Arecanut And Copra Price: ಏರಿಕೆಯಾದ ಅಡಿಕೆ ಬೆಲೆ: ಕೊಬ್ಬರಿ ಧಾರಣೆ ಕೂಡ ಹೆಚ್ಚಳ
ಕಳೆದ ವಾರ ಅಲ್ಪ ಇಳಿಕೆ ಕಂಡಿದ್ದ ಅಡಿಕೆ ಧಾರಣೆ ಈ ವಾರ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಬುಧವಾರ ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಗರಿಷ್ಠ 52099 ರೂಪಾಯಿಗೆ ಮಾರಾಟವಾಗಿದೆ. 55 ಸಾವಿರಕ್ಕೆ ತಲುಪಿದ್ದ ಅಡಿಕೆ ಧಾರಣೆ, ಸದ್ಯ 52-53 ಸಾವಿರ ರೂಪಾಯಿ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.
ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ 34,299 ಸಾವಿರ ಮತ್ತು ಗರಿಷ್ಠ 51621 ರೂಪಾಯಿಗಳಿಗೆ ಮಾರಾಟವಾಗಿದೆ. ಸಾಗರ ಮಾರುಕಟ್ಟೆಯಲ್ಲಿ ಬುಧವಾರ ರಾಶಿ ಅಡಿಕೆ 34899-50219 ರೂಪಾಯಿಗಳಿಗೆ ಮಾರಾಟವಾಗಿದೆ. ಕೆಂಪುಗೋಟು ಅಡಿಕೆ ಕನಿಷ್ಟ 28,299 ರೂಪಾಯಿ ಇದ್ದರೆ ಗರಿಷ್ಠ 38,099 ರೂಪಾಯಿ ಆಗಿತ್ತು. ಶಿರಸಿ ಮಾರುಕಟ್ಟೆಯಲ್ಲಿ ಬೆಟ್ಟೆ ಅಡಿಕೆ ಕ್ವಿಂಟಾಲ್‌ಗೆ ಗರಿಷ್ಠ 38,090 ರೂಪಾಯಿ ಗರಿಷ್ಠ 44,919 ರೂಪಾಯಿ ಆಗಿತ್ತು.

ಆಗಸ್ಟ್ 24 ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಚನ್ನಗಿರಿ | ರಾಶಿ | ₹46,059 | ₹52,099 | ₹49,523 |
| 2 | ಬಂಟ್ವಾಳ | ಹೊಸ ವೆರೈಟಿ | ₹27,500 | ₹44,500 | ₹42,000 |
| 3 | ಬಂಟ್ವಾಳ | ಕೋಕಾ | ₹12,500 | ₹25,000 | ₹22,500 |
| 4 | ಕಾರ್ಕಳ | ಹೊಸ ವೆರೈಟಿ | ₹30,000 | ₹45,000 | ₹35,000 |
| 5 | ಕಾರ್ಕಳ | ಹಳೆ ವೆರೈಟಿ | ₹40,000 | ₹48,500 | ₹44,500 |
| 6 | ಕುಂದಾಪುರ | ಹಳೆ ಚಾಲಿ | ₹14,569 | ₹23,400 | ₹22,169 |
| 7 | ಕುಂದಾಪುರ | ಹೊಸಚಾಲಿ | ₹27,000 | ₹41,500 | ₹40,000 |
| 8 | ಪುತ್ತೂರು | ಕೋಕಾ | ₹11,000 | ₹25,000 | ₹18,000 |
| 9 | ಪುತ್ತೂರು | ಹೊಸ ವೆರೈಟಿ | ₹34,000 | ₹44,500 | ₹39,500 |
| 10 | ಸಾಗರ | ಬಿಳೆ ಗೊಟು | ₹22,569 | ₹33,909 | ₹31,699 |
| 11 | ಸಾಗರ | ಚಾಲಿ | ₹32,799 | ₹39,110 | ₹38,699 |
| 12 | ಸಾಗರ | ಕೆಂಪುಗೋಟು | ₹28,299 | ₹38,099 | ₹34,739 |
| 13 | ಸಾಗರ | ರಾಶಿ | ₹34,899 | ₹50,219 | ₹49,299 |
| 14 | ಸೊರಬ | ರಾಶಿ | ₹37,099 | ₹50,099 | ₹49,089 |
| 15 | ಸೊರಬ | ಚಾಲಿ | ₹35,399 | ₹37,799 | ₹36,074 |
| 16 | ಶಿವಮೊಗ್ಗ | ಬೆಟ್ಟೆ | ₹47,899 | ₹53,199 | ₹51,510 |
| 17 | ಶಿವಮೊಗ್ಗ | ರಾಶಿ | ₹34,299 | ₹51,621 | ₹49,569 |
| 18 | ಶಿವಮೊಗ್ಗ | ಸರಕು | ₹50,099 | ₹81,569 | ₹72,030 |
| 19 | ಸಿದ್ದಾಪುರ | ರಾಶಿ | ₹47,109 | ₹50,099 | ₹49,599 |
| 20 | ಸಿದ್ದಾಪುರ | ಚಾಲಿ | ₹40,299 | ₹42,599 | ₹40,509 |
ಪ್ರಮುಖ ಮಾರುಕಟ್ಟೆಗಳಲ್ಲಿ ಕೊಬ್ಬರಿ ಧಾರಣೆ
ಬುಧವಾರ ಕೊಬ್ಬರಿ ಧಾರಣೆ ಕೂಡ ಅತ್ಯಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 8200 ರೂಪಾಯಿ ಇದ್ದರೆ, ಗರಿಷ್ಠ ಧಾರಣೆ 10,000 ರೂಪಾಯಿಗೆ ಮಾರಾಟವಾಗಿದೆ.
ತುರುವೇಕರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ 9000 ರೂಪಾಯಿಗೆ ಮಾರಾಟವಾಗಿದೆ. ಬೆಂಗಳೂರಿನಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 11,300 ರೂಪಾಯಿ ಇದ್ದರೆ, ಗರಿಷ್ಠ 14,000 ರೂಪಾಯಿಗೆ ಮಾರಾಟವಾಗಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಬೆಂಗಳೂರು | ಕೊಬ್ಬರಿ | ₹11,300 | ₹14,000 | ₹12,650 |
| 2 | ಪುತ್ತೂರು | ಬೇರೆ | ₹4,500 | ₹7,300 | ₹5,900 |
| 3 | ತಿಪಟೂರು | ಕೊಬ್ಬರಿ | ₹8,200 | ₹10,000 | ₹9,000 |
| 4 | ಅರಸೀಕೆರೆ | ಕೊಬ್ಬರಿ | ₹8,500 | ₹9,250 | ₹8,986 |
| 5 | ತುರುವೇಕೆರೆ | ಕೊಬ್ಬರಿ | ₹8,900 | ₹8,900 | ₹8,900 |
| 6 | ಕೆ.ಆರ್.ಪೇಟೆ | ಬೇರೆ | ₹7,900 | ₹7,900 | ₹7,900 |
| 7 | ಗುಬ್ಬಿ | ಬಾಲ್ | ₹8,500 | ₹8,500 | ₹8,500 |
| 8 | ತುಮಕೂರು | ಬಾಲ್ | ₹8,050 | ₹8920 | ₹8,250 |











Click it and Unblock the Notifications