Arecanut: ಅಡಿಕೆ ಬೆಳೆಗಾರರಿಗೆ ಮಹತ್ವದ ಮಾಹಿತಿ
Arecanut: ಕೃತಿ ವಿಕೋಪ, ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಉಂಟಾಗುವ ಬೆಳೆ ನಷ್ಟದ ಭೀತಿಯಲ್ಲಿರುವ ಅಡಿಕೆ ಬೆಳೆಗಾರರ ನೆರವಿಗಾಗಿ ಸರ್ಕಾರವು ಬೆಳೆ ವಿಮೆ ನೊಂದಣಿ ಪ್ರಕ್ರಿಯೆಯನ್ನು ಆರಂಭಿಸಿದೆ. 2026ನೇ ಸಾಲಿನ ಅಡಿಕೆ ಬೆಳೆ ವಿಮೆಗೆ ನೊಂದಣಿ ಮಾಡಿಕೊಳ್ಳಲು ಜೂನ್ 30, 2026 ಕೊನೆಯ ದಿನಾಂಕವಾಗಿದೆ ಎಂದು ತಿಳಿಸಿದೆ.
ಅನಿರೀಕ್ಷಿತ ಹವಾಮಾನ ಬದಲಾವಣೆಗಳಿಂದ ತೊಂದರೆಗೆ ಸಿಲುಕುವ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅಡಿಕೆ ತೋಟಗಳು ಪ್ರಕೃತಿಯ ವೈಪರೀತ್ಯಗಳಿಗೆ ತುತ್ತಾದಾಗ ರೈತರು ಆರ್ಥಿಕವಾಗಿ ಕಂಗಾಲಾಗುವುದನ್ನು ತಪ್ಪಿಸಲು ಈ ವಿಮೆ ಸಹಕಾರಿ ಆಗಿದೆ. ಈ ಯೋಜನೆಯಡಿ ಈ ಕೆಳಗಿನ ಹಾನಿಗಳಿಗೆ ಪರಿಹಾಯ ಸಿಗಲಿದೆ.

ಯಾವ ರೀತಿಯ ಹಾನಿಗಳಿಗೆ ಪರಿಹಾರ?
* ಪ್ರಕೃತಿ ವಿಕೋಪ: ಹಠಾತ್ ಸಂಭವಿಸುವ ನೈಸರ್ಗಿಕ ವಿಕೋಪಗಳಿಂದ ತೋಟಗಳಿಗೆ ಹಾನಿಯಾದರೆ ಸೂಕ್ತ ಪರಿಹಾರ ಸಿಗುತ್ತದೆ.
* ಅತಿವೃಷ್ಟಿ ಮತ್ತು ಅನಾವೃಷ್ಟಿ: ಅತಿಯಾದ ಮಳೆಯಿಂದ ಬೆಳೆ ಕೊಳೆತು ಹೋಗುವುದು ಅಥವಾ ಸಕಾಲಕ್ಕೆ ಮಳೆಯಾಗದೆ ತೋಟ ಒಣಗಿ ಹೋಗುವ ಪರಿಸ್ಥಿತಿಯಲ್ಲಿ ವಿಮೆ ಆಸರೆ ಆಗಲಿದೆ.
* ಚಂಡಮಾರುತ ಮತ್ತು ಆಲಿಕಲ್ಲು ಮಳೆ: ತೀವ್ರ ಗಾಳಿ, ಚಂಡಮಾರುತ ಹಾಗೂ ಆಲಿಕಲ್ಲು ಮಳೆಯಿಂದ ಅಡಿಕೆ ಮರಗಳು ಧರಾಶಾಹಿಯಾದರೆ ಅಥವಾ ಗೊನೆಗಳು ಉದುರಿ ನಷ್ಟವಾದರೆ ರಕ್ಷಣೆ ದೊರೆಯುತ್ತದೆ.
* ಸರ್ಕಾರದ ನಿಯಮಾವಳಿಗಳ ಅಡಿಯಲ್ಲಿ ಬರುವ ಇತರೆ ಎಲ್ಲಾ ಅನುಮೋದಿತ ಅಪಾಯಗಳಿಗೂ ಈ ವಿಮೆಯಡಿ ರಕ್ಷಣೆ ಇರಲಿದೆ.
ನೊಂದಣಿಗೆ ಬೇಕಾಗುವ ಅಗತ್ಯ ದಾಖಲೆಗಳು
ಅಡಿಕೆ ಬೆಳೆ ವಿಮೆಯ ಸೌಲಭ್ಯವನ್ನು ಪಡೆಯಲು ಇಚ್ಛಿಸುವ ರೈತರು ತಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮುನ್ನ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಆಧಾರ್ ಕಾರ್ಡ್, RTC / ಪಹಣಿ ಪತ್ರ, ಬ್ಯಾಂಕ್ ಪಾಸ್‌ಬುಕ್, ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ, ಜಮೀನಿನ ಇತರ ಅಗತ್ಯ ದಾಖಲೆಗಳು ಇರಬೇಕಾಗುತ್ತದೆ.
ಅಡಿಕೆ ಬೆಳೆಗಾರರು ತಿಳಿದುಕೊಳ್ಳಬೇಕಾದ ಮಾಹಿತಿ
ಕೊನೆಯ ದಿನಗಳಲ್ಲಿ ಸರ್ವರ್ ಸಮಸ್ಯೆ ಅಥವಾ ತಾಂತ್ರಿಕ ದೋಷಗಳು ಎದುರಾಗುವ ಸಾಧ್ಯತೆ ಇರುವುದರಿಂದ, ರೈತರು ಕೊನೆಯ ಕ್ಷಣದವರೆಗೆ ಕಾಯದೆ ಇಂದೇ ತಮ್ಮ ಹತ್ತಿರದ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ ನೊಂದಣಿ ಮಾಡಿಸಿಕೊಳ್ಳಬೇಕಿ ಎಂದು ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಮತ್ತು ನೊಂದಣಿ ಪ್ರಕ್ರಿಯೆಗಾಗಿ ರೈತರು ಸ್ಥಳೀಯ ಕರ್ನಾಟಕ ಒನ್ ಕೇಂದ್ರ ಅಥವಾ ಸಂಬಂಧಪಟ್ಟ ಕೃಷಿ/ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ವಿವಿಧ ಬೆಳೆಗಳ ವಿಮೆ ನೊಂದಣಿ ದಿನಾಂಕಗಳ ವಿವರ
ರಾಜ್ಯದ ರೈತರ ಆರ್ಥಿಕ ಭದ್ರತೆ ಹಾಗೂ ಸುರಕ್ಷಿತ ಭವಿಷ್ಯಕ್ಕಾಗಿ 2026-2027ನೇ ಸಾಲಿನ ವಿವಿಧ ಬೆಳೆಗಳ ವಿಮೆ ನೊಂದಣಿ ಪ್ರಕ್ರಿಯೆ ಮತ್ತು ಪ್ರೀಮಿಯಂ ಮೊತ್ತದ ವಿವರಗಳನ್ನು ಕರ್ನಾಟಕ ಒನ್ ಪ್ರಕಟಿಸಿದೆ. ಅನಿರೀಕ್ಷಿತ ಹವಾಮಾನ ಬದಲಾವಣೆ ಹಾಗೂ ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟದಿಂದ ರೈತರನ್ನು ರಕ್ಷಿಸಲು ಈ ಯೋಜನೆ ಜಾರಿಗೆ ತರಲಾಗಿದೆ.
* ಮೆಕ್ಕೆಜೋಳ (ಮಳೆ ಆಶ್ರಿತ): ಒಂದು ಎಕರೆಗೆ 546.35 ರೂಪಾಯಿ. ನೋಂದಣಿಗೆ ಕೊನೆ ದಿನಾಂಕ ಜಲೈ 31, 2026.
* ಮೆಕ್ಕೆಜೋಳ (ನೀರಾವರಿ): ಒಂದು ಎಕರೆಗೆ 616.76 ರೂಪಾಯಿ. ನೋಂದಣಿಗೆ ಕೊನೆ ದಿನಾಂಕ ಜಲೈ 31, 2026.
* ಹತ್ತಿ (ಮಳೆ ಆಶ್ರಿತ): ಒಂದು ಎಕರೆಗೆ 1,208.03 ರೂಪಾಯಿ. ನೋಂದಣಿಗೆ ಕೊನೆ ದಿನಾಂಕ ಜಲೈ 15, 2026.
* ರಾಗಿ (ಮಳೆ ಆಶ್ರಿತ): ಒಂದು ಎಕರೆಗೆ 403.89 ರೂಪಾಯಿ. ನೋಂದಣಿಗೆ ಕೊನೆ ದಿನಾಂಕ ಜಲೈ 31, 2026.
* ಜೋಳ (ಮಳೆ ಆಶ್ರಿತ): ಒಂದು ಎಕರೆಗೆ 359.37 ರೂಪಾಯಿ. ನೋಂದಣಿಗೆ ಕೊನೆ ದಿನಾಂಕ ಜಲೈ 31, 2026.
* ತೆಂಗು (ಮಳೆ ಆಶ್ರಿತ): ಒಂದು ಎಕರೆಗೆ 529.35 ರೂಪಾಯಿ. ನೋಂದಣಿಗೆ ಕೊನೆ ದಿನಾಂಕ ಜಲೈ 31, 2026.
* ಕಡಲೆಕಾಯಿ (ನೀರಾವರಿ): ಒಂದು ಎಕರೆಗೆ 1,900.07 ರೂಪಾಯಿ. ನೋಂದಣಿಗೆ ಕೊನೆ ದಿನಾಂಕ ಜಲೈ 15, 2026.
* ಟೊಮ್ಯಾಟೋ: ಒಂದು ಎಕರೆಗೆ 3,435.90 ರೂಪಾಯಿ. ನೋಂದಣಿಗೆ ಕೊನೆ ದಿನಾಂಕ ಜಲೈ 31, 2026.












Click it and Unblock the Notifications