ಯಶವಂತಪುರ ಎಪಿಎಂಸಿ ಬಂದ್‌: ಬೇಳೆ, ತರಕಾರಿ ಮಾರಾಟದಲ್ಲಿ ವ್ಯತ್ಯಯ

Recommended Video

      ಯಶವಂತಪುರ ಎಪಿಎಂಸಿ ಬಂದ್‌ | Oneindia Kannada

      ಬೆಂಗಳೂರು, ಜು.25: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶವ್ಯಾಪಿ ಮುಷ್ಕರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಟೋಲ್‌ ಮುಕ್ತ, ಡೀಸೆಲ್‌ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಯುತ್ತಿದೆ.

      ಹೋರಾಟಗಾರರು ಬುಧವರಾ (ಜು.25)ರಂದು ಯಶವಂತಪುರ ಎಪಿಎಂಸಿ ಯಾರ್ಡ್‌ ಬಂದ್‌ ಮಾಡಲು ನಿರ್ಧರಿಸಿದ್ದಾರೆ.

      ಇಷ್ಟು ದಿನ ಜನಸಾಮಾನ್ಯರಿಗೆ ತೊಂದರೆಯಾಗಬಾರದು ಎಂದು ಮುಷ್ಕರ ನಡೆಸಿದ್ದೆವು, ಇನ್ನು ಕಾಯಲು ಸಾಧ್ಯವಿಲ್ಲ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ. ಲಾರಿ ಮುಷ್ಕರದಿಂದ ಸರಕು ಸಾಗಣೆ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗಿ ಬೆಂಗಳೂರಿಗೂ ಮುಷ್ಕರದ ಬಿಸಿ ತಟ್ಟಲಿದೆ.

      Apmc yard closed because of lorry strike

      ಮುಷ್ಕರದಿಂದಾಗಿ ಈಗಾಗಲೇ ಕೈಗಾರಿಕಾ ಕಚ್ಚಾವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಕಾಣಿಸಿಕೊಂಡಿದ್ದು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಮಂಗಳವಾರ ಹೊರರಾಜ್ಯದಿಂದ ನಗರಕ್ಕೆ ಬರಬೇಕಿದ್ದ ಸರಕು ಸಾಗಣೆ ವಾಹನಗಳ ಸಂಖ್ಯೆ ಕಡಿಮೆಯಾಗಿದೆ.

      ಸಾಮಾನ್ಯ ದಿನಗಳಲ್ಲಿ ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ನಗರದ ಎಪಿಎಂಸಿ ಯಾರ್ಡ್‌ಗೆ ಸುಮಾರು 100 ಲೋಡ್‌ ಆಲೂಗಡ್ಡೆ, , 200 ಲೋಡ್‌ ಈರುಳ್ಳಿ ಬರುತ್ತದೆ. ಆದರೆ ಮುಷ್ಕರದಿಂದಾಗಿ ಮಂಗಳವಾರ ಸುಮಾರು 100 ಕ್ಕೂ ಹೆಚ್ಚು ಲೋಡ್‌ ಈರುಳ್ಳಿ ಆಲೂಗಡ್ಡೆ ಸಾಗಣೆ ಲಾರಿಗಳು ಬಂದಿಲ್ಲ ಎಂದು ತಿಳಿದು ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+