ಮೈಸೂರು: ಕೆಂಪುಮೂತಿ ಹುಳದ ಕಾಟಕ್ಕೆ ಸೊರಗುತ್ತಿವೆ ತೆಂಗಿನ ಮರಗಳು, ಇದನ್ನು ನಿಯಂತ್ರಿಸುವ ವಿಧಾನಗಳನ್ನು ತಿಳಿಯಿರಿ
ಮೈಸೂರು, ಆಗಸ್ಟ್, 14: ಅದ್ಯಾಕೋ ಗೊತ್ತಿಲ್ಲ ರೈತರಿಗೆ ತೊಂದರೆಗಳು ಮಾತ್ರ ತಪ್ಪುತ್ತಿಲ್ಲ. ಅದರಲ್ಲೂ ಬೆಳೆದ ಬೆಳೆಗೆ ಒಂದಲ್ಲ ಒಂದು ರೀತಿಯಲ್ಲಿ ಕೀಟಗಳು, ಹುಳುಗಳೆಲ್ಲವೂ ಶತ್ರುಗಳಾಗಿ ಪರಿಣಮಿಸುತ್ತಿವೆ.
ಇದೀಗ ತೆಂಗು ಬೆಳೆಗಾರರು ಕಷ್ಟದಲ್ಲಿದ್ದಾರೆ. ಕಾಡುವ ರೋಗ ಮತ್ತು ಕೀಟಗಳ ಹಾವಳಿಯಿಂದ ತಪ್ಪಿಸಿ ತೆಂಗಿನ ಗಿಡಗಳನ್ನು ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ಗಿಡವನ್ನು ಮರವಾಗಿ ಬೆಳೆಸುವ ಹೊತ್ತಿಗೆ ರೈತನಿಗೆ ಸಾಕು ಸಾಕಾಗಿಬಿಡುತ್ತದೆ. ಈ ವೇಳೆಯಲ್ಲಿ ಮರಕ್ಕೆ ರೋಗ ಬಂದರೆ ಅಥವಾ ಕೀಟಗಳು ಬಾಧಿಸಿ ಅದು ಸತ್ತು ಹೋದರೆ ರೈತ ಅಷ್ಟು ದಿನ ಕಷ್ಟಪಟ್ಟು ಬೆಳೆಸಿದ ಮರ ಮತ್ತು ಮಾಡಿದ ಖರ್ಚು ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.
ಈ ಬಾರಿಯೂ ತೆಂಗು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಅವರನ್ನು ಕೆಂಪುಮೂತಿ ಹುಳ ಇನ್ನಿಲ್ಲದಂತೆ ಕಾಡಿದೆ. ಇದಕ್ಕೆ ಕಾರಣ ಮುಂಗಾರು ಮಳೆ ವಿಳಂಬ, ಹವಾಮಾನ ವೈಪರೀತ್ಯ ಎಂದು ಹೇಳಲಾಗುತ್ತಿದೆ. ಈ ಹುಳ ಕಡಿದ ತೆಂಗಿನ ಗರಿಗಳು ಹಳದಿಯಾಗಿದ್ದು, ಕೆಲವೊಮ್ಮೆ ಬಾಡಿರುತ್ತವೆ. ತೀವ್ರತೆ ಹೆಚ್ಚಾದಲ್ಲಿ ಅರ್ಧಕ್ಕೆ ಮುರಿದಿರುತ್ತದೆ.
ರೋಗ ತೊಲಗಿಸುವ ವಿಧಾನ
ಈ ಹಂತದಲ್ಲಿ ಸೂಕ್ಷವಾಗಿ ಗಮನಿಸಿದರೆ ಗರಿಗಳ ಕೆಳಗಿನ ಭಾಗದಲ್ಲಿ ರಂಧ್ರ ಅಥವಾ ಕೆಲವೊಮ್ಮೆ ಮೇಲ್ಭಾಗದಲ್ಲಿ ಅಂದರೆ ಗರಿಗಳ ಬುಡಭಾಗದಿಂದ ಕೆಂಪು ಕಪ್ಪು ಮಿಶ್ರಿತ ರಸ ಸೋರುತ್ತಿರುತ್ತದೆ. ರಂಧ್ರಗಳು ಸ್ಪಷ್ಟವಾಗಿದ್ದರೆ, ಅದರಿಂದ ಹೊಟ್ಟು ಉದುರುತ್ತಿರುತ್ತದೆ. ಈ ಹಂತದಲ್ಲೂ ಗಮನಿಸಿ, ನಿರ್ವಹಿಸದೇ ಹೋದರೆ, ಸುಳಿ ಮುರಿದು ಬೀಳುವ ಸಾಧ್ಯತೆಯಿದೆ. ಆಗ ಹುಳುವಿನ ಕಾಟವಿರುವುದು ನಮಗೆ ಖಾತ್ರಿಯಾಗುತ್ತದೆ.
ಸುಳಿ ಮುರಿದು ಬಿದ್ದ ಮರಗಳನ್ನು ತುಂಡಾಗಿ ಕತ್ತರಿಸಿ ಸಂಪೂರ್ಣವಾಗಿ ಸುಟ್ಟುಹಾಕುವುದು, ಇಲ್ಲವೆ 5-6 ಅಡಿ ಆಳವಾದ ಗುಂಡಿ ತೆಗೆದು ಅದರಲ್ಲಿ ಈ ತುಂಡುಗಳನ್ನು ಹಾಕಿ ಮೇಲೆ ಕಲ್ಲು ಸುಣ್ಣ, ಬ್ಲೀಚಿಂಗ್ ಪುಡಿ ಹಾಕಿ, ನಂತರ ಮಣ್ಣಿನಿಂದ ಮುಚ್ಚಬೇಕು. ಇಲ್ಲವಾದರೆ, ಅದರ ಕಾಂಡದಲ್ಲಿ ಅಭಿವೃದ್ಧಿ ಹೊಂದಿದ ಹುಳುಗಳು ಊರೆಲ್ಲಾ ಹರಡುತ್ತವೆ ಎಂಬುದನ್ನು ಮರೆಯಬಾರದು.

ಮರದ ರಂಧ್ರಗಳಲ್ಲಿರುವ ಹುಳುಗಳು
ಇನ್ನು ರಸ ಸೋರುತ್ತಿರುವ ಅಥವಾ ಹೊಟ್ಟು ಉದುರುತ್ತಿರುವ ರಂಧ್ರಗಳಿಗೆ ಒಂದು ತಂತಿ ಅಥವಾ ಕಡ್ಡಿ ಇಲ್ಲವೇ ದೊಡ್ಡದಿದ್ದರೆ ಕೈ ಹಾಕಿ ಒಳಗಿರುವ ಮರಿಹುಳುಗಳು, ಕೋಶಗಳು, ದುಂಬಿಗಳು ಮತ್ತು ಮೂತಿಹುಳುಗಳನ್ನು ಹೊರಗೆ ತೆಗೆದು ನಾಶಪಡಿಸಿ. ನಂತರ ರಂಧ್ರವನ್ನು ಸ್ವಚ್ಚಗೊಳಿಸಬೇಕು. ಬಳಿಕ ಆ ರಂಧ್ರಕ್ಕೆ ಫಿಪ್ರೋನಿಲ್ ಹರಳುಗಳನ್ನು 5-10 ಗ್ರಾಂ, ಅಥವಾ ಆ ರಂಧ್ರದ ವಿಸ್ತೀರ್ಣಕ್ಕನುಗುಣವಾಗಿ 25-30 ಗ್ರಾಂಗಳವರೆಗೆ ಹೆಚ್ಚಿಸಿ, ಹಾಕಬೇಕು.
ಒಂದು ವೇಳೆ ಫಿಪ್ರೋನಿಲ್ ಹರಳುಗಳು ದೊರಕದಿದ್ದರೆ, ಇಮಿಡಾಕ್ಲೋಪ್ರಿಡ್ 10 ಮಿಲಿ ಅಥವಾ ಸ್ಪೆನೋಸಾಡ್ 10 ಮಿಲಿ ಔಷಧವನ್ನು ಪ್ರತೀ ಲೀಟರ್ ನೀರಿಗೆ ಬೆರೆಸಿ. ಆ ದ್ರಾವಣವನ್ನು ನೇರವಾಗಿ ಹೋಗುವುದಿದ್ದರೇ ರಂಧ್ರದ ಒಳಗೆ ಸುರಿಯಬೇಕು. ಇಲ್ಲವಾದರೆ ಹತ್ತಿಯ ಬಟ್ಟೆ ಅಥವಾ ಗ್ಯಾರೇಜ್ ವೇಸ್ಟ್ ಬಟ್ಟೆಯಲ್ಲಿ ಅದ್ದಿ, ಅದನ್ನು ಒಳಗೆ ಸೇರಿಸಬೇಕು. ನಂತರ ಆ ರಂಧ್ರವನ್ನು ಹಸಿ ಸಗಣಿಯಿಂದ ಮುಚ್ಚಬೇಕು.
ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಅಗತ್ಯ
ಸಗಣಿಗೆ ಕ್ಲೋರೋಫೈರಿಫಾಸ್ ಮತ್ತು ಸಿಒಸಿ ಬೆರೆಸಿದರೇ ಉತ್ತಮ. ಈ ರಂಧ್ರದಿಂದ ಮತ್ತೆ ರಸ ಸುರಿಯುತ್ತಿದ್ದರೆ, 1-4 ವಾರದ ನಂತರ ಇದೇ ಪ್ರಕ್ರಿಯೆಯನ್ನು ಪುನರಾವರ್ತಿಸಬೇಕು. ರಸ ಸೋರುವುದು ನಿಂತ ಮೇಲೆ ಮತ್ತೊಮ್ಮೆ ರಂಧ್ರವನ್ನು ಸ್ವಚ್ಚ ಮಾಡಿ, ಸಿಮೆಂಟ್ ಕಾಂಕ್ರೀಟ್‌ನಿಂದ ಮುಚ್ಚಬೇಕಾಗುತ್ತದೆ.
ಮುನ್ನೆಚ್ಚರಿಕಾ ಕ್ರಮವಾಗಿ, ಪ್ರತೀ ಲೀಟರ್ ನೀರಿಗೆ 2.5 ಗ್ರಾಂ ಥಯೋಮೆಥಾಕ್ಸಾಮ್ ಅಥವಾ ಎಮಾಮೆಕ್ಟೀನ್ ಬೆಂಜೋಯೇಟ್ ಹರಳುಗಳನ್ನು ಕರಗಿಸಿ, ಸುಳಿಯ ಕೆಳಗಿರುವ ಗರಿಗಳಲ್ಲಿ ಹನಿ ಹನಿಯಾಗಿ ಬೀಳುವಂತೆ ಹಾಕಬೇಕು. ಒಂದು ಅಥವಾ ಎರಡು ಲೀಟರ್ ಪ್ಲಾಸ್ಟಿಕ್ ಬಾಟಲಿಗಳಿಗೆ, ಮೇಲೆ ಮತ್ತು ಕೆಳಗೆ ಸಣ್ಣ ಸೂಜಿಮೊನೆಯಷ್ಟು ರಂಧ್ರ ಮಾಡಿ, ಸುಳಿಯ ಪಕ್ಕದ ಗರಿಗಳ ಕಂಕುಳಲ್ಲಿ ಇಡಬೇಕು.
ಕೆಂಪುಮೂತಿ ಹುಳುಗಳ ಮೋಹಕ ಬಲೆಗಳನ್ನು ತೋಟದ ಹೊರಗೆ ನೆರಳಿನಲ್ಲಿ ಕಟ್ಟಬೇಕು. ತೆಂಗಿನ ಮರಗಳಿಗೆ ಉಳುಮೆ ಮಾಡುವ ಸಂದರ್ಭದಲ್ಲಿ ಅಥವಾ ಕಾಯಿ ಎಳನೀರು ಕೀಳುವ ಸಂದರ್ಭದಲ್ಲಿ ಗಾಯವಾಗದಂತೆ ಎಚ್ಚರವಹಿಸುವುದು ಅತ್ಯವಶ್ಯಕ. ಬುಡದಿಂದ ಕನಿಷ್ಠ 2-3 ಅಡಿ ಆಳವಾಗಿ ಉಳುಮೆ, ಗುಂಡಿಗಳನ್ನು ತೆಗೆಯದೇ ಇರುವುದು ಬಹಳ ಒಳ್ಳೆಯದು.
ಕೀಟ ಶಾಸ್ತ್ರಜ್ಞರು ನೀಡುವ ಸಲಹೆ ಏನು?
ಈಗಾಗಲೇ ಮೈಸೂರು ಜಿಲ್ಲೆಯಲ್ಲಿ ಕೀಟ ಶಾಸ್ತ್ರಜ್ಞ ಡಾ.ಜಿ.ಕೆ.ರಾಮೇಗೌಡ ವರುಣ, ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಎಸ್.ಜೆ.ಹೇಮಂತ್ ಜಂಟಿ ಕ್ಷೇತ್ರ ಭೇಟಿ ಮಾಡಿ ತೆಂಗು ಬೆಳೆದ ಕೆಂಪುಮೂತಿ ಹುಳುವಿನ ಬಾಧೆ ಗುರುತಿಸುವ ಲಕ್ಷಣಗಳು ಹಾಗೂ ನಿರ್ವಹಣಾ ಮತ್ತು ನಿವಾರಣಾ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡುವ ಕೆಲಸ ಮಾಡಿದ್ದಾರೆ. ಕೀಟ ಶಾಸ್ತ್ರಜ್ಞರಾದ ಡಾ.ಜಿ.ಕೆ.ರಾಮೇಗೌಡ ಅವರು ಹೇಳುವುದು ಏನು ಗೊತ್ತಾ?
ಕೊಟ್ಟಿಗೆ ಗೊಬ್ಬರ-50 ಕೆ.ಜಿ. ಶುದ್ದವಾದ ಬೇವಿನ ಹಿಂಡಿ-5 ಕೆ.ಜಿ., ಯೂರಿಯಾ-1 ಕೆ.ಜಿ., ಸಿಂಗಲ್ ಸೂಪರ್ ಪಾಸ್ಪೇಟ್-2 ಕೆ.ಜಿ., ಪೊಟ್ಯಾಷ್-2 ಕೆ.ಜಿ., ಜಿಪ್ಸಂ-1 ಕೆ.ಜಿ., ಬೋರಾಕ್ಸ್-50 ಗ್ರಾಂ, ಮೆಗ್ನೀಶಿಯಂ ಸಲ್ಪೇಟ್-500 ಗ್ರಾಂ, ಜಿಂಕ್ ಸಲ್ಪೇಟ್-100 ಗ್ರಾಂ ಈ ಎಲ್ಲಾ ಪೋಷಕಾಂಶಗಳನ್ನು ಗಿಡದಿಂದ ಮೂರು ಅಡಿ ಅಂತರದಲ್ಲಿ ಸುತ್ತಲೂ ಪಾತಿ ಮಾಡಿ ಹಾಕಬೇಕು. ಇದರಿಂದ ತೆಂಗಿನ ಮರಗಳು ಸದೃಢವಾದ ಬೆಳವಣಿಗೆ ಹೊಂದುತ್ತವೆ. ಕೀಟ ರೋಗ ಬಾಧೆ ತಾಳಿಕೊಳ್ಳುವ ಶಕ್ತಿ ಅವುಗಳಿಗೆ ಬರುತ್ತವೆ. ಸಾಮೂಹಿಕವಾಗಿ ಗ್ರಾಮದ ಎಲ್ಲ ತೆಂಗಿನ ಬೆಳೆಗಾರರು ಒಟ್ಟಾಗಿ ಸೇರಿ ಕೆಂಪುಮೂತಿ ಹುಳದ ಬಾಧೆಯನ್ನು ತಡೆಯಲು ಕ್ರಮ ವಹಿಸುವಂತೆ ಸಲಹೆ ನೀಡಿದ್ದಾರೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications