ಮಾಡಿದ ಸಾಲ ಜಾಮೀನುದಾರರ ಮೇಲೆ, ರೈತ ಆತ್ಮಹತ್ಯೆ
ಮೈಸೂರು, ಡಿಸೆಂಬರ್, 09: ಸಾಲ ಮಾಡಿದ ರೈತ, ಜಾಮೀನು ನೀಡಿದ ಮಹಿಳೆ ಮತ್ತು ಆಕೆ ಮಗ ಮೂವರು ಆತ್ಮಹತ್ಯೆ ಪ್ರಯತ್ನಿಸಿದ್ದು, ರೈತ ಸಾವನ್ನಪ್ಪಿದ್ದಾರೆ. ಜಾಮೀನು ನೀಡಿದ ತಾಯಿ, ಮಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಹುಣಸೂರಿನ ಬಿಳಿಕೆರೆ ಹೋಬಳಿಯ ಹನುಮಂತಪುರ ಗ್ರಾಮದ ನಿವಾಸಿ ಮಂಜುನಾಥ್ (40) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಗ್ರಾಮದ ಸುಶೀಲಮ್ಮ (35) ಮಗ ವಿಶ್ವನಾಥ್ (10) ಜಾಮೀನು ನೀಡಿದ ತಪ್ಪಿಗೆ ಹೆದರಿ ವಿಷ ಕುಡಿದು ಆಸ್ಪತ್ರೆ ಸೇರಿದವರು.[ಅಜ್ಜನ ನಿಧನದಿಂದ ಬೇಸತ್ತ ಮೊಮ್ಮಗಳು ಬೆಂಕಿಗೆ ಆಹುತಿ]

ಘಟನೆ ವಿವರ:
ಮೃತ ಮಂಜುನಾಥ್ 3 ಎಕರೆ ಜಮೀನು ಹೊಂದಿದ್ದು ವ್ಯವಸಾಯ ಹಾಗೂ ಗೂಡ್ಸ್ ಆಟೋ ಮತ್ತು ಟ್ರ್ಯಾಕ್ಟರ್ ಖರೀದಿಸಲು ಖಾಸಗಿ ಫೈನಾನ್ಸ್ ಸೇರಿದಂತೆ ಕೈ ಸಾಲವಾಗಿ ಒಟ್ಟು 10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು. ಇದಕ್ಕೆ ಸುಶೀಲಮ್ಮ ಜಾಮೀನು ನೀಡಿದ್ದರು.
ಸಕಾಲಕ್ಕೆ ಮಳೆ ಬಾರದ ಕಾರಣ ಬೆಳೆಯಿಂದ ನಿರೀಕ್ಷಿತ ಆದಾಯ ಬಂದಿಲ್ಲ. ಆದರೆ ಫೈನಾನ್ಸ್ ನಿಂದ ಮಾತ್ರ ಸಾಲದ ಕಂತು ಮರುಪಾವತಿ ಮಾಡುವ ಬಗ್ಗೆ ನೋಟೀಸ್ ಬರತೊಡಗಿತ್ತು. ಮತ್ತೊಂದೆಡೆ ಕೈಸಾಲ ನೀಡಿದವರು ಹಿಂಸೆ ಮಾಡತೊಡಗಿದ್ದರು. ಇದರಿಂದ ಬೇಸತ್ತ ಮಂಜುನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಹೇಳಿದ್ದಾರೆ.[ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]
ಮಂಜುನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ತಿಳಿದು ವಿಚಲಿತರಾದ ಸುಶೀಲಮ್ಮ ,'ನೀವು ಆತ್ಮಹತ್ಯೆ ಮಾಡಿಕೊಂಡರೆ ಸಾಲಗಾರರು ನನ್ನ ಬಿಡುತ್ತಾರಾ ಜಾಮೀನು ಕೊಟ್ಟ ತಪ್ಪಿಗೆ ನಾನು ಸಾಯುತ್ತೇನೆ' ಎನ್ನುತ್ತಾ ಮಗನ ಕರೆದುಕೊಂಡು ಮಂಜುನಾಥ್ ಬಳಿಗೆ ಬಂದಿದ್ದಾರೆ.
ಹುಣಸೂರಿನಿಂದ ಬೆಟ್ಟದಪುರಕ್ಕೆ ಹೋಗುವ ಮಾರ್ಗ ಮಧ್ಯದ ಅರಣ್ಯ ಪ್ರದೇಶದಲ್ಲಿ ಮೂವರು ವಿಷ ಸೇವಿಸಿದ್ದಾರೆ. ರಸ್ತೆ ಬದಿಯ ಅರಣ್ಯದಲ್ಲಿ ಅಸ್ವಸ್ಥಗೊಂಡ ಮೂವರನ್ನು ಕಂಡ ಸಾರ್ವಜನಿಕರು ಕೂಡಲೇ ಪಿರಿಯಾಪಟ್ಟಣಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.[ರಾಜ್ಯದಲ್ಲಿ ಪ್ರಸಕ್ತ ವರ್ಷಎಲ್ಲೆಲ್ಲಿ,ಎಷ್ಟೆಷ್ಟು ರೈತರು ಆತ್ಮಹತ್ಯೆ?]
ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆತರುವಾಗ ಮಂಜುನಾಥ್ ದಾರಿ ಮಧ್ಯದಲ್ಲೇ ಸಾವನ್ನಪ್ಪಿದ್ದು, ಸುಶೀಲಮ್ಮ ಮತ್ತು ಆಕೆ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications