Arecanut and Copra Price: ಏರಿಕೆಯತ್ತ ಅಡಿಕೆ ಮತ್ತು ಕೊಬ್ಬರಿ ಬೆಲೆ : ವಿವಿಧ ಮಾರುಕಟ್ಟೆಗಳಲ್ಲಿ ಎಷ್ಟಿದೆ?
ಕರ್ನಾಟಕ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಹೊಸ ವರ್ಷದ ಸಂದರ್ಭದಲ್ಲೇ ಅಡಿಕೆ ಧಾರಣೆ ನಿಧಾನವಾಗಿ ಹೆಚ್ಚಳವಾಗುತ್ತಿರುವುದು ಅಡಿಕೆ ಬೆಳೆಗಾರರಲ್ಲಿ ಸಮಾಧಾನ ತರಿಸಿದೆ. ಡಿಸೆಂಬರ್ 4ರಂದು ಗುರುವಾರ ರಾಶಿ ಕೆಂಪಡಕೆ ವಿವಿಧ ಮಾರುಕಟ್ಟೆಗಳಲ್ಲಿ ಕನಿಷ್ಠ 35,000 ರೂಪಾಯಿಗಳಿಂದ 49,000 ರೂಪಾಯಿವರೆಗೆ ಮಾರಾಟವಾಗಿದೆ.
ಗುರುವಾರ ಶಿವಮೊಗ್ಗ, ಸಿದ್ಧಾಪುರ, ಚನ್ನಗಿರಿ, ಸಾಗರ, ಶಿರಸಿ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಅಲ್ಪ ಏರಿಕೆ ದಾಖಲಿಸಿದೆ. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ ₹45,599 ಇದ್ದರೆ ಗರಿಷ್ಠ ₹48,939 ಮಾರಾಟವಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ ₹45,100 ಇದ್ದರೆ, ಗರಿಷ್ಠ ₹84,007 ಕ್ಕೆ ಮಾರಾಟವಾಗಿದೆ.

ಗೋಣಿಕೊಪ್ಪಲು ಮಾರುಕಟ್ಟೆಯಲ್ಲಿ ಅಡಿಕೆ-ಸಿಪ್ಪೆ (ಹಸಿ ಸಿಪ್ಪೆ ಅಡಿಕೆ) ಧಾರಣೆ ಕನಿಷ್ಠ ₹4,800 ರೂಪಾಯಿ ಆಗಿದ್ದರೆ ಗರಿಷ್ಠ ಮಾರಾಟ ದರ ₹5,000 ಆಗಿತ್ತು. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಠ ₹31,929 ಇದ್ದರೆ ಗರಿಷ್ಠ ₹48,499 ಆಗಿದೆ.
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಬಂಟ್ವಾಳ | ಕೋಕಾ | ₹15,000 | ₹27,500 | ₹23,500 |
| 2 | ಬಂಟ್ವಾಳ | ಹೊಸ ವೆರೈಟಿ | ₹27,500 | ₹37,000 | ₹34,000 |
| 3 | ಚನ್ನಗಿರಿ | ರಾಶಿ | ₹45,599 | ₹48,939 | ₹48,185 |
| 4 | ಗೋಣಿಕೊಪ್ಪಲು | ಅಡಿಕೆ-ಸಿಪ್ಪೆ | ₹4,800 | ₹5,000 | ₹5,000 |
| 5 | ಹೊನ್ನಾವರ | ಹಳೆ ಚಾಲಿ | ₹35,000 | ₹37,500 | ₹36,800 |
| 6 | ಕಾರ್ಕಳ | ಹೊಸ ವೆರೈಟಿ | ₹25,000 | ₹37,000 | ₹30,000 |
| 7 | ಕಾರ್ಕಳ | ಹಳೆಯ ವೆರೈಟಿ | ₹30,000 | ₹44,000 | ₹35,000 |
| 8 | ಕುಮಟಾ | ಹಳೆ ಚಾಲಿ | ₹36,000 | ₹39,069 | ₹38,529 |
| 9 | ಕುಮಟಾ | ಹೊಸ ಚಾಲಿ | ₹32,269 | ₹35,799 | ₹34,609 |
| 10 | ಪುತ್ತೂರು | ಹೊಸ ವೆರೈಟಿ | ₹27,000 | ₹36,500 | ₹31,750 |
| 11 | ಸಾಗರ | ಚಾಲಿ | ₹31,599 | ₹38,099 | ₹37,899 |
| 12 | ಸಾಗರ | ಕೆಂಪು ಗೋಟು | ₹25,280 | ₹38,299 | ₹37,399 |
| 13 | ಸಾಗರ | ರಾಶಿ | ₹31,929 | ₹48,499 | ₹47,899 |
| 14 | ಶಿವಮೊಗ್ಗ | ಬೆಟ್ಟೆ | ₹46,099 | ₹54,239 | ₹52,814 |
| 15 | ಶಿವಮೊಗ್ಗ | ರಾಶಿ | ₹35,399 | ₹48,569 | ₹47,899 |
| 16 | ಶಿವಮೊಗ್ಗ | ಸರಕು | ₹45,100 | ₹84,007 | ₹60,000 |
| 17 | ಸಿದ್ದಾಪುರ | ಚಾಲಿ | ₹37,389 | ₹38,650 | ₹37,699 |
| 18 | ಸಿದ್ದಾಪುರ | ರಾಶಿ | ₹43,599 | ₹47,999 | ₹47,639 |
| 19 | ಶಿರಸಿ | ರಾಶಿ | ₹44,299 | ₹47,899 | ₹46,179 |
| 20 | ಯಲ್ಲಾಪುರ | ಅಪಿ | ₹59,795 | ₹65,000 | ₹65,000 |
| ಯಲ್ಲಾಪುರ | ರಾಶಿ | ₹46,009 | ₹54,620 | ₹49,899 |
ಡಿಸೆಂಬರ್ 4ರಂದು ಅಡಿಕೆ ಬೆಲೆ(ಪ್ರತಿ ಕ್ವಿಂಟಾಲ್‌ಗೆ)
ಕೊಬ್ಬರಿ ಧಾರಣೆ ಮಾಹಿತಿ
ಗುರುವಾರ ರಾಜ್ಯದ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ ಕೂಡ ಅಲ್ಪಪ್ರಮಾಣದಲ್ಲಿ ಏರಿಕೆ ಕಂಡಿದೆ. ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಧಾರಣೆ ಕನಿಷ್ಠ ₹8,000 ಇದ್ದರೆ ಗರಿಷ್ಠ ₹10,500 ಆಗಿತ್ತು. ಹಲವು ತಿಂಗಳ ಬಳಿಕ ಕೊಬ್ಬರಿ ಗರಿಷ್ಠ ಧಾರಣೆ 10 ಸಾವಿರ ದಾಟಿದ್ದು, ತೆಂಗು ಬೆಳೆಗಾರರಲಿ ಆಶಾಭಾವನೆ ಮೂಡಿಸಿದೆ.
ಕೆ ಆರ್ ಪೇಟೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಸರಾಸರಿ ₹8,209 ರೂಪಾಯಿಗೆ ಮಾರಾಟವಾಗಿದ್ದು, ಅರಸಿಕೆರೆಯಲ್ಲಿ ಕೊಬ್ಬರಿ ಬೆಲೆ 9700 ರೂಪಾಯಿಗೆ ಮಾರಾಟವಾಗಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಅರಸೀಕೆರೆ | ಕೊಬ್ಬರಿ | ₹9,700 | ₹9,700 | ₹9,700 |
| 2 | ಕೆ.ಆರ್.ಪೇಟೆ | ಬೇರೆ | ₹8,209 | ₹8,209 | ₹8,209 |
| 3 | ತಿಪಟೂರು | ಕೊಬ್ಬರಿ | ₹8,000 | ₹10,500 | ₹8,500 |
| 4 | ತುರುವೇಕೆರೆ | ಕೊಬ್ಬರಿ | ₹9,700 | ₹9,700 | ₹9,700 |
| 5 | ಸಿರಾ | ಸಣ್ಣ | ₹8,000 | ₹8,000 | ₹8,000 |












Click it and Unblock the Notifications