರೈತಪರ ನಿಲುವು ತೆಗೆದುಕೊಂಡ ಮುಖ್ಯಮಂತ್ರಿ ಸದಾನಂದ ಗೌಡ, ಹಬ್ಬಕ್ಕೆ ನಿಷೇಧ ಹೇರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+