ನರೇಗಾ ಅನುದಾನದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆ ಬೆಳೆದ ರೈತ ಗೋವಿಂದ

ರಾಯಚೂರು ಜನವರಿ 22: ಕೃಷಿ ಚಟುವಟಿಕೆಯಲ್ಲಿ ರೈತರು ತೋಟಗಾರಿಕೆ ಬೆಳೆ ಬೆಳೆಯುವ ಆಸಕ್ತಿ ದಿನೇ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗಿ ಸಣ್ಣ ಅತಿ ಸಣ್ಣ ರೈತರು ಕೃಷಿ ಚಟುವಟಿಕೆಯಲ್ಲಿ ಆದಾಯದ ಬೆಳೆ ಮಾಡುವುದಕ್ಕೆ ನರೇಗಾ ಸಹಕಾರಿಯಾಗಿದೆ.

ಡ್ರ್ಯಾಗನ್ ಹಣ್ಣು ಉಷ್ಣವಲಯದ ಹಣ್ಣಾಗಿದ್ದು, ಭಾರತದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ವಿದೇಶಿ ಹಣ್ಣಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಪೂರೈಕೆ ಸೀಮಿತವಾಗಿದೆ. ಅದಕ್ಕಾಗಿಯೇ ಭಾರತದಲ್ಲಿ ಡ್ರ್ಯಾಗನ್ ಹಣ್ಣಿನ ಕೃಷಿ ಲಾಭದಾಯಕವಾಗಿದೆ. ಹೀಗಾಗಿ ಭಾರತದ ರೈತರು ಈ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ.

A farmer from Raichur raised dragon fruit crop under Narega grant

ರಾಯಚೂರು ಜಿಲ್ಲೆಯ ಬಿಜನಗೇರಾ ಗ್ರಾಮ ಪಂಚಾಯತಿಯ ಭೋಳಮಾನದೊಡ್ಡಿ ಗ್ರಾಮ ನಿವಾಸಿಯಾದ ಗೋವಿಂದ ರವರು ತಮ್ಮ‌ ಒಂದು ಎಕರೆ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆ ಬೆಳೆಯಲು ಆರಂಬಿಸಿ ಈ ಬೆಳೆ ಉತ್ತಮವಾಗಿದೆ ಎನ್ನುತ್ತಿದ್ದಾನೆ.

ಕೈ ಹಿಡಿದ ನರೇಗಾ:

ಗೋವಿಂದರವರು ಇದಕ್ಕೂ ಮುಂಚೆ ತನ್ನ ಭೂಮಿಯಲ್ಲಿ ನಾನಾ ಬೆಳೆಗಳಾದ ಹತ್ತಿ, ಶೇಂಗಾ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದರು. ಆದಾಯ ಮಾತ್ರ ಅಷ್ಟಕಷ್ಟೆ ಎಂಬತ್ತಿತ್ತು. ಇರುವ ನಾಲ್ಕು ಎಕರೆ ಜಮೀನಿನಲ್ಲಿ ಒಂದು ಎಕರೆಯಲ್ಲಿ ವಿಭಿನ್ನ ತೋಟಗಾರಿಕೆ ಬೆಳೆ ಬೆಳೆಯುವ ಅಲೋಚನೆಯಲ್ಲಿದ್ದ ಗೋವಿಂದ ನರೇಗಾ ಯೋಜನೆಯಡಿ ಸಹಾಯಧನ ಮಾಹಿತಿ ಪಡೆದುಕೊಂಡು ತೋಟಗಾರಿಕೆ ಅಧಿಕಾರಿಗಳನ್ನು ಭೇಟಿಯಾಗಿ ಕ್ರಿಯಾ ಯೋಜನೆ ತಯಾರಿಸಿಕೊಂಡು ನರೇಗಾ ಯೋಜನೆಯ ವ್ಯಯಕ್ತಿಕ ಕಾಮಗಾರಿ ವಿಭಾಗದಲ್ಲಿ ಅನುದಾನ ಪಡೆದುಕೊಂಡಿದ್ದಾರೆ.

ನರೇಗಾ ಅನುದಾನ:

2021-22 ನೇ ಸಾಲಿನಲ್ಲಿ ಗೋವಿಂದು ಒಂದು ಎಕರೆಯಲ್ಲಿ ಡ್ರ್ಯಾಗನ್ ಹಣ್ಣು ಬೆಳೆಯಲು 76,076 ರೂ. ಸಾವಿರ ಕೂಲಿ ಹಣ ಹಾಗೂ ಸಾಮಾಗ್ರಿ ವೆಚ್ಚಕ್ಕೆ 49,000 ರೂ ನೀಡಲಾಗಿತ್ತು. ಒಟ್ಟು ರೂ 1,24,076 ರೂ. ಅನುದಾನ ಪಡೆದುಕೊಂಡು ಪ್ರಸಕ್ತ ಸಾಲಿನಲ್ಲಿ ರೂ 60,000 ರಿಂದ‌ 70,000 ಸಾವಿರ ಡ್ರ್ಯಾಗನ್ ಹಣ್ಣಿನಿಂದ ಆದಾಯ ಗಳಿಸಿಕೊಂಡಿದ್ದಾರೆ.

A farmer from Raichur raised dragon fruit crop under Narega grant

ಸ್ವತಃ ಮಾರಟ:

ತನ್ನ ತೋಟದಲ್ಲಿ ಬೆಳೆದ ಡ್ರ್ಯಾಗನ್ ಹಣ್ಣುಗಳನ್ನು ಸ್ವತಃ ಮನೆಯವರಿಂದ ಹಣ್ಣುಗಳನ್ನು ಕಿತ್ತುಕೊಂಡು ಹೋಗಿ ರಾಯಚೂರಿನ ಹಣ್ಣಿನ ವ್ಯಾಪಾರಿಗಳ ಹತ್ತಿರ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ.

ಈ ಬಗ್ಗೆ ಮಾತನಾಡಿದ ಭೋಳಮಾನದೊಡ್ಡಿ ರೈತ ಗೋವಿಂದ, 'ಬಿಜನಗೇರಾ ಗ್ರಾಪಂನಿಂದ ಅನುದಾನದಲ್ಲಿ ಡ್ರ್ಯಾಗನ್ ಬೆಳೆ ಬೆಳೆಯಲಾಗಿದೆ. 400 ಕಂಬಗಳನ್ನು ಹಾಕಿದ್ದು, ಪ್ರತಿಯೊಂದ ಕಂಬಕ್ಕೆ 4 ಸಸಿಗಳಂತೆ ಒಟ್ಟು 1600 ಸಸಿಗಳನ್ನು ನೆಡಲಾಗಿದೆ. ರೂ 70,000/- ಆದಾಯ ಗಳಿಕೆಯಾಗಿದೆ ಮುಂದಿನ ವರ್ಷ ಹೆಚ್ಚು ಫಲ ನೀರಿಕ್ಷೆಯಲ್ಲಿದ್ದೇನೆ. ಗ್ರಾಪಂ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆಯಂತೆ ಇದು ಸಾಧ್ಯವಾಗಿದೆ' ಎಂದರು.

ರಾಯಚೂರು ತಾಪಂ ಇಒ ಚಂದ್ರಶೇಖರ ಪವಾರ್ ಮಾತನಾಡಿ, 'ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವ್ಯಕ್ತಿಗತ ಕಾಮಗಾರಿಗಳಡಿ ಹೆಚ್ಚು ಅದ್ಯತೆ ನೀಡುತ್ತಿದ್ದು, ರೈತರು ಯೋಜನೆಯ ಅನುದಾನ ಪಡೆದುಕೊಳ್ಳಬಹುದಾಗಿದೆ' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+